ಮಹಿಳೆಯರೇ, ಸ್ವಂತ ಉದ್ಯೋಗದ ಕನಸು ಕಾಣುತ್ತೀರಾ? ಬಂಡವಾಳದ ಕೊರತೆಯಿಂದ ನಿಮ್ಮ ಕನಸು ನನಸಾಗದೇ ಇದೆಯೇ?ಚಿಂತಿಸಬೇಡಿ! ಮೋದಿ ಸರ್ಕಾರದಿಂದ ಮಹಿಳಾ ಸ್ವ-ಉದ್ಯೋಗಕ್ಕೆ 3 ಲಕ್ಷ ರೂ. ಸಹಾಯಧನ ಲಭ್ಯವಿದೆ. ಯಾವ ಯೋಜನೆ ಎಂದು ತಿಳಿಯಬೇಕೇ? ಹಾಗಿದ್ದರೆ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು(Central Govt) ದೇಶದ ಮಹಿಳೆಯರ ಸಬಲೀಕರಣಕ್ಕಾಗಿ ಸುಮಾರು ವಿಶಿಷ್ಟವಾದ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಮೂಲ ಉದ್ದೇಶ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬುದಾಗಿದೆ. ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೆ ಅನುಕೂಲವಾಗುವಂತೆ ಸರ್ಕಾರವು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.
ಯಾವ ಹಿನ್ನೆಲೆ ನೋಡದೆ ಸಾಲ ನೀಡುತ್ತಾರೆ :
ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಯೋಜನೆ ಮೂಲಕ ಮಹಿಳೆಯರು ಈಗಾಗಲೇ ಉದ್ಯೋಗವನ್ನು ಪ್ರಾರಂಭಿಸಲು ಆರ್ಥಿಕ ನೆರವು ಬಯಸುತ್ತಾರೆ. ಈ ಯೋಜನೆಗಳು ಮಹಿಳೆಯರ ಜೀವನಮಟ್ಟವನ್ನು ಉನ್ನತೀಕರಿಸಲು ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಮಹತ್ತರ ಕೊಡುಗೆ ನೀಡುತ್ತವೆ. ಯಾವುದೇ ಬಂಡವಾಳ (investment) ಇಲ್ಲದೆ ಯಾವುದೇ ಹಿನ್ನೆಲೆಯೂ ಇಲ್ಲದೆ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ 3 ಲಕ್ಷ ರೂಪಾಯಿಗಳ ವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Govt Loan) ನೀಡತ್ತದೆ. ಈ ಯೋಜನೆ ಯಾವುದು ಎಂದು ಕೇಳುತ್ತೀರಾ? ಇಲ್ಲಿದೆ ಅದಕ್ಕೆ ಉತ್ತರ- ‘ಉದ್ಯೋಗಿನಿ ಯೋಜನೆ(Udyogini Yojana)’, ಹೌದು ಉದ್ಯೋಗಿನಿ ಯೋಜನೆಯಡಿ ಕೇಂದ್ರ ಸರ್ಕಾರ 3 ಲಕ್ಷದ ವರೆಗೂ ಸಾಲ ನೀಡುತ್ತದೆ. ಬನ್ನಿ ಹಾಗಿದ್ರೆ, ಈ ಯೋಜನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಇಲ್ಲಿದೆ:
ಉದ್ಯೋಗಿನಿ ಯೋಜನೆ(Udyogini Yojana): ಕೇಂದ್ರದಿಂದ ಮಹಿಳಾ ಉದ್ಯಮಿಗಳಿಗೆ ಸ್ವಾವಲಂಬನೆಯ ಸ್ಪರ್ಶ
ಮಹಿಳಾ ಸಬಲೀಕರಣದ ಗುರಿ ಸಾಧಿಸಲು, ಕೇಂದ್ರ ಸರ್ಕಾರವು ಉದ್ಯೋಗಿನಿ ಯೋಜನೆ ರೂಪಿಸಿದೆ. ಈ ಯೋಜನೆಯು ಮಹಿಳಾ ವ್ಯಾಪಾರಿಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಲು ಮತ್ತು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ.
ಕೇಂದ್ರ ಮಹಿಳಾ ಅಭಿವೃದ್ಧಿ ನಿಗಮದಿಂದ(Central Women Development Corporation) ಜಾರಿಗೊಳಿಸಲಾಗಿದೆ ಈ ಯೋಜನೆಯು ಬಡ ಮಹಿಳಾ ವ್ಯಾಪಾರಿಗಳಿಗೆ ನೆರವು ನೀಡಿದೆ. ಈ ಸಾಲದ ಮೂಲಕ, ಮಹಿಳೆಯರು ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ಯಶಸ್ವಿಯಾಗಿ ನಡೆಸಲು ಅಗತ್ಯವಾದ ಬಂಡವಾಳವನ್ನು ಪಡೆಯಬಹುದು.
