ಇದೀಗ ಎಲ್ಲರ ಹತ್ರಾನೂ ವಾಹನಗಳು ಇದ್ದೆ ಇವೆ. ಹೌದು, ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಮಾಡೆಲ್ ಗಳ ಕಾರುಗಳು, ಬೈಕ್ ಗಳು, ಸ್ಕೂಟರ್ ಗಳು ಇವೆ. ಹಾಗೆಯೇ ಇಂದು ಮಾರುಕಟ್ಟೆಗೆ ಹೊಸ ಹೊಸ ಫೀಚರ್ಸ್ ಗಳ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಬೈಕ್ ಸ್ಕೂಟರ್ ಗಳಂತೂ ( Electeic Vehicles ) ತಮ್ಮದೇ ಹವಾ ಎಬ್ಬಿಸಿವೆ. ಹಾಗೆಯೇ ಈಗ ದೇಶದಲ್ಲಿ ಬಹಳಷ್ಟು ಎಲೆಕ್ಟ್ರಿಕ್ ವಾನಗಳು ಲಗ್ಗೆ ಇಡುತ್ತಿದ್ದು, ಅವುಗಳ ನಡುವೆಯೇ ಪೈಪೋಟಿ ನಡೆದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಮುಖ್ಯ ಉದ್ದೇಶ ( Purpose ) :
ಮೊದಲನೆಯದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾಲಿನ್ಯದ ದೃಷ್ಟಿಕೋನದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಎಂದರೆ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ದಿನಬಳಕೆಗೆ ಕಡಿಮೆ ವೆಚ್ಚವನ್ನು ಈ ಬೈಕ್ ಗಳು ಭರಿಸುತ್ತವೆ. ಹಾಗಾಗಿ ಈ ಎಲ್ಲ ಉದ್ದೇಶಗಳಿಂದ ಈ ಬೈಕ್ ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಇದೀಗ ಎಲೆಕ್ಟ್ರಿಕ್ ವಾಹನ ( Electric Vehicles ) ತಯಾರಿಕಾ ಕಂಪನಿಗಳು ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ಹಲವು ದ್ವಿಚಕ್ರ ವಾಹನಗಳನ್ನು ( Two wheals ) ಬಿಡುಗಡೆ ಮಾಡುತ್ತಿವೆ. ಈಗ ಎಲೆಕ್ಟ್ರಿಕ್ ಸರಣಿಯಲ್ಲಿ Motovolt ಹೊಸ ಇ-ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ನ ಹೆಸರು URBN ಇ-ಬೈಕ್(e-bike). ಈ ಬೈಕ್ ನ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
URBN ಇ-ಬೈಕ್ ನಲ್ಲಿ ಇರುವ ವಿಶೇಷತೆಗಳು :
ಈ ಒಂದು ಎಲೆಕ್ಟ್ರಿಕ್ ಬೈಕ್ ಸ್ಮಾರ್ಟ್ ಇ-ಸೈಕಲ್ ಆಗಿದೆ.
ಇದರಲ್ಲಿ ವಿಶೇಷವಾಗಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ನೀಡಲಾಗಿದೆ.
ಈ ಬೈಕ್ ನ ತೂಕ ಕೇವಲ 40 ಕೆಜಿ ಮತ್ತು ಇದರ ಗರಿಷ್ಠ ವೇಗ ಗಂಟೆಗೆ 25 ಕಿಮೀ. ಓಡುತ್ತದೆ.
ಹಾಗೆಯೇ ಈ ಬೈಕ್ ನ ಬ್ಯಾಟರಿ ಚಾರ್ಜ್ ಪೂರ್ಣಗೊಳ್ಳಲು 4 ಗಂಟೆ ಬೇಕಾಗುತ್ತದೆ.
Motovolt URBN ಬೈಕ್ BIS-ಅನುಮೋದಿತ ಬ್ಯಾಟರಿಯನ್ನು ಹೊಂದಿದೆ.
ಹಾಗೆಯೇ ಇದು ಪೆಡಲ್ ಅಸಿಸ್ಟ್ ಸಂವೇದಕ ಹಾಗೂ ಪ್ಯಾಡಲ್ ಅಥವಾ ಸ್ವಯಂಚಾಲಿತ ಮೋಡ್ ಸೇರಿದಂತೆ ಬಹು ವಿಧಾನಗಳನ್ನು ಹೊಂದಿದೆ.
ಈ ಬೈಕ್ ಬ್ಯಾಟರಿಯು ನಿಮಗೆ ಸಂಪೂರ್ಣ ಚಾರ್ಜ್‌ನಲ್ಲಿ 120KM ವರೆಗಿನ ಮೈಲೇಜ್ ಅನ್ನು ನೀಡುತ್ತದೆ.
ಇಷ್ಟೇ ಅಲ್ಲದೆ ಇಗ್ನಿಷನ್ ಕೀ ಸ್ವಿಚ್, ಹ್ಯಾಂಡಲ್ ಲಾಕ್, ಹಿಂಬದಿ ಮತ್ತು ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹೈಡ್ರಾಲಿಕ್ ರಿಯರ್ ಶಾಕರ್ ಅನ್ನು ಹೊಂದಿದೆ.
URBN ಇ-ಬೈಕ್ ನ ಬೆಲೆ :
ಇನ್ನು ಇ-ಬೈಕ್‌ನ ಬೆಲೆಯ ( Price ) ಬಗ್ಗೆ ಹೇಳುದಾದರೆ, ಈ ಒಂದು ಬೈಕ್ ಕೇವಲ 49,999 ರೂ ಲಭ್ಯವಿದೆ. ಹಾಗೆಯೇ ನಿಮಗೆ Motovolt ಕಂಪನಿಯ ವೆಬ್‌ಸೈಟ್‌ನಲ್ಲಿ ಮತ್ತು 100 ರಿಟೇಲ್ ಪಾಯಿಂಟ್‌ಗಳ ( Retail Point ) ಆಧಾರದ ಮೇಲೆ ಇದನ್ನು ರೂ 999/- ಕ್ಕೆ ಬುಕ್ ಮಾಡಬಹುದು. ಮತ್ತು EMI ಕಂತುಗಳಲ್ಲಿ ಖರೀದಿಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.