ನಿಮ್ಮ ಫೋನ್ ಪಾಸ್ ವರ್ಡ್(Phone password) ಮರೆತು ಕಂಗಾಲಾಗಿದ್ದೀರಾ? ಅನ್ ಲಾಕ್ (Unlock) ಮಾಡುವುದು ಹೇಗೆ? ಎಂಬ ಗೊಂದಲಗಳಿಗೆ ಇಲ್ಲಿದೆ ಮುಕ್ತಿ.
ಇಂದು ಎಲ್ಲರ ಬಳಿಯೂ ಕೂಡ ಸ್ಮಾರ್ಟ್ ಫೋನ್ (SmartPhone) ಇದೆ. ಅದರಲ್ಲೂ ಸ್ಮಾರ್ಟ್ ಫೋನ್ ಅನ್ನು ಜನರು ಪ್ರಮುಖ ಸಾಧನವಾಗಿ ಬಳಸುತ್ತಿದ್ದಾರೆ. ಪ್ರಮುಖ ದಾಖಲೆಗಳಿಂದ ಹಿಡಿದು ಫೋಟೋ(photo), ವಿಡಿಯೋ(video), ಹೀಗೆ ಹಲವಾರು ವಿಷಯಗಳನ್ನು ತಮ್ಮ ನೆನಪಿಗಾಗಿ ಸ್ಮಾರ್ಟ್ ಫೋನ್ ನಲ್ಲೇ ಇಟ್ಟುಕೊಂಡಿರುತ್ತಾರೆ. ಅದರಲ್ಲಿ ಬಹಳ ಮುಖ್ಯವಾಗಿರುವ ದಾಖಲೆಗಳನ್ನು(doccuments) ಫೋನ್ ನಲ್ಲಿ ಇಟ್ಟುಕೊಂಡಾಗ ಆ ದಾಖಲೆಗಳು ಯಾರ ಕೈಗೂ ಸುಲಭವಾಗಿ ಸಿಗಬಾರದು ಎಂಬ ಕಾರಣಕ್ಕೆ ಮೊಬೈಲ್ ಗೆ ಪಾಸ್ ವರ್ಡ್(password) ಅಥವಾ ಪ್ಯಾಟ್ರನ್(pattern) ಅನ್ನು ಇಟ್ಟುಕೊಂಡಿರುತ್ತಾರೆ. ಆದರೆ ಮರೆವು ಎಲ್ಲವನ್ನು ಮರಿಸು ಬಿಡುತ್ತದೆ. ತಮ್ಮ ಮೊಬೈಲ್ ಗೆ ಸೆಕ್ಯೂರಿಟಿ(Security) ಆಗಿ ಇದ್ದಂತಹ ಪಾಸ್ ವರ್ಡ್ ನೇ ಜನರು ಮರೆತು ಬಿಡುತ್ತಾರೆ. ಇನ್ನು ಅನ್‌ಲಾಕ್ ಮಾಡಲು ಮೊಬೈಲ್ ಶಾಪ್ ಗಳಿಗೆ ಹೋಗುತ್ತಾರೆ. ಬಹಳಷ್ಟು ಹಣವನ್ನು ಸುರಿದ ನಂತರ ತಮ್ಮ ಮೊಬೈಲ್ ಅನ್‌ಲಾಕ್ ಮಾಡಿಸಿಕೊಳ್ಳುತ್ತಾರೆ. ಆದರೆ ಮೊಬೈಲ್ ಪಾಸ್ ವರ್ಡ್ ಮರೆತಿದ್ದರೆ ಜನರು ಅನ್‌ಲಾಕ್ ಮಾಡಿಸಲು ಮೊಬೈಲ್ ಶಾಪ್ ಗೆ ಹೋಗಬೇಕೆಂದಿಲ್ಲ. ತಾವೇ ತಮ್ಮ ಮೊಬೈಲ್ ಅನ್‌ಲಾಕ್ ಮಾಡಿಕೊಳ್ಳಬಹುದು ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಾವು ಅನೇಕ ಬಾರಿ ನಾವು ಇಟ್ಟಿರುವ ಪಾಸ್ವರ್ಡ್ ಪ್ಯಾಟ್ರನ್ಗಳನ್ನು(pattern) ಮರೆತು ಬಿಡುತ್ತೇವೆ. ಮರೆತ ತಕ್ಷಣ ಏನು ಮಾಡಬೇಕು ಎಂದು ತೋಚದೆ ಮೊಬೈಲ್ ಶಾಪ್ ಗೆ ಹೋಗಿ ಅನ್ ಲಾಕ್ ಮಾಡಿಸಿಕೊಂಡು ಬರುತ್ತೇವೆ. ಆದರೆ ಇನ್ನೂ ಮುಂದೆ ಅದರ ಅಗತ್ಯವಿಲ್ಲ. ಏಕೆಂದರೆ ನಾವೇನಾದರೂ ನಮ್ಮ ಫೋನ್ ಪಾಸ್ವರ್ಡ್ ಗಳನ್ನು ಮರೆತೆರೆ ಅದನ್ನು ನಾವೇ ಅನ್ ಲಾಕ್ ಮಾಡಬಹುದು. ಇದಕ್ಕಾಗಿ ಹೆಚ್ಚಿನ ಕಷ್ಟವಾಗಿದೆ ಅಥವಾ ಸಮಯವಾಗಲಿ ಬೇಕಾಗಿಲ್ಲ.
