ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ ಯೋಜನೆಗಳು, ನೀವು ಅರ್ಜಿ ಹಾಕಿ

WhatsApp Image 2025 03 14 at 10.06.55 AM

WhatsApp Group Telegram Group

ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ (Vasati Yojane) ಆರ್ಥಿಕವಾಗಿ ಹಿಂದುಳಿದ ವರ್ಗದವರು ಮತ್ತು ಸ್ವಂತ ಮನೆಯಿಲ್ಲದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಮನೆಗಳನ್ನು ಒದಗಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಸತಿ ಸಚಿವ ಜಮೀರ ಅಹ್ಮದ್ ಅವರು ಸದನದಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಲಿಖಿತ ಉತ್ತರವನ್ನು ಹಂಚಿಕೊಂಡಿದ್ದಾರೆ.  ರಾಜ್ಯದ ವಿವಿಧ ವಸತಿ ಯೋಜನೆಗಳು, ಅವುಗಳ ಉದ್ದೇಶಗಳು, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳ ಕುರಿತು ವಿವರವಾಗಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳು (Vasati Yojane) ಆರ್ಥಿಕವಾಗಿ ಹಿಂದುಳಿದ ವರ್ಗದವರು, ಕಡಿಮೆ ಆದಾಯದ ಕುಟುಂಬಗಳು ಮತ್ತು ಸ್ವಂತ ಮನೆಯಿಲ್ಲದ ಅರ್ಹ ನಾಗರಿಕರಿಗೆ ಮನೆಗಳನ್ನು ಒದಗಿಸುವ ದಿಶೆಯಲ್ಲಿ ಸರ್ಕಾರದ ಮಹತ್ವದ ಉಪಕ್ರಮಗಳಾಗಿವೆ. ಈ ಯೋಜನೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಅನಾಥರು, ವೃದ್ಧರು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದವರಿಗೆ ಸುರಕ್ಷಿತ ಮತ್ತು ಸುಧಾರಿತ ವಸತಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಿಂದ ಕಾರ್ಯಗತಗೊಳ್ಳುತ್ತಿರುವ ಈ ಯೋಜನೆಗಳು, ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ, ರಿಣ ಸಹಾಯ, ಮತ್ತು ಸಬ್ಸಿಡಿ ಸೌಲಭ್ಯಗಳನ್ನು ಒದಗಿಸುತ್ತವೆ. ಇದರ ಮೂಲಕ ಸರ್ಕಾರವು “ಎಲ್ಲರಿಗೂ ವಸತಿ” ಎಂಬ ಧ್ಯೇಯವನ್ನು ಸಾಧಿಸಲು ಶ್ರಮಿಸುತ್ತಿದೆ.  ವಸತಿ ಸಚಿವ ಜಮೀರ ಅಹ್ಮದ್ನೀಡಿದ ಉತ್ತರದ ವಿವರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಯಾವೆಲ್ಲ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಾಣ (Karnataka Vasati Yojane) ಮಾಡಿಕೊಡಲಾಗುತ್ತಿದೆ?

ರಾಜ್ಯದಲ್ಲಿ ಪ್ರಸ್ತುತ ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ವಸತಿ ಸಚಿವರು ಸದನದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1.80 ಲಕ್ಷ ಮನೆಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ 36,749 ಮನೆಗಳನ್ನು (Home Loan) ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ 39,843 ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ. ಇನ್ನುಳಿದ ಬಾಕಿ 1.30 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Karnataka Vasati Yojane-ಈ ವರ್ಷ ವಿವಿಧ ವಸತಿ ಯೋಜನೆಗಳಡಿ 2.30 ಲಕ್ಷ ಮನೆಗಳ ನಿರ್ಮಾಣ:

ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ 46 ಸಾವಿರ ಮನೆ ಸೇರಿದಂತೆ ಕೇಂದ್ರ ಸರಕಾರದ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಈ ವರ್ಷದ ಅಂತ್ಯದ ಒಳಗಾಗಿ 2.30 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಕಳೆದ ಸರ್ಕಾರದಲ್ಲಿ ವಿವಿಧ ಯೋಜನೆಗಳಡಿ ಹಂಚಿಕೆಯಾದ ಮನೆಗಳನ್ನು ಪೂರ್ಣಗೊಳಿಸಿ ಹಂಚಿಕೆ ಮಾಡಲಾಗಿದೆಯೇ; ಎಷ್ಟು ಮನೆಗಳನ್ನು ಮಾಡಲಾಗಿದೆ?

