ಯುಪಿಐ ವಹಿವಾಟು ಮಿತಿಯಿಂದ (UPI Transaction Limit) ತೊಂದರೆ ಉಂಟಾಗುತ್ತಿದೆಯೇ?: 1ದಿನದ ಯುಪಿಐ ವಹಿವಾಟು ಮಿತಿ 5 ಲಕ್ಷಕ್ಕೆ ಏರಿಕೆ.
ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣದ ಹಾವಳಿಯಿಂದ ಜನರಿಗೆ ಒಂದೆಡೆ ಅನುಕೂಲವಾದರೆ ಇನ್ನೊಂದೆಡೆ ಅನಾನುಕೂಲಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ(Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ(phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ದೊಡ್ಡ ದೊಡ್ಡ ವ್ಯಾಪಾರಿಗಳಿಂದ ಹಿಡಿದು ರಸ್ತೆ ಬದಿಗಳಲ್ಲಿ ಸಣ್ಣ ವ್ಯಾಪಾರಗಳನ್ನು ಮಾಡುವವವರೂ ಕೂಡ ಕ್ಯೂಆರ್ ಕೋಡ್(QR code) ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡುವ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಹೆಚ್ಚಿನ ಜನ ಹಣ ವರ್ಗಾವಣೆಗಾಗಿ UPI ಅನ್ನೇ ಬಳಸುತ್ತಿದ್ದಾರೆ. ಆದರೆ ಅದರ ದೈನಂದಿನ ಮಿತಿಯಿಂದ ಅನೇಕ ಜನರಿಗೆ ತೊಂದರೆ ಉಂಟಾಗುತ್ತಿತ್ತು. ಆದರೆ ಇದೀಗ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಸಮಸ್ಯೆಗೆ ಮುಕ್ತಿ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಸಮಸ್ಯೆಗೆ ಮುಕ್ತಿ ನೀಡಿದೆ. ಅಂದರೆ ಸೆಪ್ಟೆಂಬರ್ 16ರಿಂದ ಯುಪಿಐ(UPI) ವಹಿವಾಟುಗಳ ಮಿತಿ ಹೆಚ್ಚಾಗಿದೆ. ತೆರಿಗೆ ಪಾವತಿಗಳನ್ನು ಸರಳಗೊಳಿಸುವ ಸಲುವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚನೆಗಳ ಪ್ರಕಾರ, ಸೆಪ್ಟೆಂಬರ್ 16 ರಿಂದ ಅನೇಕ ಸ್ಥಳಗಳಲ್ಲಿ ಯುಪಿಐ ವಹಿವಾಟು ಮಿತಿಯನ್ನು 5.ಲಕ್ಷಕ್ಕೆ ಹೆಚ್ಚಿಸಲು ಎನ್‌ಪಿಸಿಐ (National Payments Corporation of India) ನಿರ್ಧರಿಸಿದೆ. ಈ ಬದಲಾವಣೆಯ ಮೂಲಕ ಸರ್ಕಾರವು ತೆರಿಗೆ ಪಾವತಿಗಳನ್ನು ವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ.
ದೇಶದಾದ್ಯಂತ ತೆರಿಗೆ ಪಾವತಿಯ ವ್ಯವಸ್ಥೆಯನ್ನು ಮರುರೂಪಿಸುವ ನಿಟ್ಟಿನಲ್ಲಿ, ಯುಪಿಐ ವಾಹಿವಾಟು ಮಿತಿಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರಕಟಿಸಿದೆ. ಈ ಹಿಂದೆ ಕೇವಲ 1 ಲಕ್ಷದವರೆಗೆ ವಹಿವಾಟಿನ ಮಿತಿಯಿತ್ತು. ಆದರೆ ಇದೀಗ ಅಂದರೆ ಸೆಪ್ಟೆಂಬರ್ 16 ರಿಂದ 1, ಮಿತಿಯಿಂದ ಗರಿಷ್ಠ 5 ಲಕ್ಷದ ಮಿತಿಯವರೆಗೆ ಯುಪಿಐ ವಹಿವಾಟುಗಳ ಮಿತಿಯನ್ನು ಹೆಚ್ಚಿಸಿದೆ.
