ವರಮಹಾಲಕ್ಷ್ಮಿ ವೃತ – ಸಂಪೂರ್ಣ ಪೂಜಾ ವಿಧಾನ, ದಿನಾಂಕ ಶುಭ ಸಮಯ ಮತ್ತು ಹಬ್ಬದ ಮಹತ್ವವನ್ನು ತಿಳಿಯಿರಿ

WhatsApp Image 2023 08 21 at 20.22.44

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ವರಮಹಾಲಕ್ಷ್ಮಿಯ ಪೂಜಾ(varamahalakshmi pooja festival) ವಿಧಾನದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಇದೆ ಆಗಸ್ಟ್ ತಿಂಗಳಿನ 25ನೇ ತಾರೀಕಿನಂದು ಶುಭ ಶುಕ್ರವಾರ ಆಚರಿಸಲಾಗುತ್ತದೆ. ಈ ಪೂಜೆಯನ್ನು ಮಾಡುವ ಉದ್ದೇಶವೇನು?, ಪೂಜೆಗೆ ಬೇಕಾದ ಸಾಮಗ್ರಿಗಳು ಯಾವುವು?, ಪೂಜೆಯ ವಿಧಾನ ಹೇಗೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಶ್ರಾವಣ ಶುಕ್ರವಾರದಂದು ಮಾಡುವ ವರಮಹಾಲಕ್ಷ್ಮಿ ಹಬ್ಬ :

ವರಮಹಾಲಕ್ಷ್ಮಿ ವ್ರತದ ಉಪವಾಸದ ನಿಯಮಗಳು ತುಂಬಾ ಕಟ್ಟುನಿಟ್ಟಾದವು ಮತ್ತು ಈ ವ್ರತವನ್ನು ಹೆಚ್ಚಾಗಿ ವಿವಾಹಿತ ಮಹಿಳೆ (ಸುಮಂಗಲಿಯರು) ತಮ್ಮ ಪತಿ, ಮಕ್ಕಳು ಮತ್ತು ಇತರ ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ, ಈ ದಿನದಂದು ವರಲಕ್ಷ್ಮಿ ದೇವಿಯನ್ನು ಪೂಜಿಸುವುದು ಸಂಪತ್ತು, ಭೂಮಿ, ಬುದ್ಧಿವಂತಿಕೆ, ಪ್ರೀತಿ, ಖ್ಯಾತಿ, ಶಾಂತಿ, ತೃಪ್ತಿ ಮತ್ತು ಶಕ್ತಿಯ ಎಂಟು ದೇವತೆಗಳಾದ ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾಗಿದೆ. ವರಲಕ್ಷ್ಮಿ ವ್ರತವು ಹಿಂದೂ ಹಬ್ಬವಾಗಿದ್ದು, ಇಲ್ಲಿ ಭಕ್ತರು  ವಿಷ್ಣುವಿನ ಪತ್ನಿಯಾದ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಭವಿಷ್ಯೋತ್ತರಪುರಾಣದಲ್ಲಿ ಪಾರ್ವತೀ ಪರಮೇಶ್ವರರ ಸಂವಾದ ರೂಪದಲ್ಲಿ ಈ ವ್ರತವು ಉಪದೇಶಿಸಲ್ಪಟ್ಟಿದೆ‌. ಸಾಧಾರಣವಾಗಿ ಬೇರೆಲ್ಲಾ ವ್ರತಾದಿಗಳಿಗೆ ತಿಥಿ-ನಕ್ಷತ್ರಗಳು ಪ್ರಧಾನವಾದರೆ ವರಮಹಾಲಕ್ಷ್ಮೀವ್ರತಕ್ಕೆ ವಾರವೇ ಪ್ರಧಾನ.

whatss

ಪೂಜೆಗೆ ಬೇಕಾದ ಸಾಮಗ್ರಿಗಳು :

