Vande Bharat : ಹೊಸ 19 ಮಾರ್ಗಗಳಲ್ಲಿ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭ!

Vande Bharat

ಜಾರ್ಖಂಡ್, ಬಿಹಾರ, ಬಂಗಾಳ ಮತ್ತು ಒಡಿಶಾದ 19 ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು (Vandhe Bharath Train) ಸಂಚಾರಕ್ಕೆ ಸಿದ್ಧ.

ಇಂದು ಮಾರುಕಟ್ಟೆಗೆ ಹಲವಾರು ರೀತಿಯ ವಾಹನಗಳು (Vehicles) ಬಂದಿದ್ದರೂ ಕೂಡ ಕೆಲವರು ಸಾಂಪ್ರದಾಯಿಕ ವಾಹನಗಳನ್ನೇ ಬಳಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ರೈಲು (Train) ಕೂಡ ಒಂದು ರೀತಿಯ ಸಾಂಪ್ರದಾಯಿಕ ಸಂಚಾರಿ ವಾಹನವೆಂದೇ ಕರೆಯಬಹುದು. ರೈಲಿನಲ್ಲಿ ಸಂಚಾರ ಮಾಡುವುದುರಿಂದ ಬೆಲೆ ಕಡಿಮೆ ಇರುತ್ತದೆ ಹಾಗೂ ಸಂಚರಿಸುವಾಗ ಸುಗಮವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಇನ್ನು ಕೆಲ ವಿದ್ಯಾರ್ಥಿಗಳು ರೈಲು ಸಂಚಾರವನ್ನು ಹೆಚ್ಚು ಇಷ್ಟಪಡುತ್ತಾರೆ. ರೈಲಿನಲ್ಲಿ ಸಂಚರಿಸುವಾಗ ಆರಾಮದಾಯಕವಾಗಿ ಕುಳಿತುಕೊಂಡು ತಮಗಿಷ್ಟವಾದಂತಹ ಪುಸ್ತಕಗಳನ್ನು ಓದುತ್ತಾ ಸಂಚರಿಸಿದರೆ ಪ್ರಯಾಣದ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ರೈಲು ಸಂಚಾರವನ್ನು ಇಷ್ಟಪಡುತ್ತಾರೆ. ಸಾರ್ವಜನಿಕರೂ (public) ಕೂಡ ಹೆಚ್ಚಿನದಾಗಿ ಈ ರೈಲು ಸಂಚಾರವನ್ನು ಇಷ್ಟ ಪಡುತ್ತಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ ಈಗಾಗಲೇ ದೇಶದಾದ್ಯಂತ ಪ್ರಚಾರದಲ್ಲಿರುವಂತಹ ಒಂದೇ ಭಾರತ್ ರೈಲು ಹಲವಾರು ಪ್ರದೇಶಗಳಲ್ಲಿ ಸಂಚಾರ ಆರಂಭಿಸಿದೆ. ಶೀಘ್ರದಲ್ಲಿಯೇ ಒಂದೇ ಭಾರತ್ ರೈಲ್ ಅನ್ನು ಆಗ್ನೇಯ ರೈಲು ವಲಯದ ನಾಲ್ಕು ರಾಜ್ಯಗಳ 19 ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ಮೆಟ್ರೋ (vandhe bharath metro train) ರೈಲು ಓಡಿಸಲು ರೈಲ್ವೆ ಇಲಾಖೆ(Railway Department) ಸಮೀಕ್ಷೆ ನಡೆಸಿದೆ. ಯಾವ ಯಾವ ಪ್ರದೇಶಗಳಲ್ಲಿ ಈ ಒಂದು ರೈಲು ಸಂಚರಿಸಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ದೇಶಾದ್ಯಂತ ವಂದೇ ಭಾರತ್‌ ರೈಲು ಸಂಚಾರ ಆರಂಭಿಸಿ ಪ್ರಯಾಣಿಕರ ಮನಸ್ಸನ್ನು ಗೆದ್ದಿದೆ. ಆದ್ದರಿಂದ ಆಗ್ನೇಯದ ರೈಲ್ವೆ ವಲಯವು ನಾಲ್ಕು ರಾಜ್ಯಗಳಾದ ಜಾರ್ಖಂಡ್, ಬಿಹಾರ, ಬಂಗಾಳ ಮತ್ತು ಒಡಿಶಾದ ನಿಲ್ದಾಣಗಳಲ್ಲಿ ವಂದೇ ಭಾರತ್ ಮೆಟ್ರೋ ರೈಲನ್ನು  19 ಮಾರ್ಗಗಳಲ್ಲಿ ಓಡಿಸಲು ರೈಲ್ವೆ ಇಲಾಖೆ ಸಮೀಕ್ಷೆ ನಡೆಸಿದೆ. ಇನ್ನು ಹೆಚ್ಚಿನ ಪ್ರಯಾಣಿಕರು ಆಧುನಿಕ ಸೌಲಭ್ಯಗಳನ್ನು ಪಡೆಯುವುದರ ಜೊತೆಗೆ ಆರಾಮದಾಯಕವಾಗಿ ವಂದೇ ಭಾರತ್‌ ಮೆಟ್ರೊ ರೈಲಿನ ಸೌಲಭ್ಯ ಪಡೆಯಬಹುದು. ಇದರಿಂದಾಗಿ ಟಾಟಾನಗರದಿಂದ ಗಯಾ, ಹೌರಾ, ಧನ್‌ಬಾದ್‌ ಮಾರ್ಗವಾಗಿ ವಂದೇ ಭಾರತ್‌ ಮೆಟ್ರೊ ರೈಲು ಓಡಿಸುವ ಯೋಜನೆ ಹೊಂದಿದೆ.