ಹಣಕಾಸು ನೀತಿ ಸಭೆಯು ಆಗಸ್ಟ್ 8 ರಂದು ನಡೆದಿತ್ತು. ಇದರ ನಂತರ RBI ಯುಪಿಐ ವಹಿವಾಟಿನ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಆಗಸ್ಟ್ 24, 2024 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಈ ಪ್ರಮುಖ ಬದಲಾವಣೆಯನ್ನು ಬಹಿರಂಗಪಡಿಸಲಾಗಿತ್ತು. ಈ ನಿಟ್ಟಿನಲ್ಲಿ, NPCI ಎಲ್ಲಾ UPI ಅಪ್ಲಿಕೇಶನ್‌ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದೆ. ಇದು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುವ ಜೊತೆಯಲ್ಲಿ ತೆರಿಗೆ ಪಾವತಿಗಳನ್ನು ಸುವ್ಯವಸ್ಥಿತಗೊಳಿಸಬಹುದಾಗಿದೆ. ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಹೆಚ್ಚು ಹೆಚ್ಚು ಯುಪಿಐ (UPI) ಅಳವಡಿಕೆಯನ್ನು ಉತ್ತೇಜಿಸುವುದು NPCI ಪ್ರಮುಖ ಉದ್ದೇಶವಾಗಿದೆ.
ಹೊಸ ನಿಯಮಗಳ ಅಡಿಯಲ್ಲಿ, NPCI ಪ್ರಕಾರ, ಇಂದಿನಿಂದ UPI ಮೂಲಕ ತೆರಿಗೆ ಪಾವತಿಸಲು 5 ಲಕ್ಷದವರೆಗೆ ಮಿತಿ ಇರುತ್ತದೆ. ಆಸ್ಪತ್ರೆ ಬಿಲ್, ಶೈಕ್ಷಣಿಕ ಶುಲ್ಕ, ಐಪಿಒ ಮತ್ತು ಆರ್‌ಬಿಐನ ರಿಟೇಲ್ ಡೈರೆಕ್ಟ್ ಸ್ಕೀಮ್‌ಗಳಲ್ಲಿ ರೂ 5 ಲಕ್ಷದವರೆಗಿನ ವಹಿವಾಟುಗಳು ಸಹ ಸಾಧ್ಯವಾಗುತ್ತದೆ. ಆದರೆ ಅದಕ್ಕಿಂತ ಅಂದರೆ 5 ಲಕ್ಷಕ್ಕಿಂತ ಹೆಚ್ಚಿದ ಮಿತಿಯನ್ನು ಪ್ರತಿ ವಹಿವಾಟಿನಲ್ಲಿ ಮಾಡಲಾಗುವುದಿಲ್ಲ.
ಈ ಹಿಂದೆ, NPCI ಯುಪಿಐ ವಹಿವಾಟಿನ ಮಿತಿಯನ್ನು ಡಿಸೆಂಬರ್ 2021 ಮತ್ತು ಡಿಸೆಂಬರ್ 2023 ರಲ್ಲಿ ಬದಲಾಯಿಸಲಾಗಿತ್ತು.
ನೆನ್ನೆಯ ತನಕ ಎಲ್ಲಾ ರೀತಿಯ UPI ವಹಿವಾಟುಗಳಿಗೆ ದೈನಂದಿನ ಮಿತಿ 1 ಲಕ್ಷ ರೂಪಾಯಿ ಇತ್ತು. ಆದರೆ ವಿವಿಧ ಬ್ಯಾಂಕ್‌ಗಳು ಈ ಮಿತಿಯನ್ನು ತಮ್ಮದೇ ಆದ ರೀತಿಯಲ್ಲಿ ಹೊಂದಿಸಬಹುದು. ಅಲಹಾಬಾದ್ ಬ್ಯಾಂಕ್‌ನ UPI ವಹಿವಾಟಿನ ಮಿತಿ 25,000 ರೂ, ಎಚ್‌ಡಿಎಫ್‌ಸಿ ಬ್ಯಾಂಕ್(HDFC bank) ಮತ್ತು ಐಸಿಐಸಿಐ ಬ್ಯಾಂಕ್ (ICICI bank) 1 ಲಕ್ಷದವರೆಗಿನ ವಹಿವಾಟುಗಳನ್ನು ಸ್ವೀಕರಿಸುತ್ತವೆ. ಇದರ ಹೊರತಾಗಿ, ಬಂಡವಾಳ ಮಾರುಕಟ್ಟೆ, ಸಂಗ್ರಹಣೆ, ವಿಮೆ ಮತ್ತು ವಿದೇಶಿ ವಹಿವಾಟುಗಳಿಗೆ (ವಿದೇಶಿ ಒಳಗಿನ ರವಾನೆ) ಒಂದೇ ಮಿತಿ ದಿನಕ್ಕೆ 2 ಲಕ್ಷ ರೂ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