ದೇವಿಯ ಮುಖವಾಡ
ಕಲಶ
ದೇವಿಗೆ ಸೀರೆ
ದೇವಿಗೆ ಆಭರಣಗಳು,
ಕನ್ನಡಿ
3 ತೆಂಗಿನಕಾಯಿ
ಹೂಗಳು
ಅರಿಶಿಣ ದಾರಗಳು
ಪೀಠ ಅಥವಾ ಮರದ ಮಣೆ
ತಾಜಾ ಹೂವುಗಳಿಂದ ಮಾಡಿದ ಹಾರ
ವೀಳ್ಯದೆಲೆ, ಅಡಿಕೆ
ಹಣ್ಣುಗಳು
ಅರಿಶಿಣ
ಚಂದನ
ಕುಂಕುಮ
ರಂಗೋಲಿ
ಅಕ್ಕಿ
ಅಕ್ಷತೆ
ಎಣ್ಣೆ, ತುಪ್ಪ, ದೀಪ ಮತ್ತು ಇತರೆ ಪೂಜಾ ಸಾಮಗ್ರಿಗಳು

ವರಮಹಾಲಕ್ಷ್ಮಿ ಪೂಜಾ ವಿಧಾನ:

ಮೊದಲನೆಯದಾಗಿ ಮಹಾಲಕ್ಷ್ಮಿ ದೇವಿಗೆ ಧರಿಸುವ ಸಿರಿಯನ್ನು ಆರಿಸಿ ಸಿದ್ಧಮಾಡಿರಿಸಿಕೊಳ್ಳಿ

ತುಂಬಿದ ಕೊಡದ ನೀರಿನಿಂದ ನಿಗದಿಪಡಿಸಿದ ಜಾಗವನ್ನು ಶುಚಿಗೊಳಿಸಬೇಕು ಸಾಧ್ಯವಾದಲ್ಲಿ ಸ್ವಲ್ಪ ಗೋಮಯದಿಂದ ಶುಚಿಗೊಳಿಸಿ.

ಸ್ವಚ್ಛವಾದ ಮೇಲೆ ನೆಲದ ಮೇಲೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು.

ಆ ರಂಗವಲ್ಲಿಯ ಮೇಲೆ ಪೀಠವನ್ನು ಪ್ರತಿಷ್ಟಾಪಿಸಬೇಕು.

ಈಗ ಪೀಠದ ಮೇಲೆ ತುದಿಬಾಳೆಯೆಲೆಯನ್ನು ಇಡಬೇಕು ಈ ಬಾಳೆಯೆಲೆಯನ್ನು ಮನುಷ್ಯರಿಗಿಡುವಂತೆ ಇಡದೆ ವಿರುದ್ಧ ದಿಕ್ಕಿನಲ್ಲಿಡಬೇಕು ಇಲ್ಲವೇ ತುದಿ ಮುಂಭಾಗಕ್ಕೆ ಬರುವಂತೆ ಉದ್ದಕ್ಕೆ ಇಡಬೇಕು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಬಾಳೆಯ ಮೇಲೆ ಮತ್ತೊಮ್ಮೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು.

ನಂತರ ಅಕ್ಕಿಯನ್ನು ಬಾಳೆಯೆಲೆಯಮೇಲೆ ಹರಡಬೇಕು. ಹೀಗೆ ಹರಡಿದ ಅಕ್ಕಿಯಮೇಲೆ ತಟ್ಟೆ ಅಥವ ಗೋಲದ ಬಟ್ಟಲನ್ನಿಟ್ಟು ಅದರಲ್ಲಿ ಅಕ್ಕಿ ತುಂಬಬೇಕು ಇದರೊಂದಿಗೆ ಗೋಡಂಬಿ, ದ್ರಾಕ್ಷಿ, ಬಾದಮಿ, ಉತ್ತುತ್ತಿ ಇತ್ಯಾದಿ ಒಣ ಹಣ್ಣುಗಳನ್ನು ಸೇರಿಸಬೇಕು

ಇದರ ಮೇಲೆ ಕಲಶವನ್ನಿಟ್ಟು ಕಲಶಕ್ಕೆ ಮೊದಲಿಗೆ ನೀರನ್ನು ಹಾಕಿ (ಏಳು ಪವಿತ್ರ ಕ್ಷೇತ್ರಗಳ ಪುಷ್ಕರಣಿ ನೀರು ಅಥವಾ ಸಮುದ್ರದ ನೀರು ಅಥವಾ ಬಾವಿಯ ಶುಧ್ಧವಾದ ನೀರು (ಅದರಲ್ಲೂ ಆಮೆಯಿರುವ ಬಾವಿ ನೀರು ಶ್ರೇಷ್ಠ) ತುಂಬಿರಿ.