ಸಚಿವರ ಉತ್ತರ: 2019-20 ರಿಂದ 2022-23ನೇ ಸಾಲಿನವರೆಗೆ ಕೇಂದ್ರ ಯೋಜನೆಯಡಿ ಹಂಚಿಕೆಯಾದ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಮನೆಗಳನ್ನು ಪೂರ್ಣಗೊಳಿಸಿ ಹಂಚಿಕೆ ಯೋಜನೆಗಳಡಿ ಒಟ್ಟಾರೆ ಹಂಚಿಕೆಯಾದ 7,59,896 ಮನೆಗಳನ್ನು ಮಾಡಲಾಗಿದೆ. ಇದರಲ್ಲಿ 6,55,647 ಮನೆಗಳು ಹಂಚಿಕೆ ಮಂಜೂರು ಮಾಡಲಾಗಿದೆ. ಮಂಜೂರಾದ ಮನೆಗಳ ಪೈಕಿ 3,03,890 ಮನೆಗಳು ಪೂರ್ಣಗೊಂಡಿರುತ್ತವೆ. 1,56,151 ಮನೆಗಳು ಪ್ರಾರಂಭವಾಗಬೇಕಾಗಿದ್ದು, ಇನ್ನುಳಿದ 58,508 ಮನೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ತಾತ್ಕಾಲಿಕವಾಗಿ ತಡೆಹಿಡಿಯಲಾಗಿರುತ್ತದೆ. ಯೋಜನವಾರು ವಿವರವನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ.

Home Subsidy Schemes-ಯಾವೆಲ್ಲ ಯೋಜನೆಗಳಡಿ ವಸತಿಯನ್ನು ಪಡೆಯಬಹುದು?

ನಾಗರಿಕರು ಈ ಕೆಳಗೆ ತಿಳಿಸಿರುವ ವಸತಿ ಯೋಜನೆಗಳಡಿ ಅರ್ಹತೆ ಅನುಸಾರವಾಗಿ ಅರ್ಜಿಯನ್ನು ಸಲ್ಲಿಸಿ ಅರ್ಹ ಫಲಾನುಭವಿಗಳು ವಸತಿಯನ್ನು ಪಡೆಯಲು ಅವಕಾಶವಿರುತ್ತದೆ.

  1. ಬಸವ ವಸತಿ ಯೋಜನೆ (Basava Vasati Yojane)
  2. ದೇವರಾಜು ಅರಸು ವಸತಿ ಯೋಜನೆ (ಗ್ರಾಮೀಣ) (Devaraju Arasu Vasati Yojane – Rural)
  3. ದೇವರಾಜು ಅರಸು ವಸತಿ ಯೋಜನೆ (ನಗರ) (Devaraju Arasu Vasati Yojane – Urban)
  4. ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ (ಗ್ರಾಮೀಣ) (Dr. B.R. Ambedkar Vasati Yojane – Rural)
  5. ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ (ನಗರ) (Dr. B.R. Ambedkar Vasati Yojane – Urban)
  6. ಪ್ರಧಾನ ಮಂತ್ರಿ ಅವಾಸ್ ಯೋಜನೆ (ಗ್ರಾಮೀಣ) (Pradhan Mantri Awas Yojana – Rural)
  7. ವಾಜಪೇಯಿ ನಗರ ಯೋಜನೆ (Vajpayee Nagara Yojane)
  8. ಪ್ರಧಾನ ಮಂತ್ರಿ ಅವಾಸ್ ಯೋಜನೆ (ನಗರ) – Non Convergence (Pradhan Mantri Awas Yojana – Urban – Non Convergence)
  9. ಪ್ರಧಾನ ಮಂತ್ರಿ ಅವಾಸ್ ಯೋಜನೆ (ನಗರ) – AHP (Pradhan Mantri Awas Yojana – Urban – AHP)
ರಾಜೀವ್ ಗಾಂಧಿ ವಸತಿ ನಿಗಮದ (Rajiv Gandhi Nigama) ವೆಬ್ಸೈಟ್ ಲಿಂಕ್- Click here

ಈ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿಯಲು ಮೇಲೆ ನೀಡಿರುವ ಲಿಂಕ್ ಅನ್ನು ಬಳಸಿ. ರಾಜ್ಯ ಸರ್ಕಾರದ ವಸತಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮನೆಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈ ಯೋಜನೆಗಳ ಮೂಲಕ ಸ್ವಂತ ಮನೆಯನ್ನು ಹೊಂದಲು ಅರ್ಹರಾದವರು ಅರ್ಜಿ ಸಲ್ಲಿಸಿ ಲಾಭ ಪಡೆಯಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!