ಯುಗಾದಿ ಹಬ್ಬದಿಂದ ಈ ರಾಶಿಯವರಿಗೆ ಬಂಪರ್ ಅದೃಷ್ಟ, ಹಣ ಹರಿದು ಬರಲಿದೆ, ವ್ಯಾಪಾರದಲ್ಲಿ ಭರ್ಜರಿ ಲಾಭ!

Picsart 25 03 20 23 17 39 336

WhatsApp Group Telegram Group

ಯುಗಾದಿ 2025 ಸಂವತ್ಸರ ಭವಿಷ್ಯ: ಹೊಸ ವರ್ಷ, ಹೊಸ ಅವಕಾಶಗಳು, ಹೊಸ ಸವಾಲುಗಳು!

ಭಾರತೀಯರಿಗೆ ಯುಗಾದಿಯೇ (Ugadi) ಹೊಸ ವರ್ಷವಾಗಿದೆ. ಇದು ಹಬ್ಬ ಮಾತ್ರವಲ್ಲ, ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುವ ದಿನ. ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತಿದ್ದು, ಹೊಸ ನಿರೀಕ್ಷೆಗಳು, ಬದಲಾವಣೆಗಳು, ಸವಾಲುಗಳು ಮತ್ತು ಯಶಸ್ಸುಗಳು ಎದುರಾಗಲಿವೆ. ಭಾರತೀಯ ಜ್ಯೋತಿಷ್ಯ ಪ್ರಕಾರ, ಗ್ರಹಗಳ ಸಂಚಾರ, ಗುರುಬಲ, ಶನಿಯ ಚಲನೆ ಮೊದಲಾದವು ನಮ್ಮ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ. ಈ ವರ್ಷ ಯಾರು ಅದೃಷ್ಟವನ್ನು ಕಾಣಲಿದ್ದಾರೆ? ಯಾರಿಗೆ ಸವಾಲುಗಳು (Challenges) ಎದುರಾಗಲಿವೆ? ಯಾವ ರಾಶಿಗೆ ಶುಭ ಯೋಗವಿದೆ? ಯಾರು ಎಚ್ಚರ ವಹಿಸಬೇಕಾಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಯುಗಾದಿ ಹೊಸ ಪ್ರಾರಂಭದ ಸಂಕೇತ. ಹಳೆಯದನ್ನು ತೊರೆದು ಹೊಸದನ್ನು ಬರಮಾಡಿಕೊಳ್ಳಲು, ಹೊಸ ಸಂಕಲ್ಪಗಳನ್ನು ರೂಪಿಸುವ ಸಮಯ. ಭಾರತೀಯ ಜ್ಯೋತಿಷ್ಯದಲ್ಲಿ (Indian astrology) ಯುಗಾದಿಯ ದಿನವೇ ಹೊಸ ಸಂವತ್ಸರದ ಆರಂಭ ಎಂದು ಪರಿಗಣಿಸಲಾಗುತ್ತದೆ. ಇದು ಗ್ರಹಗತಿಗಳ ಪ್ರಭಾವದಿಂದ ಪ್ರತಿಯೊಬ್ಬರ ಜೀವನದಲ್ಲಿ ಹಿತ-ಅನಿಷ್ಠ ಫಲ ನೀಡುತ್ತದೆ. ಈ ವರ್ಷ ಶನಿಯ ಸಾಡೇಸಾತಿ, ಗುರು ಬಲ, ರಾಹು-ಕೇತು ಸಂಚಾರ ಇತ್ಯಾದಿಗಳಿಂದ ವಿವಿಧ ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುವ ನಿರೀಕ್ಷೆಯಿದೆ.

ಮೇಷ (Aries):

