ಕಳೆದ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆಗಳು ಏರಿಕೆಯಾಗಿದ್ದು, ಪೂರೈಕೆ ಕೊರತೆ ಮತ್ತು ತರಕಾರಿಗಳ ಗುಣಮಟ್ಟದಲ್ಲಿನ ತ್ವರಿತ ಕ್ಷೀಣತೆ ಇದಕ್ಕೆಲ್ಲ ಕಾರಣ ಎಂದು ಹೇಳಬಹುದು. ಸಗಟು ಮಾರುಕಟ್ಟೆಗಳಲ್ಲಿ ಬೆಲೆಗಳು ಸ್ವಲ್ಪ ಏರಿಕೆ ಕಂಡಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಬೆಲೆಗಳು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಯಾವಾಗಲೂ ತರಕಾರಿಯ ಬೆಲೆಯಲ್ಲಿ 10 ರಿಂದ 20 % ಏರಿಕೆಯಾಗುತ್ತಿದ್ದರೆ ಇದೇ ಮೊದಲ ಬಾರಿಗೆ ಶೇಕಡ 100 ರಿಂದ 200 ರಷ್ಟು ತರಕಾರಿ ಬೆಲೆ ಏರಿಕೆ(vegetables price hike)ಯಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ ಆದ್ದರಿಂದ ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತರಕಾರಿಯ ಬೆಲೆ ಗಗನಕ್ಕೆ, ಚಿಕನ್-ಮಟನ್ ಹಾಗೂ ತರಕಾರಿ ಬೆಲೆಯು ಒಂದೇ ಆಗುತ್ತಿದೆ :
ಕಳೆದ ವಾರ ಮಳೆಯಾಗಿದ್ದರಿಂದ ಸ್ವಲ್ಪ ತರಕಾರಿ ಬೆಲೆ ಇಳಿದಿತ್ತು ಆದರೆ ಈ ವಾರ ಬೆಲೆ ದುಪಟ್ಟಾ ಗಿದೆ. ಮೇ ತಿಂಗಳಿನಲ್ಲಿ ಮದುವೆ ಹಾಗೂ ಗೃಹಪ್ರವೇಶದ ಸಮಾರಂಭಗಳು ಹೆಚ್ಚಾಗಿರುವುದರಿಂದ ತರಕಾರಿಗಳನ್ನು ಸಮಾರಂಭಗಳಿಗೆ ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ. ಅದರಲ್ಲಿಯೂ ಇತ್ತೀಚಿಗೆ ಗ್ರಾಹಕರು ತರಕಾರಿಯನ್ನು ಹೆಚ್ಚಿನದಾಗಿ ಖರೀದಿಸುವುದನ್ನೇ ಬಿಟ್ಟಿದ್ದಾರೆ ಎಂದು ತರಕಾರಿ ವ್ಯಾಪಾರಸ್ಥರು ಸಂಕಟವನ್ನು ವ್ಯಕ್ತಪಡಿಸುತ್ತಾರೆ. ತರಕಾರಿ ಮಾರುಕಟ್ಟೆಯಲ್ಲಿ ಜನರೇ ಇರದೆ, ದಿನದ ಕೊನೆಯಲ್ಲಿ ತರಕಾರಿಯನ್ನು ಚರಂಡಿಗೆ ಎಸೆಯುವ ಪರಿಸ್ಥಿತಿ ಬರುತ್ತಿದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಮಾಂಸ ಹರವಾದ ಚಿಕನ್ ಬೆಳೆಯು ಹಾಗೂ ತರಕಾರಿಯ ಬೆಲೆಯು ಒಂದೇ ಆಗಿಬಿಟ್ಟಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ಹಸಿರು ಎಲೆಗಳ ತರಕಾರಿಯ ಲಭ್ಯತೆಯು ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತಿದೆ. ದಿನನಿತ್ಯದ ಅಡುಗೆಗೆ ಬಳಸುವಂತಹ ಕೊತ್ತಂಬರಿ ಸೊಪ್ಪು ಹಾಗೂ ಪುದಿನಾ ಸೊಪ್ಪು ಸಿಗುವುದು ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ 20 ರೂ. ಗಡಿ ದಾಟಿದೆ. ತರಕಾರಿಗಳ ದರ ಕೈಗೆಟ್ಟುಕುತ್ತಿಲ್ಲ. ಹೀಗಾಗಿ ತಿಳಿ ಸಾರು ಮಾಡಲು ಸಹ ಗೃಹಿಣಿಯರು ಹಿಂದು ಮುಂದು ನೋಡುವಂತಾಗಿದೆ.
ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ದಾವಣಗೆರೆಯಲ್ಲಿಯೂ ಕೂಡ ತರಕಾರಿ ಬೆಲೆ ಗಗನಕ್ಕೇರಿದೆ. ತರಕಾರಿ ಬೆಲೆ ನೋಡುವುದಾದರೆ, ಬೀನ್ಸ್ ಕೆ.ಜಿಗೆ 200-250 ರೂಪಾಯಿ, ಟೊಮೆಟೊ 50-60 ರೂ, ಈರುಳ್ಳಿ 30-40 ರೂ, ಮೆಣಸಿನಕಾಯಿ 120 ರೂ, ಸೌತೆಕಾಯಿ 80 ರೂ, ಜವಳಿಕಾಯಿ 80 ರೂ, ನುಗ್ಗೇಕಾಯಿ 80 ರೂ, ಬೆಂಡೆಕಾಯಿ 60-80 ರೂ, ಬದನೆಕಾಯಿ 40 ರೂ, ಕ್ಯಾರೆಟ್ 80 ರೂಪಾಯಿ ಆಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.