ಈ ಯೋಜನೆಯು ನಿಮಗೆ 3 ಲಕ್ಷ ರೂವರೆಗೆ ಸಾಲ ನೀಡುವ ಮೂಲಕ ನಿಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಿ. 18 ರಿಂದ 55 ವರ್ಷದ ಮಹಿಳೆಯರು ಯಾವುದೇ ಶ್ಯೂರಿಟಿ ಇಲ್ಲದೆ ಈ ಸಾಲ ಪಡೆಯಬಹುದು. ಈ ಬಡ್ಡಿ ರಹಿತ ಸಾಲವನ್ನು ಪಡೆಯಲು ಕೆಲವು ಷರುತ್ತುಗಳು ಇವೆ, ಆದರೆ ಎಲ್ಲಾ ಬ್ಯಾಂಕ್‌ಗಳು ಹಾಗೆ ಮಾಡುವುದಿಲ್ಲ. ಈ ಸಾಲ ಪಡೆಯಲು ಯಾವುದೇ ಆಧಾರ ಇಡುವ ಅಗತ್ಯವಿಲ್ಲ ಮತ್ತು ಯಾವುದೇ ಬ್ಯಾಂಕ್ ಸಾಲ(Bank Loan) ನೀಡಲು ಶುಲ್ಕವನ್ನು ವಿಧಿಸುವುದಿಲ್ಲ.
ಉದ್ಯೋಗಿನಿ ಯೋಜನೆಯು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್(Punjab and Sindh Bank), ಸಾರಸ್ವತ್ ಬ್ಯಾಂಕ್(Saraswat Bank) ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ(Karnataka State Women’s Development Corporation) ಸೇರಿದಂತೆ ಹಲವಾರು ವಾಣಿಜ್ಯ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳ ಇದಕ್ಕೆ ಹೆಚ್ಚಿನ ಬೆಂಬಲನೀಡುತ್ತದೆ. ಈ ಸಂಸ್ಥೆಗಳು ಮಹಿಳೆಯರಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ ಕಾರ್ಯಕ್ರಮ(professional development training programs)ಗಳನ್ನು ಸಂಘಟಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ. ಜೊತೆ ಜೊತೆಗೆ ಆರ್ಥಿಕ ಸಹಾಯವನ್ನೂ ಸಹ ನೀಡುತ್ತದೆ. ಹಾಗಿದ್ದರೆ, ಈ ಯೋಜನೆಯ ಪ್ರಯೋಜನೆಗಳನ್ನೂ ಪಡೆಯಲು ಬೇಕಾದ ಅರ್ಹತೆಗಳು, ಬೇಕಾಗಿರುವ ದಾಖಲೆಗಳು, ಮತ್ತು ಅರ್ಜಿ ಹೀಗೆ ಸಲ್ಲಿಸಬೇಕು ಎಂದೂ ತಿಳಿಯಿರಿ
ಅರ್ಹತೆಯ ಅಂಶಗಳು:
ಕುಟುಂಬದ ವಾರ್ಷಿಕ ಆದಾಯ ರೂ.1.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ (ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇಲ್ಲ)
ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ನಡುವೆ
ಯಾವುದೇ ವ್ಯಾಪಾರ ಮಾಡುವ ಮಹಿಳೆಯರು ಅರ್ಹರು
ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು.
ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್(Aadhar card)
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ,
ಜನ್ಮ ಪ್ರಮಾಣಪತ್ರ(Birth Certificate)
ವಿಳಾಸ ಪುರಾವೆ (Address proof)
ಆದಾಯ ಪ್ರಮಾಣಪತ್ರ(Income Certificate)
ಪಡಿತರ ಚೀಟಿ(Ration card)
ಬಿಪಿಎಲ್ ಕಾರ್ಡ್(BPL Card)
ಜಾತಿ ಪ್ರಮಾಣ ಪತ್ರ(Caste income Certificate)
ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತು ಇತರೆ ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳು (Bank pass book and bank details)
ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯುವುದು ಹೇಗೆ?:
ಬ್ಯಾಂಕ್ ಮೂಲಕ:
ನಿಮ್ಮ ಹತ್ತಿರದ ಅರ್ಹ ಬ್ಯಾಂಕ್‌ಗೆ ಭೇಟಿ ನೀಡಿ.
ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿ.
ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ಬ್ಯಾಂಕ್ ನಿಂದ ಫಾರ್ಮ್ ಪಡೆದು ಪೂರ್ಣಗೊಳಿಸಿ.
ಪರಿಶೀಲನೆಯ ನಂತರ ಸಾಲ ಮಂಜೂರಿ ಮಾಡಲಾಗುತ್ತದೆ.
ಆನ್‌ಲೈನ್ ಮೂಲಕ:
ಕೆಲವು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸೌಲಭ್ಯ ಲಭ್ಯ.
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ದಾಖಲೆಗಳನ್ನು ಅಪ್ಲೋಡ್ ಮಾಡಿ.
ಫಾರ್ಮ್ ಸಲ್ಲಿಸಿ.
ಪರಿಶೀಲನೆಯ ನಂತರ ಸಾಲ ಮಂಜೂರಿ ಮಾಡಲಾಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಮತ್ತಷ್ಟು ಏರಿಕೆಯಾದ ಚಿನ್ನದ ಬೆಲೆ, ಇಂದು ಬರೋಬ್ಬರಿ 1300 ರೂಪಾಯಿ ಏರಿಕೆ, ಇಂದಿನ ಚಿನ್ನದ ಬೆಲೆ ಇಲ್ಲಿದೆ
- ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ, New Ration Card Status Karnataka 2024 @ahara.kar.nic.in
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.