ಈ ವರ್ಷ ಶನಿಯ ಸಾಡೇಸಾತಿ ಪ್ರಾರಂಭವಾಗುತ್ತಿರುವುದರಿಂದ ಸಮಸ್ಯೆಗಳ ಪ್ರಾರಂಭವಾಗಲಿವೆ.  ಆರೋಗ್ಯ, ಆರ್ಥಿಕ ವ್ಯಯ, ವೃತ್ತಿಯ ಒತ್ತಡ ಇತ್ಯಾದಿ ಸಮಸ್ಯೆಗಳು ಎದುರಾಗಬಹುದು. ಕಣ್ಣು ಮತ್ತು ಕಾಲಿನ ಭಾಗದಲ್ಲಿ ತೊಂದರೆಗಳ ಸಾಧ್ಯತೆ. ಕೆಲಸದಲ್ಲಿ ಅಲೆದಾಟ, ಕೆಲವರಿಗೆ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ. ಆದರೆ ಗುರುಬಲದಿಂದ ಸ್ವಲ್ಪ ಅನುಕೂಲಗಳಿದ್ದು, ಶುಭ ಕಾರ್ಯಗಳು ನಡೆಯಬಹುದು. ಹಣಕಾಸು ವ್ಯವಸ್ಥೆ (Financial system) ಸ್ಥಿರವಾಗಿರಲಿದ್ದು, ವಿದೇಶ ವ್ಯವಹಾರ, ಶೇರು ಮಾರುಕಟ್ಟೆ ಮೂಲಕ ಲಾಭದ ಅವಕಾಶಗಳಿವೆ. ಗೃಹ ಮತ್ತು ವಾಹನ ಖರೀದಿಗೆ ಯೋಗವಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರರ ಜೊತೆ ಸಂಬಂಧ ಉತ್ತಮಗೊಳ್ಳಲಿದೆ.

ವೃಷಭ (Taurus):

ಈ ವರ್ಷ ಬೇವಿಗಿಂತ ಬೆಲ್ಲ ಹೆಚ್ಚು. ವೃತ್ತಿಯಲ್ಲಿ ಬಡ್ತಿ, ಅಧಿಕಾರ ಯೋಗ, ರಾಜಕೀಯ ಅಂಗಳದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಮೇ ನಂತರ ಗುರುಬಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವಿವಾಹದ ಯೋಗ ಪ್ರಬಲವಾಗಿದೆ. ಸರ್ಕಾರಿ ಉದ್ಯೋಗಿಗಳಿಗೆ (Government jobs) ಹೆಚ್ಚಿನ ಲಾಭ ದೊರಿಯಲಿದೆ. ಆದರೆ ವರ್ಷ ಮಧ್ಯದಲ್ಲಿ ಮಕ್ಕಳ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು. ಅಕ್ಟೋಬರ್ ನಂತರ ಸಹೋದರರ ಸಹಕಾರ ದೊರಕಲಿದೆ. ಜನವರಿ ನಂತರ ಹೆಚ್ಚಿನ ಆರ್ಥಿಕ ಲಾಭ ದೊರೆಯಲಿದ್ದು, ಆರೋಗ್ಯ ಸುಧಾರಣೆಯಾಗಲಿದೆ. ಇನ್ನು ಈ ರಾಶಿಯವರು ಎಲ್ಲಾ ಹೊಸ ಯೋಜನೆಗಳಲ್ಲಿಯೂ ಲಾಭ ಪಡೆದು ಯಶಸ್ಸುಗಳಿಸಲಿದ್ದಾರೆ.

ಮಿಥುನ (Gemini):

ಹಣಕಾಸಿನ ತೊಂದರೆಗಳ ಜೊತೆಗೆ ವೃತ್ತಿಯಲ್ಲಿ ಶನಿಯ ಪ್ರಭಾವದಿಂದ ಅಲೆದಾಟ. ಪ್ರಾರಂಭದ ಮೂರು ತಿಂಗಳು ಶುಕ್ರನ ಅನುಕೂಲದಿಂದ ಯಶಸ್ಸು. ಕಲಾವಿದರಿಗೆ ವಿಶೇಷ ಅವಕಾಶಗಳು. ವಾಹನ ಮತ್ತು ಗೃಹ ಖರೀದಿ ಯೋಗವಿದ್ದು,  ದುಶ್ಚಟಗಳಿಗೆ (Bad habits) ಬಲಿಯಾಗುವ ಸಾಧ್ಯತೆಯಿದೆ. ಇನ್ನು,  ಕುಟುಂಬದಲ್ಲಿ ಮಂಗಳಕಾರ್ಯಗಳು ನಡೆಯಲಿದ್ದು, ವಿವಾಹ ಮತ್ತು ಶುಭಕಾರ್ಯಗಳು ಜರುಗಲಿವೆ. ಹಣಕಾಸಿನ ಸ್ಥಿರತೆ, ಆದರೆ ಅಪರಿಚಿತರ ಮೇಲೆ ಹೆಚ್ಚು ನಂಬಿಕೆ ಇಡಬಾರದು. ಈ ವರ್ಷ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಕರ್ಕಟಕ (Cancer):

