Job Alerts: ಕೇಂದ್ರ ಸರ್ಕಾರಿ ಸೇವೆಗಳಿಗೆ ಯುಪಿಎಸ್‌ಸಿ ಅಧಿಸೂಚನೆ ಪ್ರಕಟ. ಅರ್ಜಿ ಸಲ್ಲಿಸಿ 

Picsart 24 09 22 10 42 08 701

ಈ ವರದಿಯಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) 2025ನೇ ಸಾಲಿನ ಇಂಜಿನಿಯರಿಂಗ್ ಸೇವೆಗಳ (ESE) ನೇಮಕಾತಿ 2025 ( UPSC ESE Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) 2025ನೇ ಸಾಲಿನ ಇಂಜಿನಿಯರಿಂಗ್ ಸೇವೆಗಳ (ESE) ನೇಮಕಾತಿ 2025 ಅವಲೋಕನ:

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) 2025ನೇ ಸಾಲಿನ ಇಂಜಿನಿಯರಿಂಗ್ ಸೇವೆಗಳ (ESE) ಪರೀಕ್ಷೆ ಅಧಿಸೂಚನೆ ಪ್ರಕಟಿಸಿದೆ. ಈ ಪರೀಕ್ಷೆಯ ಮೂಲಕ ಕೇಂದ್ರ ಸರ್ಕಾರದ ಅನೇಕ ಇಂಜಿನಿಯರಿಂಗ್ ಗ್ರೂಪ್ ಎ (Group A) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 2025ನೇ ಸಾಲಿನ ESE ಪರೀಕ್ಷೆ ಮೂಲಕ ಒಟ್ಟು 232 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ.ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಉದ್ಯೋಗ ವಿವರ:

ನೇಮಕಾತಿ ಪ್ರಾಧಿಕಾರ – ಕೇಂದ್ರ ಲೋಕಸೇವಾ ಆಯೋಗ (UPSC)
ಹುದ್ದೆ / ಪರೀಕ್ಷೆ ಹೆಸರು- ಇಂಜಿನಿಯರಿಂಗ್ ಸರ್ವೀಸೆಸ್‌ ಎಕ್ಸಾಮ್- ಸೇವೆಗಳು (ESE).
ಹುದ್ದೆಗಳ ಸಂಖ್ಯೆ – 232
ವೇತನ ಶ್ರೇಣಿ: ₹60,000 – ₹90,000/ಮಾಸ.
ಉದ್ಯೋಗ ವಿಧ: ಪೂರ್ಣಕಾಲಿಕ ಸರ್ಕಾರಿ ಉದ್ಯೋಗ.

ಅರ್ಹತಾ ಮಾನದಂಡಗಳು:
ವಿದ್ಯಾರ್ಹತೆ:

ಅಭ್ಯರ್ಥಿಗಳು ಇಂಜಿನಿಯರಿಂಗ್ (Engineering) ಪದವಿ (B.E./B.Tech.) ಅಥವಾ ಸಂಬಂಧಿತ ತಾಂತ್ರಿಕ ಹಾಗೂ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (M.Sc.) ಹೊಂದಿರಬೇಕು.

ವಯಸ್ಸಿನ ಮಿತಿಗಳು:

ಕನಿಷ್ಠ ವಯಸ್ಸು: 21 ವರ್ಷ.
ಗರಿಷ್ಠ ವಯಸ್ಸು: 30 ವರ್ಷ.
ಕೇಂದ್ರ ಸರ್ಕಾರದ ನೌಕರರಿಗೆ ಗರಿಷ್ಠ ವಯಸ್ಸು 35 ವರ್ಷ.

ಅಪ್ಲಿಕೇಶನ್ ಶುಲ್ಕ:

ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ. 200.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.

ಪ್ರಮುಖ ದಿನಾಂಕಗಳು:

ಅರ್ಜಿ ಸ್ವೀಕಾರ ಪ್ರಾರಂಭ: 18 ಸೆಪ್ಟೆಂಬರ್ 2024.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 8 ಅಕ್ಟೋಬರ್ 2024 (ಸಂಜೆ 6 ಗಂಟೆ).
ಅಪ್ಲಿಕೇಶನ್ ತಿದ್ದುಪಡಿ ವಿಂಡೊ: 9 ಅಕ್ಟೋಬರ್ 2024 ರಿಂದ 15 ಅಕ್ಟೋಬರ್ 2024.
ಪ್ರಿಲಿಮಿನರಿ ಪರೀಕ್ಷೆ: 9 ಫೆಬ್ರವರಿ 2025.

ಪರೀಕ್ಷೆಯ ಹಂತಗಳು:

ಹಂತ 1: ಪ್ರಿಲಿಮ್ಸ್‌ ಪರೀಕ್ಷೆ.(Prelims Exam)
ಹಂತ 2: ಮುಖ್ಯ ಪರೀಕ್ಷೆ.(Mains exam)
ಹಂತ 3: ವ್ಯಕ್ತಿತ್ವ ಪರೀಕ್ಷೆ (Personality Test /Interview).

ಪ್ರಯತ್ನಗಳ ಮಿತಿ:

ಸಾಮಾನ್ಯ ವರ್ಗದವರು: 6 ಪ್ರಯತ್ನ.
ಹಿಂದುಳಿದ ವರ್ಗದವರು: 9 ಪ್ರಯತ್ನ.
ಪರಿಶಿಷ್ಟ ಜಾತಿ/ಪಂಗಡ: ಗರಿಷ್ಠ ವಯೋಮಿತಿ ವರೆಗೆ ಅನಿಯಮಿತ.
ದಿವ್ಯಾಂಗ, ಮಾಜಿ ಸೈನಿಕ: 9 ಪ್ರಯತ್ನ.

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://upsc.gov.in

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ,  ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಕೊನೆಯದಾಗಿ ಹೇಳುವುದಾದರೆ, ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ. ಈ UPSC ESE 2025 ಪರೀಕ್ಷೆ ವಿಜ್ಞಾನ, ತಂತ್ರಜ್ಞಾನ, ಮತ್ತು ಅಭಿಯಂತ್ರಣ ಕ್ಷೇತ್ರದಲ್ಲಿ ತಮ್ಮ ಕರಿಯರ್‌ಗೆ ಉತ್ತೇಜನ ನೀಡಲು ಬಯಸುವವರಿಗೆ ಸುವರ್ಣಾವಕಾಶ.ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!