ತುಂಬಿದ ಕಲಶಕ್ಕೆ ಅರಶಿಣ, ಕುಂಕುಮ, ಶ್ರೀಗಂಧ, ಚಂದನ, ಒಂದು ಬೆಳ್ಳಿ ನಾಣ್ಯ ಒಂದು ಚಿನ್ನದ ಚೂರು, ಸ್ವಲ್ಪ ಅಕ್ಕಿ ಸೇರಿಸಬೇಕು.

ಹೀಗೆ ತಯಾರಾದ ಕಲಶಕ್ಕೆ ಪೂಜಿಸುವ ಮೊದಲು ತುಳಸೀ ಪೂಜೆಯನ್ನು ಮಾಡಬೇಕು. ತುಳಸಿಯನ್ನು ಪೂಜಿಸಿ ನೈವೇದ್ಯ ಸಲ್ಲಿಸಿದ ಬಳಿಕ ಗಂಗೆಯನ್ನು ಪೂಜಿಸಿ ಲಕ್ಷ್ಮಿಯನ್ನು ಮನೆಯೊಳಕ್ಕೆ ಆಹ್ವಾನಿಸಬೇಕು.

ಹೀಗೆ ಅಹ್ವಾನಿಸಿದ ಗಂಗೆಯನ್ನು ಮಹಾಲಕ್ಷ್ಮಿಯ ಮೂಲ ಕಲಶಕ್ಕೆ ಬೆರೆಸಬೇಕು.

ಗಣಪತಿ ಪೂಜೆಯನ್ನು ಮಾಡಿ ಲಕ್ಷ್ಮಿಗೆ ಷೋಡಶೋಪಚಾರದಿಂದ ಪೂಜಿಸಬೇಕು.

ಶ್ರೀ ಮಹಾಲಕ್ಷ್ಮಿ ಯನ್ನು ಅಲಂಕರಿಸುವಾಗ ಜಾಗ್ರತೆಯಾಗಿರಬೇಕು ಆಭರಣಗಳನ್ನು ಮೊದಲೇ ಸ್ವಚ್ಛವಾಗಿ ತೊಳೆದು ನಂತರ ಅರಿಶಿಣದ ನೀರಲ್ಲಿ ಒಂದು ದಿನ ನೆನೆಯಿಸಿ ಇಟ್ಟು ನಂತರ ಶ್ರಂಗಾರಕ್ಕೆ ಬಳಸವುದು ಯೋಗ್ಯ. ಪ್ರತ್ಯೇಕ ಆಭರಣ/ಮೀಸಲು ಆಭರಣ ಇಟ್ಟಿದ್ದರೆ ಅದನ್ನಷ್ಟೆ ಉಪಯೋಗಿಸಬೇಕು.

ಪೂಜೆಯ ನಂತರ ಬ್ರಾಹ್ಮಣರಿಗೆ ತೆಂಗಿನಕಾಯಿ ಹಾಗು ವಸ್ತ್ರದೊಂದಿಗೆ ತಾಂಬೂಲ ಗೌರವ/ಉಪಾಯನ ದಾನ ನೀಡಿದರೆ ಒಳ್ಳೆಯದು.

ಮುತ್ತೈದೆಯರಿಗೆ ಮೊರದಬಾಗಿನ ಕೊಟ್ಟು ಕನ್ಯೆಯರಿಗೆ ತಾಂಬೂಲ ಗೌರವ ಕೊಡಬಹುದು.

Picsart 23 07 16 14 24 41 584 transformed 1

ವರಲಕ್ಷ್ಮಿ ಮಂತ್ರ:

ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ|
ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ||

ಈ ವಿಶಿಷ್ಟವಾದ ವರಮಹಾಲಕ್ಷ್ಮಿಯ ವ್ರತವನ್ನು ಎಲ್ಲರೂ ಭಕ್ತಿಯಿಂದ ಆಚರಿಸೋಣ. ದೇವಿ ವರಮಹಾಲಕ್ಷ್ಮಿ, ಸರ್ವರಿಗೂ ಆರೋಗ್ಯ, ಐಶ್ವರ್ಯ, ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ ಎಂದು ಈ ಲೇಖನದ ಮೂಲಕ ಆ ತಾಯಿಯಲ್ಲಿ  ಬೇಡಿಕೊಳ್ಳುತ್ತಿದ್ದೇವೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!