ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲುಗಳು ದೇಶಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಇದೀಗ, ನವೀಕೃತ ವಂದೇ ಭಾರತ್ ಎಕ್ಸ್‌ಪ್ರೆಸ್ ಇದೀಗ ಬೆಂಗಳೂರಿನಿಂದ (Banglore) ಮದುರೈಗೆ (Madurai)ಸಂಚರಿಸಲು ಸಜ್ಜಾಗಿದೆ. ಈ ರೈಲು ಸೇವೆಯನ್ನು , ಆಗಸ್ಟ್ 31ರಂದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಡಿಯೋ ಕಾನ್ಫರೆನ್ಸ್ (Video conference) ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ವೇಗ, ಕಡಿಮೆ ಸಮಯ:
ಈ ಹೊಸ ಸೇವೆಯು 430 ಕಿಲೋಮೀಟರ್ ದೂರವನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರೈಸಲಿದೆ. ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳು ಈ ದೂರವನ್ನು ಕ್ರಮಿಸಲು 9 ಗಂಟೆಗಳ ಕಾಲ ತೆಗೆದುಕೊಳ್ಳುತ್ತವೆ. ಬೆಂಗಳೂರಿನಿಂದ ಮದುರೈಯವರೆಗೆ ಕಡಿಮೆ ಸಮಯದಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುವ ಈ ರೈಲು, ಪ್ರಾಮುಖ್ಯ ನಿಲ್ದಾಣಗಳಲ್ಲಿ, ಕೆಆರ್ ಪುರಂ, ಸೇಲಂ, ನಾಮಕ್ಕಲ್, ಕರೂರು, ತಿರುಚಿರಾಪಳ್ಳಿ ಹಾಗೂ ದಿಂಡಿಗಲ್ ನಿಲುಗಡೆಯಾಗಲಿದೆ.
ಪ್ರಯಾಣ ಸಮಯ ಮತ್ತು ಶ್ರೇಣಿಗಳು:
ಮದುರೈನಿಂದ ಈ ರೈಲು ಬೆಳಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ. ಮಧುರೈನಿಂದ ಹೊರಡುವಾಗ, ಈ ರೈಲು 7 ಚೇರ್ ಕಾರ್ ಹಾಗೂ 1 ಎಕ್ಸಿಕ್ಯೂಟಿವ್ ಕೋಚ್ ಹೊಂದಿರುತ್ತದೆ. ಟಿಕೆಟ್ ದರವು ಚೇರ್ ಕಾರ್ ಶ್ರೇಣಿಯಲ್ಲಿ ರೂ. 1,200 ರಿಂದ ರೂ. 1,300, ಮತ್ತು ಎಕ್ಸಿಕ್ಯೂಟಿವ್ ಕೋಚ್ ಶ್ರೇಣಿಯಲ್ಲಿ ರೂ. 1,800 ರಿಂದ ರೂ. 2,000 ನಡುವೆಯಿರಲಿದೆ.
ಸೌಕರ್ಯಗಳು ಮತ್ತು ಸುರಕ್ಷತೆ:
ವಂದೇ ಭಾರತ್ ಎಕ್ಸ್‌ಪ್ರೆಸ್ ಅತೀವೇಗದ ಜೊತೆ, ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಕೂಡ ಬಂದಿದ್ದು, “ಕವಾಚ್” ಎನ್ನುವ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ (ಎಸಿ) ವ್ಯವಸ್ಥೆಯು ಈ ರೈಲಿನಲ್ಲಿ ಸಿಗಲಿದ್ದು, ಹೆಚ್ಚು ಆರಾಮದಾಯಕ ಸೀಟುಗಳು, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು, ಮತ್ತು ಅಗ್ನಿ ನಿರೋಧಕ ಸಾಧನಗಳಂತಹ ಸೂಕ್ತ ವ್ಯವಸ್ಥೆಗಳನ್ನು ಒಳಗೊಂಡಿದೆ.
ಮುಂಬರುವ ಯೋಜನೆಗಳು:
ಇದೇ ಮಾದರಿಯ ಹೆಚ್ಚು ವೇಗದ, ಕಡಿಮೆ ಸಮಯದ ರೈಲು ಸೇವೆಯನ್ನು ಬೇರೆ ಪ್ರಮುಖ ನಗರಗಳ ನಡುವೆ ಆರಂಭಿಸುವ ಯೋಜನೆ ಇದೆ. ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ ಹಾಗೂ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ನೀಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಭಾರತದ ರೈಲುಗಾಡಿ ಯುಗದ ಹೊಸ ಹೊಸ್ತಿಲು ಎಂದೇ ಹೇಳಬಹುದಾಗಿದೆ. ಇದೇ ನವೀಕೃತ ಸೇವೆಗಳ ಮೂಲಕ ಭಾರತೀಯ ರೈಲ್ವೆ ಹೆಚ್ಚು ವೇಗ ಹಾಗೂ ಸುಧಾರಿತ ವ್ಯವಸ್ಥೆಗಳಿಗೆ ಹೆಜ್ಜೆಯಿಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ಗುಣಮಟ್ಟದ, ವೇಗದ, ಹಾಗೂ ಆರಾಮದಾಯಕ ಪ್ರಯಾಣ ಸಿಗಲಿದ್ದು, ದೇಶದ ಬಲವರ್ಧನೆಗೆ ಸಹಕಾರಿಯಾಗಲಿದೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