ಡಿಜಿಟಲ್ ಪೇಮೆಂಟ್‌ಗಳಲ್ಲಿ ತಪ್ಪಾಗಿ ಹಣ ವರ್ಗಾವಣೆ: ಪರಿಹಾರಕ್ಕಾಗಿ ಮಾರ್ಗದರ್ಶನ
ಇಂದಿನ ಡಿಜಿಟಲ್ ಯುಗದಲ್ಲಿ ಫೋನ್ ಪೆ(PhonePe), ಪೇಟಿಎಂ, ಗೂಗಲ್ ಪೇ(Google pay) ಮುಂತಾದ UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣ ಪಾವತಿಸುವುದು ಸಾಮಾನ್ಯ ಸಂಗತಿಯಾಗಿ ಬೆಳೆದಿದೆ. ಆದರೆ, ಇಂಥ ಡಿಜಿಟಲ್ ವಹಿವಾಟುಗಳಲ್ಲಿ ಕೆಲವು ಸಂದರ್ಭಗಳಲ್ಲಿ ತಕ್ಷಣವೇ ಹಣವನ್ನು ತಪ್ಪಾಗಿ ಬೇರೆಯವರಿಗೆ ಕಳುಹಿಸುವ ಯಡವಟ್ಟುಗಳು ಸಂಭವಿಸಬಹುದು. ಇಂತಹ ಸಂದರ್ಭಗಳಲ್ಲಿ, ಹಣವನ್ನು ಮರಳಿ ಪಡೆಯುವುದು ಅಸಾಧ್ಯವೆಂದು ಭಾವಿಸುವ ಅಗತ್ಯವಿಲ್ಲ. ಡಿಜಿಟಲ್ ಪೇಮೆಂಟ್ ಸೇವೆಗಳು, ಎನ್‌ಪಿಸಿಐ (National Payments Corporation of India) ಸಂಸ್ಥೆಯ ಮೂಲಕ, ದೂರುಗಳನ್ನು ಸಲ್ಲಿಸಲು, ಮತ್ತು ಸಮಸ್ಯೆಗಳನ್ನು ಪರಿಹರಿಸಲು ವಿಭಿನ್ನ ಮಾರ್ಗಗಳನ್ನು ಒದಗಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತಪ್ಪಾಗಿ ಹಣ ವರ್ಗಾವಣೆ ಮಾಡಿದಾಗ ಏನು ಮಾಡಬೇಕು?
ಎನ್‌ಪಿಸಿಐ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು, ಎನ್‌ಪಿಸಿಐನ ಅಧಿಕೃತ ವೆಬ್‌ಸೈಟ್(official website) www.npci.org.in ಗೆ ಭೇಟಿ ನೀಡಿ. ಈ ಪುಟದಲ್ಲಿ, ಮುಖ್ಯ ಮೆನುಗಳಲ್ಲಿ ಕೊನೆಯಲ್ಲಿರುವ ‘ಗೆಟ್ ಇನ್ ಟಚ್'(Get in touch) ಎಂಬ ಆಯ್ಕೆಯನ್ನು ಕಾಣಬಹುದು.
ಯುಪಿಐ ದೂರು ಸಲ್ಲಿಕೆ: ‘ಗೆಟ್ ಇನ್ ಟಚ್’ (Get in touch) ಅಡಿಯಲ್ಲಿ ‘ಯುಪಿಐ ಕಂಪ್ಲೇಂಟ್’ (UPI complent) ಅನ್ನು ಕ್ಲಿಕ್ ಮಾಡಿ. ಇದರಿಂದ, ಯುಪಿಐ ಡಿಸ್ಪೂಟ್ ರೀಡ್ರೆಸಲ್ ಮೆಕ್ಯಾನಿಸಂ (UPI Dispute Redressal Mechanism) ಪುಟವು ತೆರೆಯುತ್ತದೆ.
ಕಂಪ್ಲೇಂಟ್ ಸೆಕ್ಷನ್: ಈ ಪುಟದ ಮಧ್ಯಭಾಗದಲ್ಲಿ ಕಂಪ್ಲೇಂಟ್ ಸೆಕ್ಷನ್ (Complent section) ಕಾಣಬಹುದು. ಇಲ್ಲಿ ‘ಟ್ರಾನ್ಸಾಕ್ಷನ್’ (Transaction) ಆಯ್ಕೆಯನ್ನು ಕ್ಲಿಕ್ ಮಾಡಿ, ಇದರಿಂದ, ನೀವು ತಕ್ಷಣವೇ ನಿಮಗೆ ಬೇಕಾದ ದೂರು ನಮೂದಿಸಲು ಅಗತ್ಯವಿರುವ ಫಾರ್ಮ್ ಅನ್ನು ತುಂಬಬಹುದಾಗಿದೆ.
