ಯಾವುದೇ ಹಣಕಾಸಿನ ಅಪ್ಲಿಕೇಶನ್ ಮೂಲಕ ತಪ್ಪಾದ ಖಾತೆಗೆ ಹಣ ಕಳುಹಿಸಿದರೆ ಹಿಂಪಡೆಯುವದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…!
ಇಂದು ಜಗತ್ತು ನಮ್ಮ ಅಂಗೈಯಲ್ಲೇ ಇದೆ. ಹೌದು, ಎಲ್ಲರೂ ತಮ್ಮ ಯಾವುದೇ ಕೆಲಸಗಳನ್ನು ಅರೆ ಕ್ಷಣದಲ್ಲಿ ಮಾಡಿ ಮುಗಿಸುತ್ತಾರೆ. ಇದೆಕ್ಕೆಲ್ಲ ಕಾರಣ ತಂತ್ರಜ್ಞಾನ(Technology). ಸ್ಮಾರ್ಟ್ ಫೋನ್ ಗಳು ಬಂದ ನಂತರ ಎಲ್ಲರೂ ಮನೆಯಲ್ಲಿಯೇ ಕುಳಿತು ಅಥವಾ ಯಾವುದೇ ಸ್ಥಳದಲ್ಲಿ ಇದ್ದರೂ ಡಿಜಿಟಲ್ ಪಾವತಿಗಳನ್ನು (Digital transactions) ಮಾಡುತ್ತಾರೆ. ಬ್ಯಾಂಕ್ ಗಳಿಗೆ ಹೋಗುವವರ ಸಂಖ್ಯೆ ಬಹಳ ಕಡಿಮೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಡಿಜಿಟಲ್ ಪಾವತಿಗಳನ್ನು ಅವಲಂಬಿಸಿದ್ದಾರೆ. ತಮ್ಮ ಬಳಿ ಹಣವನ್ನು ಇಟ್ಟುಕೊಳ್ಳುವವರು ಬಹಳ ಕಡಿಮೆ. ಸ್ಮಾರ್ಟ್ ಫೋನ್‌ಗಳ (Smart phones) ಮೂಲಕ ಹಣವನ್ನು ಪಾವತಿಸುತ್ತಾರೆ. ಕಾರಣ ಡಿಜಿಟಲ್ ಪಾವತಿ ಸುರಕ್ಷಿತವಾಗರುವುದರಿಂದ ಎಲ್ಲರೂ ಡಿಜಿಟಲ್ ಪಾವತಿ ಮಾಡುತ್ತಾರೆ. ಆದ್ರೆ ಪಾವತಿ ಮಾಡುವಾಗ ಹಲವರು ತಪ್ಪಾದ ಖಾತೆಗೆ ಕಳುಹಿಸಿ ಬಿಡುತ್ತಾರೆ. ಹೀಗೆ ತಪ್ಪಾದ ಖಾತೆಗೆ ಕಳುಹಿಸಿದ ಹಣವನ್ನು ಹಿಂಪಡೆಯುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಿಸ್ ಆಗಿ ತಪ್ಪು ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದರೆ, ಹಣವನ್ನು ಹಿಂಪಡೆಯಲು ಸಾಧ್ಯವಿದೆ :
Money transferred to wrong account : ಕೆಲವೊಂದು ಸಲ ನಾವು ಎಷ್ಟೇ ಸರಿಯಾಗಿ ಹಣಕಾಸಿನ ವಹಿವಾಟು (Money transaction) ಮಾಡಿದರೂ ಕೂಡ, ತಪ್ಪಾದ UPI ಐಡಿಯನ್ನು ನಮೂದಿಸುವ ಮೂಲಕ ತಪ್ಪು ಖಾತೆಗೆ ಅಥವಾ ವ್ಯಕ್ತಿಗೆ ಹಣವನ್ನು ಕಳುಹಿಸುವ ಅನೇಕ ಘಟನೆಗಳು ನಡೆದಿವೆ. ಹೀಗಾದ ಜನರು ಹಣವು ಮತ್ತೆ ಬರುವುದಿಲ್ಲ ಎಂದು ಮರೆತು ಬಿಡುತ್ತಾರೆ. ಮತ್ತು ಆ ಹಣವನ್ನು ಹಿಂಪಡೆಯಲು ಪ್ರಯತ್ನವನ್ನೂ ಕೂಡ ಮಾಡುವುದಿಲ್ಲ. ಆದರೆ ಅದು ದೊಡ್ಡ ಮೊತ್ತದ ಹಣವಾಗಿದ್ದರೆ. ಬಹಳ ದುಃಖ ಪಡಬೇಕಾಗುತ್ತದೆ. ನೀವು ಕೂಡ ಇಂತಹ ಅನೇಕ ಸಂದರ್ಭಗಳನ್ನ ಎದುರಿಸಿದ್ದರೆ ಇನ್ನು ಮೇಲೆ ಚಿಂತಿಸುವ ಅಗತ್ಯವಿಲ್ಲ. ಹೌದು, ನೀವು ಮಿಸ್ ಆಗಿ ತಪ್ಪು ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದರೆ ನೀವು ನಿಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಿದೆ.