ಈ ವರ್ಷ ಹಣಕಾಸು ಮತ್ತು ಆರೋಗ್ಯದ ಚಿಂತೆ ಕಾಡಲಿದೆ. ಹೆಚ್ಚಿನ ವ್ಯಯ, ಕಾಲಿನ ತೊಂದರೆ ಉಂಟಾಗಬಹುದು.  ಪ್ರಾರಂಭದ ಮೂರು ತಿಂಗಳ ಕಾಲ ಶುಕ್ರನ ಅನುಕೂಲದಿಂದ ಭೋಗವೈಭವ, ಆದರೆ ಅಕ್ಟೋಬರ್ ನಂತರ ಗುರುಬಲದಿಂದ ಜೀವನದಲ್ಲಿ ಮಹತ್ತರ ಬದಲಾವಣೆಯಾಗುತ್ತವೆ. ಉನ್ನತ ಸ್ಥಾನ ಮತ್ತು ಹೆಚ್ಚಿನ ಜವಾಬ್ದಾರಿ (responsibility) ದೊರೆಯಲಿದ್ದು,  ದೇಶ-ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ನವೆಂಬರ್ ನಂತರ ಗೃಹ-ವಾಹನ ಖರೀದಿ ಯೋಗವಿದೆ. ಆದರೆ ಮನೆಯಲ್ಲಿ ಒತ್ತಡ, ಆರೋಗ್ಯ ಸಮಸ್ಯೆಗಳು ಕಾಡಬಹುದು.

ಸಿಂಹ (Leo):

ಈ ವರ್ಷ ಸಿಂಹ ರಾಶಿಯವರಿಗೆ ಮಿಶ್ರ ಫಲ. ಮೇ ತಿಂಗಳ ನಂತರ ಗುರುವಿನ ಲಾಭದ ಪ್ರವೇಶದಿಂದ ವೃತ್ತಿ, ವ್ಯಾಪಾರ ಮತ್ತು ಹೂಡಿಕೆ (Investment) ಕ್ಷೇತ್ರಗಳಲ್ಲಿ ಲಾಭವಿದೆ. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದ್ದು, ವಿವಾಹ ಯೋಗ, ಶುಭ ಕಾರ್ಯಗಳು ಸಂಭವಿಸುತ್ತವೆ. ಆದರೆ ಸಪ್ತಮದ ರಾಹು ಮತ್ತು ಜನ್ಮದ ಕೇತು ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ಸಮಸ್ಯೆ ತರುವ ಸಾಧ್ಯತೆ ಇದೆ. ಅಕ್ಟೋಬರ್ ನಂತರ ಹೆಚ್ಚು ವ್ಯಯವಾಗಬಹುದು. ಜನವರಿ ನಂತರ ಪುನಃ ಶುಭಫಲ ದೊರೆಯಲಿದೆ.

ಕನ್ಯಾ (Virgo):

ಈ ವರ್ಷ ಕೆಲವೊಂದು ಸವಾಲುಗಳೂ, ಕೆಲವೊಂದು ಅವಕಾಶಗಳೂ ಒಟ್ಟಿಗೆ ಇರಲಿವೆ. ಮೇ ತಿಂಗಳ ನಂತರ ಗುರು ಬಲ ವೃತ್ತಿಯಲ್ಲಿ ಒಳ್ಳೆಯ ಅವಕಾಶಗಳನ್ನು (Opportunities) ತರುತ್ತದೆ. ಆದರೆ ರಾಹುವಿನ ಪ್ರಭಾವ ಇರುವುದರಿಂದ ದುಡುಕಿನ ನಿರ್ಧಾರಗಳಿಂದ ದೂರವಿರುವುದು ಮುಖ್ಯ. ಕಾಲಿನ ಗಾಯ ಅಥವಾ ತೊಂದರೆಗಳ ಸಾಧ್ಯತೆ ಇದ್ದು ಎಚ್ಚರ ವಹಿಸುವುದು ಉತ್ತಮ. ವಿದೇಶ ಪ್ರಯಾಣದ ಯೋಗದ ಜೊತೆ ಶಾಲಾ ಶಿಕ್ಷಣ ಮತ್ತು ಬೋಧನಾ ಕ್ಷೇತ್ರದಲ್ಲಿ ವಿಶೇಷ ಲಾಭ ದೊರೆಯಲಿದೆ.