ಅನ್ ಲಾಕ್ (unlock) ಮಾಡಲು ಬಳಸುವ ಟ್ರಿಕ್ ಬಗ್ಗೆ ಎಚ್ಚರವಿರಲಿ:
ಮೊದಲಿಗೆ ನಾವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್(Third Party Application) ಬಳಸುವ ಮುಂಚೆ ಬಹಳಷ್ಟು ಎಚ್ಚರ ವಹಿಸಬೇಕು. ಏಕೆಂದರೆ ಇದರಿಂದ ನಮಗೆ ತೊಂದರೆಯಾಗುವ ಎಲ್ಲಾ ಮಾರ್ಗಗಳು ಇರುತ್ತವೆ. ಆದ್ದರಿಂದ ಬಹಳಷ್ಟು ಎಚ್ಚರಿಕೆಯಿಂದ ಅಲ್ಲಿ ಕೊಟ್ಟಿರುವ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡ ಮೇಲೆ ಮುಂದುವರಿಯಬೇಕು. ಅದರಲ್ಲೂ ಬಹಳ ಮುಖ್ಯವಾಗಿ ಗೂಗಲ್ ನಲ್ಲಿ(Google) ನೀಡಿರುವಂತಹ ರೇಟಿಂಗ್(rating) ಅನ್ನು ಗಮನಿಸಿ ನಾವು ಈ ಅಪ್ಲಿಕೇಶನ್ ಬಳಸಬಹುದೇ ಬೇಡವೇ ಎಂಬ ನಿರ್ಧಾರಕ್ಕೆ ಬರಬೇಕು.
ಫೈಂಡ್ ಮೈ ಐಫೋನ್ ಫೀಚರ್(Find My iPhone feature) ಬಳಸಿ ನಿಮ್ಮ ಫೋನ್ ಅನ್ ಲಾಕ್ ಮಾಡಬಹುದು :
ಮೊದಲಿಗೆ ನೀವು ಸ್ಮಾರ್ಟ್‌ಫೋನ್‌ನಲ್ಲಿ ಫೈಂಡ್ ಮೈ ಐಫೋನ್ ಫೀಚರ್ ಅನ್ನು ಸಕ್ರಿಯಗೊಳಿಸಿರಬೇಕು, ನಂತರ ಅದನ್ನು ರಿಮೋಟ್‌ನಲ್ಲಿ ಐಫೋನ್ ಡೇಟಾವನ್ನು ಅಳಿಸಲು ಮತ್ತು ಫೋನ್ ಸಂಪೂರ್ಣ ರಿಸ್ಟೋರ್ ಮಾಡಲು ಬಳಸಬಹುದು. ಇದರಿಂದ ನಾವು ಈಗಾಗಲೇ ಇಟ್ಟಿರುವಂತಹ ಪಾಸ್ವರ್ಡ್ ಅಥವಾ ಪ್ಯಾಟ್ರನ್ ರದ್ದಾಗುತ್ತದೆ. ಆದರೆ ಫೋನ್ ನಲ್ಲಿ ಈಗಾಗಲೇ ಇರುವಂತಹ ಡೇಟಾ ಡಿಲೀಟ್ ಆಗುತ್ತದೆ. ಕೇವಲ ಪಾಸ್ವರ್ಡ್ ಅಥವಾ ಪ್ಯಾಟರ್ನ್ ಬರೆದಿರುವವರಿಗೆ ಹೊರತಾಗಿಯೂ ಮೊಬೈಲ್ ಕಳ್ಳತನ (Mobile theft) ಮಾಡುವವರಿಗೂ ಕೂಡ ಇದು ಉಪಯುಕ್ತವಾಗಬಹುದು. ಆದ್ದರಿಂದ ಎಚ್ಚರವಹಿಸಿ. ಕಂಪ್ಯೂಟರ್ ಹೊರತಾಗಿಯೂ ಮೊಬೈಲ್ ಕಳ್ಳತನ (Mobile theft) ಮಾಡುವವರಿಗೂ ಕೂಡ ಇದು ಉಪಯುಕ್ತವಾಗಬಹುದು. ಆದ್ದರಿಂದ ಎಚ್ಚರವಹಿಸಿ.
ಕಂಪ್ಯೂಟರ್ ಬಳಸಿ ಪಾಸ್ ವರ್ಡ್ ತೆಗೆಯಬಹುದು :
ಐಫೋನ್ ಬಳಕೆದಾರರು ಮ್ಯಾಕ್ ಅಥವಾ ವಿಂಡೋಸ್ ಕಂಪ್ಯೂಟರ್ ಬಳಸಿ ಪಾಸ್ ವರ್ಡ್ ತೆಗೆಯಬಹುದು. ಮೊದಲಿಗೆ iTunes ಗೆ ಹೋಗಿ, ಇಲ್ಲಿ ನಿಮ್ಮ ಐಫೋನ್ ಅನ್ನು ರಿಕವರಿ ಮೋಡ್‌ನಲ್ಲಿ ಇರಿಸಬೇಕು. ತದನಂತರ iTunes ನಲ್ಲಿ ರಿಸ್ಟೋರ್ ಆಯ್ಕೆಯನ್ನು ಆರಿಸಿಕೊಳ್ಳಿ, ನಂತರ ಐಫೋನ್ ರಿಸೆಟ್(Reset iPhone) ಮಾಡುತ್ತದೆ. ಇದರ ನಂತರ ನಾವು ಹೊಸ ಪಾಸ್ವರ್ಡ್ ಅನ್ನು ಇಟ್ಟುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.