ತಪ್ಪಾದ ಖಾತೆಗೆ ಹಣವನ್ನು ವರ್ಗಾಯಿಸಿದ್ದರೆ NPCI ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು :
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಡಿಜಿಟಲ್ ಸೇವೆಗಳ ಮೂಲಕ ತಪ್ಪಾದ ವ್ಯಕ್ತಿಗೆ ನೀವು ಹಣ ಕಳುಹಿಸಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಪಾವತಿಸಿದ ದಾಖಲೆಗಳನ್ನ ಬಳಸಿ ದೂರು ಸಲ್ಲಿಸಬೇಕಾುತ್ತದೆ. ಹಾಗಾಗಿ, ನೀವೇನಾದ್ರು Google Pay, Phone Pe, Paytm ಅಥವಾ ಇತರ UPI ಪ್ಲಾಟ್‌ಫಾರ್ಮ್‌ಗಳ ಮೂಲಕ ತಪ್ಪಾಗಿ ಹಣವನ್ನು ವರ್ಗಾಯಿಸಿದ್ದರೆ ನೀವು NPCI ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದಾಗಿದೆ.
NPCI ವೆಬ್‌ಸೈಟ್‌ನ (Website) ಮೂಲಕ ದೂರು ಸಲ್ಲಿಸುವ ವಿವರ ಇಲ್ಲಿದೆ :
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ವೆಬ್‌ಸೈಟ್‌ನ ಮೂಲಕ, ಉದ್ದೇಶಪೂರ್ವಕವಲ್ಲದ UPI ವಹಿವಾಟಿನ ಸಂದರ್ಭದಲ್ಲಿ ಅದರ ವಿರುದ್ಧ ದೂರು ಸಲ್ಲಿಸಬಹುದು. ಹಣ ವರ್ಗಾವಣೆ ಅಥವಾ ವ್ಯಾಪಾರ ವಹಿವಾಟು ಎರಡೂ ವಹಿವಾಟುಗಳ ಸಂದರ್ಭದಲ್ಲೂ ನೀವು ದೂರು ಸಲ್ಲಿಸಬಹುದು. ಅಥವಾ npci.org.in ವೆಬ್‌ಸೈಟ್‌ಗೆ ಹೋಗಿ ವಿವಾದ ಪರಿಹಾರ ಕಾರ್ಯವಿಧಾನ (Dispute Redressal Mechanism) ಟ್ಯಾಬ್ ಅಡಿಯಲ್ಲಿ ನೀವು ದೂರು ಸಲ್ಲಿಸಬಹುದು. ಕಂಪ್ಲೈಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು UPI ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟಿನ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯ ಮೂಲಕ ಆನ್‌ಲೈನ್ ಫಾರ್ಮ್ (Online form) ಅನ್ನು ಭರ್ತಿ ಮಾಡಿ. ಅಲ್ಲದೆ ನೀವು ನಿಮ್ಮ ಖಾತೆಯಲ್ಲಿ ಕಡಿತವಾದಂತಹ ಹಣದ ವಿವರವನ್ನು ಕೂಡ ನೀವು ಅಪ್‌ಲೋಡ್ ಮಾಡಬಹುದು.