ತುಲಾ (Libra):

ಈ ವರ್ಷ ತುಲಾ ರಾಶಿಯವರಿಗೆ ಹೆಚ್ಚು ಅನುಕೂಲವಾಗಲಿದೆ. ಮಂಗಳ ಕಾರ್ಯಗಳು, ಧಾರ್ಮಿಕ ತೀರ್ಥಯಾತ್ರೆ, ವಿದೇಶ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಮೇ 14 ನಂತರ ವೃತ್ತಿಯಲ್ಲಿ ಪ್ರಗತಿ. ಕೃಷಿ, ಜಲಯಾನ, ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ವಿದ್ಯಾರ್ಥಿಗಳಿಗೆ (For students) ಉತ್ತಮ ಅವಕಾಶವಿದ್ದು,  ಜನವರಿ ಬಳಿಕ ಮತ್ತಷ್ಟು ಆರ್ಥಿಕ ಪ್ರಗತಿ ಕಾಣುವಿರಿ.

ವೃಶ್ಚಿಕ (Scorpio):

ಮೇವರೆಗೆ ಗುರುವಿನ ಪ್ರಭಾವದಿಂದ ಲಾಭವಿದ್ದರೂ ಮೇ 14 ನಂತರ ಅಷ್ಟಮ ಗುರುವಿನಿಂದ ಆರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ನಷ್ಟ ತರಬಹುದು. ಅಕ್ಟೋಬರ್ ಬಳಿಕ ಧರ್ಮ ಮತ್ತು ಭಾಗ್ಯಸ್ಥಾನ ಪ್ರವೇಶಿಸುವ ಗುರು, ಜೀವನದಲ್ಲಿ ದೊಡ್ಡ ಬದಲಾವಣೆಗೆ (Big changes) ಕಾರಣವಾಗಬಹುದು. ಬೋಧನಾ ಕ್ಷೇತ್ರ, ಧಾರ್ಮಿಕ ಸೇವೆ, ಕಲಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು, ಕುಟುಂಬದಲ್ಲಿ ಮಂಗಳಕಾರ್ಯ ನೆಡೆಯಲಿವೆ.

ಧನುಸ್ಸು(Sagittarius):

ಧನುಸ್ಸು ರಾಶಿಯವರು ಆರೋಗ್ಯದಲ್ಲಿ ತೀವ್ರ ತೊಂದರೆ ಎದುರಿಸಬೇಕಾಗಬಹುದು, ಅದರಲ್ಲೂ ಪ್ರಾರಂಭದ ಎರಡು ತಿಂಗಳು ಎಚ್ಚರವಹಿಸಬೇಕು. ಮೇ 14ನಂತರ ಗುರುಬಲದಿಂದ ವಿಶೇಷ ಅನುಕೂಲ ಕಾಣಲಾಗುತ್ತದೆ. ವಿವಾಹ ಕಾರ್ಯಗಳು ನಡೆಯಲಿದ್ದು, ವ್ಯಾಪಾರದಲ್ಲಿ ಲಾಭವಾಗಲಿದೆ. ಗೃಹ-ನಿವೇಶನ ಮತ್ತು ವಾಹನ ಖರೀದಿ (Home and vehicle purchases) ಸಾಧ್ಯತೆ ಇದೆ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ. ಆದರೆ ಗೃಹ ಕಲಹಗಳು ಕಾಡಬಹುದು. ವಾಂತಿ – ಭೇದಿ ತೊಂದರೆಗಳು ಆಗಬಹುದಾದ್ದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ನವೆಂಬರ್ ವೇಳೆಗೆ ಶುಕ್ರ-ಬುಧ ಪ್ರಯೋಜನಕಾರಿಯಾಗಿದ್ದು, ವೃತ್ತಿಯಲ್ಲಿ ಲಾಭ ದೊರಕಲಿದೆ. ವಸ್ತ್ರಾಭರಣ ಕ್ಷೇತ್ರದಲ್ಲಿ ಹೆಚ್ಚು ಲಾಭದಾಯಕ ಅವಕಾಶಗಳು (Profitable opportunities) ಸಿಗಬಹುದು. ಕಲಾವಿದರಿಗೆ ಗೌರವ ಹೆಚ್ಚಲಿದೆ. ಜನವರಿಯಿಂದ ಮತ್ತೆ ಗುರುಬಲ ಸಿಕ್ಕು ಜೀವನ ಸುಖಮಯವಾಗಲಿದೆ, ಹಾಗೂ ಆಸೆ-ಆಕಾಂಕ್ಷೆಗಳು ಈಡೇರಲಿವೆ. ನವೆಂಬರ್ ನಂತರ ಹೆಚ್ಚಿನ ಸಮಾಧಾನ ಮತ್ತು ನೆಮ್ಮದಿ ಸಿಗಲಿದೆ.

