ಕುಂಭಮೇಳ 2025: ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿ-ವಾರಣಾಸಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಘೋಷಣೆ
ಭಾರತೀಯ ಸಂಸ್ಕೃತಿಯ ಅತೀ ದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಕುಂಭಮೇಳವು (Kumbhmel) ಪ್ರಮುಖವಾಗಿದೆ. ಲಕ್ಷಾಂತರ ಭಕ್ತರು ಈ ಪವಿತ್ರ ಕೂಟದಲ್ಲಿ ಭಾಗವಹಿಸಲು ದೇಶದ ನಾನಾ ಭಾಗಗಳಿಂದ ವಾರಣಾಸಿಗೆ ಆಗಮಿಸುತ್ತಾರೆ. ಹೀಗಾಗಿ, ಈ ದಟ್ಟ ಪ್ರಯಾಣಿಕರನ್ನು ನಿಭಾಯಿಸಲು, ಭಾರತೀಯ ರೈಲ್ವೆ ಇಲಾಖೆ (Indian Railway Department) ಹೊಸ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಕರ್ನಾಟಕದ ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ವಾರಣಾಸಿಗೆ ನೇರವಾಗಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ವ್ಯವಸ್ಥೆ (Express Railway Services) ಮಾಡಲಾಗಿದೆ. ಇದು ಕುಂಭಮೇಳಕ್ಕೆ ತೆರಳುವ ಭಕ್ತರ ಪ್ರಯಾಣವನ್ನು ಸುಗಮಗೊಳಿಸಲು ಸಹಾಯಕವಾಗಲಿದೆ. ಯಾವ ಯಾವ ಸಮಯಕ್ಕೆ ಈ ವಿಶೇಷ ರೈಲುಗಳನ್ನು ಬಿಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ರೈಲ್ವೆ ಮಂಡಳಿಯ (Rilway Department) ಮಹತ್ವದ ನಿರ್ಧಾರ :
ಭಾರತೀಯ ರೈಲ್ವೆ ಮಂಡಳಿ, ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಶ್ರೀ ಸಿದ್ಧಾರೂಢ ಸ್ವಾಮೀಜಿ (Shree Siddarudha Swamiji) ಹುಬ್ಬಳ್ಳಿ ಮತ್ತು ವಾರಣಾಸಿ ನಡುವಿನ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗೆ ಅನುಮೋದನೆ ನೀಡಿದೆ. ಈ ವಿಶೇಷ ರೈಲುಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಮೂರು ಟ್ರಿಪ್‌ಗಳಿಗೆ ಲಭ್ಯವಿರಲಿವೆ.
ರೈಲು ವೇಳಾಪಟ್ಟಿ ಹಾಗೂ ನಿಲ್ದಾಣಗಳು (Train Timings and Platforms) :
ಹುಬ್ಬಳ್ಳಿಯಿಂದ ವಾರಣಾಸಿಗೆ:
ರೈಲು ಸಂಖ್ಯೆ: 07383
ಪ್ರಾರಂಭ ದಿನಾಂಕಗಳು: ಫೆಬ್ರವರಿ 14, 21, 28 (ಶುಕ್ರವಾರ)
ನಿಲ್ದಾಣದಿಂದ ಹೊರಡುವ ಸಮಯ: ಬೆಳಿಗ್ಗೆ 8:00 ಗಂಟೆ
ವಾರಣಾಸಿಗೆ ಆಗಮಿಸುವ ಸಮಯ: ಭಾನುವಾರ ಬೆಳಿಗ್ಗೆ 5:30 ಗಂಟೆ
ವಾರಣಾಸಿಯಿಂದ ಹುಬ್ಬಳ್ಳಿಗೆ (Varanasi to Hubballi) :
ರೈಲು ಸಂಖ್ಯೆ: 07384
ಪ್ರಾರಂಭ ದಿನಾಂಕಗಳು: ಫೆಬ್ರವರಿ 17, 24 ಮತ್ತು ಮಾರ್ಚ್ 3 (ಸೋಮವಾರ)
ನಿಲ್ದಾಣದಿಂದ ಹೊರಡುವ ಸಮಯ: ಬೆಳಿಗ್ಗೆ 5:00 ಗಂಟೆ
ಹುಬ್ಬಳ್ಳಿಗೆ ಆಗಮಿಸುವ ಸಮಯ: ಬುಧವಾರ ರಾತ್ರಿ 12:45
ಈ ರೈಲುಗಳು ಎರಡು ಮಾರ್ಗಗಳಲ್ಲಿ ಒಟ್ಟು 30ಕ್ಕೂ ಹೆಚ್ಚು ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿವೆ. ಅವುಗಳಲ್ಲಿ ಧಾರವಾಡ, ಬೆಳಗಾವಿ, ಪುಣೆ, ಭೂಸಾವಲ್, ಜಬಲ್ಪುರ, ಸತ್ನಾ, ಪ್ರಯಾಗ್‌ರಾಜ್ ಚಿಯೋಕಿ, ಮಿರ್ಜಾಪುರ, ಮತು ಚುನಾರ್ ಮುಖ್ಯವಾಗಿವೆ.
ಬೋಗಿಗಳ (Coach) ವ್ಯವಸ್ಥೆ ಹೇಗಿರಲಿದೆ?:
ಈ ವಿಶೇಷ ರೈಲುಗಳಲ್ಲಿ ಒಟ್ಟು 18 ಬೋಗಿಗಳಿವೆ:
1 ಎಸಿ ಟು ಟೈರ್ ಕೋಚ್
4 ಎಸಿ ತ್ರಿ ಟೈರ್ ಕೋಚ್‌ಗಳು
11 ಸ್ಲೀಪರ್ ಕೋಚ್‌ಗಳು
1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್
1 ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್
ಪ್ರಯಾಣಿಕರೇ ಗಮನಿಸಿ (Notice) :
ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯದ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆ ಅಧಿಕೃತ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಬಹುದು. ಜೊತೆಗೆ, ಯಾವುದೇ ತುರ್ತು ಮಾಹಿತಿ ಅಥವಾ ಸಹಾಯಕ್ಕಾಗಿ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದು.
ಈ ಹೊಸ ವಿಶೇಷ ರೈಲು ಸೇವೆ (Special Train Service), ಕುಂಭಮೇಳಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೈಗೊಳ್ಳಲಾದ ಪ್ರಮುಖ ಕ್ರಮವಾಗಿದೆ. ಈ ಪ್ರಯತ್ನವು ಭಕ್ತರ ಪಯಣವನ್ನು ಸುಲಭಗೊಳಿಸುವುದರ ಜೊತೆಗೆ, ಹೆಚ್ಚುವರಿ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.