ದೂರು ವಿವರ:
ನೇಚರ್ ಆಫ್ ಟ್ರಾನ್ಸಾಕ್ಷನ್ (Nature of Transaction) ಎಂಬುದರಲ್ಲಿ, ನಿಮ್ಮ ವಹಿವಾಟಿನ ಬಗ್ಗೆ ವಿವರ ನೀಡಿ.
ನಂತರ, ಪ್ರಾಬ್ಲಮ್ ಡಿಟೈಲ್ (Problem Detail) ನಲ್ಲಿ ನೀವು ತಪ್ಪಾಗಿ ಬೇರೆಯವರಿಗೆ ಹಣ ಕಳುಹಿಸಿದ್ದೇನೆಂಬುದನ್ನು ಆಯ್ಕೆ ಮಾಡಿ.
ಕಮೆಂಟ್ ಸೆಕ್ಷನ್‌ನಲ್ಲಿ, ನೀವು ಏನಾದರೂ ಹೆಚ್ಚುವರಿಯಾಗಿ ತಿಳಿಸಬೇಕಿದ್ದರೆ, ಮಾಹಿತಿ ಬರೆಯಿರಿ.
ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರ್ (Transaction reference number) ಅನ್ನು ನಮೂದಿಸಿ.
ಬ್ಯಾಂಕ್ ಹೆಸರು, ಯುಪಿಐ ಐಡಿ(UP I id), ಕಳುಹಿಸಿದ ಹಣದ ಪ್ರಮಾಣ, ಹಣ ಕಳುಹಿಸಿದ ದಿನಾಂಕ, ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ಅನ್ನು ನಮೂದಿಸಿ.
ಬ್ಯಾಂಕ್ ಸ್ಟೇಟ್‌ಮೆಂಟ್ (Bank statement) ಅನ್ನು ಅಪ್‌ಲೋಡ್ ಮಾಡಿ, ಇದು ಹಣ ಕಡಿತಗೊಂಡಿರುವುದಕ್ಕೆ ಸಾಕ್ಷಿಯಾಗಿ ಬಳಸಲ್ಪಡುತ್ತದೆ.
ಸಮರ್ಪಣೆ: ಎಲ್ಲ ವಿವರಗಳನ್ನು ಸರಿಯಾಗಿ ನಮೂದಿಸಿದ ಬಳಿಕ, ಅಂತಿಮವಾಗಿ ‘ಸಬ್ಮಿಟ್’ (Submit) ಕ್ಲಿಕ್ ಮಾಡಿ.
ನೀವು ಗಮನಿಸಬೇಕಾದ ಇನ್ನಷ್ಟು ಸಲಹೆಗಳು:
ತ್ವರಿತ ಕ್ರಮ: ಇಂಥ ತಪ್ಪು ವಹಿವಾಟುಗಳು ಹೆಚ್ಚು ಸಮಯ ತೆಗೆದುಕೊಳ್ಳದಂತೆ ತಕ್ಷಣವೇ ದೂರು ದಾಖಲಿಸಬೇಕು. ಇದರಿಂದ, ನಿಮ್ಮ ಹಣವನ್ನು ಹಿಂಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.
ತಪಾಸಣೆ ಮಾಡುವುದು: ನಿಮ್ಮ ದೂರು ಸಲ್ಲಿಸಿದ ಬಳಿಕ, ನಿಯಮಿತವಾಗಿ ಎನ್‌ಪಿಸಿಐ ಅಥವಾ ನಿಮ್ಮ ಬ್ಯಾಂಕ್‌ನಿಂದ ಅದನ್ನು ಪರಿಶೀಲಿಸಿ.
ಹೆಚ್ಚಿನ ಸಹಾಯಕ್ಕಾಗಿ:
ನೀವು ಹೆಚ್ಚಿನ ಸಲಹೆ ಅಥವಾ ಸಹಾಯಕ್ಕಾಗಿ ನಿಮ್ಮ ಬ್ಯಾಂಕ್ ಅಥವಾ UPI ಸೇವಾ ಪ್ರೊವೈಡರ್‌ನ ಕಸ್ಟಮರ್ ಕೇರ್ ಸಹಾಯವಾಣಿಗೆ ಸಂಪರ್ಕಿಸಬಹುದು.
ಈ ಕ್ರಮಗಳನ್ನು ಅನುಸರಿಸುವ ಮೂಲಕ, ತಪ್ಪಾಗಿ ಕಳುಹಿಸಿದ ಹಣವನ್ನು ಸುಲಭವಾಗಿ ಹಿಂಪಡೆಯಲು ಸಾಧ್ಯವಾಗುತ್ತದೆ. ಡಿಜಿಟಲ್ ಪಾವತಿ ತಂತ್ರಜ್ಞಾನದ ಬಳಸುವಾಗ ಎಚ್ಚರಿಕೆಯೊಂದಿಗೆ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಿಸಬೇಕು.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.