ಮಕರ (Capricorn):

ಈ ವರ್ಷ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ದೊರೆಯಲಿದೆ. ಮೇ 14ರ ನಂತರ ಆರೋಗ್ಯ ಸಮಸ್ಯೆಗಳು, ಅಧಿಕ ವ್ಯಯ, ಶತ್ರುಗಳ ಸಂಕಟ ಎದುರಾಗಲಿದೆ.  ಕುಟುಂಬದಲ್ಲಿ ಗೊಂದಲಗಳು ಎದುರಾಗಲಿವೆ. ಉದ್ಯೋಗ ಕ್ಷೆತ್ರದಲ್ಲಿ (Educational field) ಹೆಚ್ಚಿನ ಲಾಭ ದೊರೆಯಲಿದೆ. ಇನ್ನು, ಈ ರಾಶಿಯವರಿಗೆ ಜನವರಿಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗಲಿದೆ ಆದರೆ ವೃತ್ತಿಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ.

ಕುಂಭ (Aquarius):

ಕುಂಭ ರಾಶಿಯವರಿಗೆ ಶನೈಶ್ಚರ ಮತ್ತು ರಾಹುವಿನ ಸಂಯೋಗವು ಮಾತಿನ ಬಲವನ್ನು ಕುಂದಿಸಬಹುದು. ಪತ್ರಿಕಾ ಮತ್ತು ಉಪನ್ಯಾಸಕರಿಗೆ ಎಚ್ಚರಿಕೆ ಅಗತ್ಯ. ಕುಟುಂಬ ಕಲಹಗಳು ಉಂಟಾಗಬಹುದು, ಆದರೆ ಈ ರಾಶಿಯವರಿಗೆ ಸಂಚಾರ ಹೆಚ್ಚಾಗುತ್ತದೆ. ಇನ್ನು, ಮೇ 14ರ ಬಳಿಕ ಬುದ್ಧಿಬಲ-ಮನೋಬಲ ಹೆಚ್ಚಾಗಿ, ಬರವಣಿಗೆ, ಅಧ್ಯಯನ, ಸಂಶೋಧನೆಗಳಲ್ಲಿ ನಿರತರಾಗುತ್ತೀರಿ. ಉನ್ನತ ಶಿಕ್ಷಣದಲ್ಲಿ ಯಶಸ್ಸು, ಪ್ರಶಸ್ತಿ-ಪುರಸ್ಕಾರಗಳು ಲಭಿಸಬಹುದು. ಮಕ್ಕಳ ಒಡನಾಟ ಮನಸ್ಸಿಗೆ ಸಂತೋಷ ನೀಡುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು (Good deeds) ನಡೆಯಬಹುದು. ಸಪ್ತಮಸ್ಥ ಕೇತು ದಾಂಪತ್ಯ ಕಲಹಕ್ಕೆ ಕಾರಣವಾಗಬಹುದು, ನಂಬಿದವರಿಂದ ಮೋಸ ಹೋಗುವ ಸಾಧ್ಯತೆಯಿದೆ. ಜನವರಿಯಿಂದ ಗುರುಬಲ ಮರುಕಳಿಸಿ ಶುಭಫಲ ತರುತ್ತದೆ. ಕಳೆದುಹೋದ ನೆಮ್ಮದಿ ಮರಳಿ ಬರಲಿದೆ, ವರ್ಷಾಂತ್ಯದಲ್ಲಿ ಜೀವನ ಸುಖಕರವಾಗಲಿದೆ.