TPAP ಅಪ್ಲಿಕೇಶನ್ ಮೂಲಕ UPI ವಹಿವಾಟು ನಡೆಸಿದರೆ, ನೀವು ಮೊದಲು TPAP ಸಂಬಂಧಿತ ಆಪ್‌ಗಳಲ್ಲಿ ದೂರು ಸಲ್ಲಿಸಬೇಕಾಗುತ್ತದೆ :
ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮ್ಮ ದೂರಿಗೆ ಕಾರಣವನ್ನ ಬರೆಯಬೇಕಾಗುತ್ತದೆ. ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂದು ಆಯ್ಕೆಯನ್ನು ಆರಿಸುವ ಮೂಲಕ ನಿಮ್ಮ ಕಂಪ್ಲೇಂಟ್ ಫೈಲ್ (Complaint file) ಮಾಡಬಹುದು. ಅಷ್ಟೇ ಅಲ್ಲದೆ NPCI ವೆಬ್‌ಸೈಟ್‌ನ ಪ್ರಕಾರ, ನೀವೇನಾದ್ರು TPAP ಅಪ್ಲಿಕೇಶನ್ ಮೂಲಕ UPI ವಹಿವಾಟು ನಡೆಸಿದರೆ, ನೀವು ಮೊದಲು TPAP ಸಂಬಂಧಿತ ಆಪ್‌ಗಳಲ್ಲಿ ದೂರು ಸಲ್ಲಿಸಬೇಕಾಗುತ್ತದೆ. Google Pay ನಂತಹ TPAPನೊಂದಿಗೆ ನೀವು ಮೊದಲು ಎಲ್ಲಾ UPI-ಸಂಬಂಧಿತ ಕುಂದುಕೊರತೆಗಳು, ದೂರುಗಳನ್ನ ಪಿಎಸ್ಪಿ ಬ್ಯಾಂಕ್ ಅಥವಾ ಟಿಪಿಎಪಿ ಮೂಲಕ ಸಲ್ಲಿಸಬೇಕು.
ಡಿಜಿಟಲ್ ದೂರುಗಳಿಗಾಗಿ ಒಂಬುಡ್ಸ್‌ಮನ್ (Ombudsman) ನಲ್ಲಿ ದೂರು ಸಲ್ಲಿಸಬಹುದು :
ಅಪ್ಲಿಕೇಶನ್ ಏನಾದ್ರು ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ನೀವು PSP ಬ್ಯಾಂಕ್ ಮತ್ತು NPCI ಮೂಲಕ ದೂರು ನೀಡಬಹುದು. ಅದೇ ಕ್ರಮದಲ್ಲಿ ನಂತರ ಅಂತಿಮ-ಬಳಕೆದಾರ ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್‌ಮನ್ ಮತ್ತು / ಅಥವಾ ಡಿಜಿಟಲ್ ದೂರುಗಳಿಗಾಗಿ ಒಂಬುಡ್ಸ್‌ಮನ್‌ನಲ್ಲಿ ದೂರು ಸಲ್ಲಿಸಬಹುದು.
ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್ (RBI Ombudsman) :
ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್ ದೂರುಗಳನ್ನು ಪರಿಹರಿಸಲು ಮತ್ತು ಡಿಜಿಟಲ್ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಾಪಿಸಿದ ಕುಂದುಕೊರತೆ ಪರಿಹಾರ ಕಾರ್ಯವಿಧಾನವಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.