ಹೊಸ ವಂದೇ ಭಾರತ್ ರೈಲು ಪ್ರವಾಸೋದ್ಯಮಕ್ಕೂ (tourism) ಕೂಡ ಆದ್ಯತೆಯನ್ನು ನೀಡುತ್ತಿದೆ:

ಹೌದು ಜಾರ್ಖಂಡ್, ಬಂಗಾಳ ಮತ್ತು ಒಡಿಶಾ ಪ್ರದೇಶಗಳಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ ಹೊಸ ವಂದೇ ಭಾರತ್ ರೈಲು. ಇನ್ನು ಈ ವಿಷಯದ ಮೇಲೆ ಶೀಘ್ರದಲ್ಲಿ ಪ್ರಯೋಗಗಳು ನಡೆಯಲಿವೆ. ರೈಲ್ವೆ ಇಲಾಖೆಯ ಪ್ರಕಾರ ಹೊಸ ಮಾರ್ಗದಲ್ಲಿ ಒಂದೇ ಭಾರತ್ ಮೆಟ್ರೋ ರೈಲು ಓಡಿಸುವ ಮುಖಾಂತರ ಪ್ರವಾಸೋದ್ಯಮಕ್ಕೂ ಆದ್ಯತೆಯನ್ನು ನೀಡಲಾಗುತ್ತಿದೆ.

ಹೊಸ ವಂದೇ ಭಾರತ್ ರೈಲು ಸಂಚರಿಸುವ ಮಾರ್ಗಗಳು :

ಈ ಹೊಸ ಯೋಜನೆಯಡಿ, ವಂದೇ ಭಾರತ್ ರೈಲು ರಾಂಚಿ, ಬೊಕಾರೊ, ರೂರ್ಕೆಲಾ, ಟೋರಿ, ಅಸನ್ಸೋಲ್ ಮತ್ತು ಖರಗ್‌ಪುರದಿಂದ ದಿಘಾ, ಬಾಲಸೋರ್ ಮತ್ತು ಇತರ ಮಾರ್ಗಗಳಲ್ಲಿ ಸಂಚಾರ ಮಾಡಲಿದೆ. ಪ್ರಸ್ತುತ ವಂದೇ ಭಾರತ್ ರೈಲು ರಾಂಚಿಯಿಂದ ಹೌರಾಕ್ಕೆ ಟಾಟಾನಗರಗಳ ಮುಖೇನ ಸಂಚರಿಸಲಿದ್ದು, ಬುಕಿಂಗ್ ನ ಪ್ರಕ್ರಿಯೆಯನ್ನು ಗಮನಿಸಿದಾಗ ಟಾಟಾ ನಗರದಿಂದ ಹೆಚ್ಚಿನ ಆಸನಗಳು ಬುಕ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿಯಲ್ಲಿ (In February) ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ( Railway Minister Ashwini Vaishnav)
ಅವರು ನೀಡಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 82 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಓಡುತ್ತಿವೆ ಎಂದು ಹೇಳಿದ್ದರು. ದಿನೇ ದಿನೇ ಒಂದೇ ಭಾರತಿ ರೈಲುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅದರಲ್ಲೂ ಕೂಡ ಒಂದೇ ಭಾರತ್ ರೈಲನ್ನು ಪ್ರಯಾಣಿಕರು ಕೂಡ ಹೆಚ್ಚಿನದಾಗಿ ಇಷ್ಟಪಡುತ್ತಿದ್ದಾರೆ. ಆದ್ದರಿಂದ ವರ್ಷದಿಂದ ವರ್ಷಕ್ಕೆ ಒಂದೇ ಭಾರತ್ ರೈಲುಗಳು ಒಂದೊಂದಾಗಿ ಹೆಚ್ಚಾಗಿವೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!