ಮೀನ (Pisces):

ಮೀನ ರಾಶಿಯವರಿಗೆ ಕಾಲಿನ ಸಮಸ್ಯೆಗಳು ಪ್ರಾರಂಭವಾಗಬಹುದು. ಗೃಹ ಅಥವಾ ಆಸ್ತಿಗೆ ಸಂಬಂಧಿತ ಸಮಸ್ಯೆಗಳಿಗೆ ಶುಭಸುದ್ದಿ ಸಿಗಬಹುದು, ಆದರೆ ವ್ಯಯಸ್ಥಾನದಲ್ಲಿರುವ ರಾಹುವಿನ ಪರಿಣಾಮದಿಂದ ಕಣ್ಣು ಮತ್ತು ಕಾಲಿನ ಸಮಸ್ಯೆಗಳು ಉಂಟಾಗಬಹುದು. ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳು ಮಹತ್ವದ ಬದಲಾವಣೆಯನ್ನು ತಂದುಕೊಡಬಹುದು, ನಿರೀಕ್ಷಿಸದ ಶುಭಫಲ ಲಭಿಸಬಹುದು. ಪಂಚಮ ಸ್ಥಾನದಲ್ಲಿರುವ ಗುರುವಿನಿಂದ ಉನ್ನತ ಸ್ಥಾನಮಾನ ಪಡೆಯುವಿರಿ. ಅಧ್ಯಯನ ಹಾಗೂ ಸಂಶೋಧನೆಗೆ ಉತ್ತಮ ಅವಕಾಶಗಳು ದೊರೆಯಬಹುದು. ಪುರಸ್ಕಾರ ಹಾಗೂ ಗೌರವ (Awards and honors) ಸಿಗಬಹುದು. ವೃತ್ತಿಯಲ್ಲಿ ವಿಶೇಷ ಅನುಕೂಲಗಳು ಎದುರಾಗಲಿವೆ. ನವೆಂಬರ್ ಬಳಿಕ ಶುಕ್ರ ಮತ್ತು ಬುಧನ ಅನುಗ್ರಹದಿಂದ ಕಲಾವಿದರು ಮತ್ತು ರಂಗಭೂಮಿ ಕ್ಷೇತ್ರದವರಿಗೆ ಹೆಚ್ಚಿನ ಯಶಸ್ಸು ಸಿಗುವ ಸಾಧ್ಯತೆಯಿದೆ.

ಯುಗಾದಿಯಿಂದ ಪ್ರಾರಂಭವಾಗುವ ಹೊಸ ವರ್ಷವು ಪ್ರತಿಯೊಬ್ಬರ ಪಾಲಿಗೂ ವಿಭಿನ್ನ ಅನುಭವಗಳನ್ನು ತರುತ್ತದೆ. ಗ್ರಹಗಳ ಚಲನೆ ಪ್ರಕಾರ, ಕೆಲವರಿಗೆ ಅದೃಷ್ಟ, ಇನ್ನೂ ಕೆಲವರಿಗೆ ಸವಾಲುಗಳನ್ನು ಎದುರಿಸುವ ವರ್ಷವಾಗಲಿದೆ. ಜಾತಕದಲ್ಲಿ ಗ್ರಹಗಳು (Planets in the horoscope) ಹೇಗೆ ತಿರುಗುತ್ತವೆ ಎಂಬುದರ ಮೇಲೆ ಅವರ ಜೀವನ ನಿರ್ಧಾರವಾಗಲಿದೆ. ಆದ್ದರಿಂದ ಈ ವರ್ಷ ಗ್ರಹಗಳ ಪ್ರಭಾವವನ್ನು ಸಮರ್ಥವಾಗಿ ನಿರ್ವಹಿಸಿ, ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳುವುದು ಶ್ರೇಯಸ್ಕರ.

ಹಕ್ಕು ನಿರಾಕರಣೆ: ಈ ಮಾಹಿತಿ ಜ್ಯೋತಿಷ್ಯ ಮತ್ತು ನಂಬಿಕೆಗಳನ್ನು ಆಧರಿಸಿದೆ. ಇದು ನೀಡ್ಸ್ ಆಫ್ ಪಬ್ಲಿಕ್ ಅಧಿಕೃತ ಅಭಿಪ್ರಾಯವಲ್ಲ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!