Vegetable Price Hike: ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್, ಈರುಳ್ಳಿ, ಟೊಮೇಟೊ ದರ ಡಬಲ್!

vegetable price hike

ಬಿಸಿಲಿನ ತಾಪಮಾನ ಏರುತ್ತಿರುವುದರ ಜೊತೆಗೆ ತರಕಾರಿಯ ಬೆಲೆಯೂ ಕೂಡ ಏರುತ್ತಿದೆ. ಚಿನ್ನದ ಬೆಲೆ(Gold price) ಏರಿದರೆ ಅಷ್ಟೇನು ಬೇಸರವಾಗುವುದಿಲ್ಲ ಏಕೆಂದರೆ ನಾವು ಅದನ್ನು ದಿನನಿತ್ಯ ಖರೀದಿಸುವ ಅವಶ್ಯಕತೆ ಇಲ್ಲ ಆದರೆ ಪ್ರತಿದಿನದ ಅಡುಗೆಗೆ ಬೇಕಾದ ತರಕಾರಿಯ ಬೆಲೆ ಏರುತ್ತಿರುವುದು ಜನಸಾಮಾನ್ಯರಲ್ಲಿ ಕಳಮಳವನ್ನು ತರುತ್ತಿದೆ. ತರಕಾರಿಯಾ ಬೆಲೆ ಇರಲು ಕಾರಣವೇನು?, ಯಾವ ತರಕಾರಿ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಸಿಲಿನ ತಾಪದಿಂದ ಏರಿಕೆಯಾದ ತರಕಾರಿ ಬೆಲೆ :

Vegetables price hike: ಏರುತ್ತಿರುವ ತಾಪಮಾನ ಮತ್ತು ಕಳಪೆ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮದುವೆ ಹಾಗೂ ಜಾತ್ರೆಯ ಸಮಾರಂಭ(functions)ಗಳು ಹೆಚ್ಚಾಗಿರುವುದರ ಕಾರಣ ಸಮಾರಂಭಗಳಿಗೆ ತರಕಾರಿ ಹಾಗೂ ಸೊಪ್ಪಿನ ಪೂರೈಕೆಗಳನ್ನು ಮಾಡುವುದು ಕಷ್ಟವಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಹಲವಾರು ತರಕಾರಿಗಳು ಮತ್ತು ಸೊಪ್ಪಿನ ಬೆಲೆಗಳು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಈಗ ಒಂದು ಕಿಲೋ ಬೀನ್ಸ್ ಅಥವಾ ಕ್ಯಾರೆಟ್ 100 ರೂಪಾಯಿ ದಾಟಿದೆ.

ಕಳೆದ ವಾರದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರೂ, ತಾಪಮಾನ ಹೆಚ್ಚಿದೆ. ಬಿಸಿಲ ತಾಪಕ್ಕೆ ತರಕಾರಿ ಗಿಡಗಳಲ್ಲಿ ಹೂಗಳು ಬಾಡಿ ಹೋಗಿದ್ದು, ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಕೊಳವೆ ಬಾವಿಗಳು ಬತ್ತುತ್ತಿವೆ ಹಾಗೂ ಭೂಮಿಯ ಅಂತರ್ಜಲ ಕಡಿಮೆಯಾಗುತ್ತಿದೆ.

ಯಾವಾಗ ತರಕಾರಿ ಬೆಲೆ ಕಡಿಮೆ ಆಗುತ್ತೆ :

ನೆಲದಿಂದ ಸಾಕಷ್ಟು ಶಾಖ ಹೊರಹೊಮ್ಮುವುದರಿಂದ ಮತ್ತು ಮಳೆಯಿಲ್ಲದ ಕಾರಣ, ರೈತರು ಇಳುವರಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆಯ ಕೊರತೆಯಿದೆ. ಇನ್ನೆರಡು ತಿಂಗಳಲ್ಲಿ ಉತ್ತಮ ಮಳೆಯಾಗುವವರೆಗೆ ಬೆಲೆ ಹೆಚ್ಚಲಿದೆ ಎಂದು ಬೆಂಗಳೂರಿನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೇಳುತ್ತಿದ್ದಾರೆ.

ಹಸಿರು ಸೊಪ್ಪಿಗೂ ಬಂತು ಆಪತ್ತು :

ಶಾಖದ ಹಾನಿಯಿಂದಾಗಿ, ಹಸಿರು ಎಲೆಗಳ ತರಕಾರಿಗಳ ಲಭ್ಯತೆಯೂ ಮಾರುಕಟ್ಟೆಗಳಲ್ಲಿ ಕಡಿಮೆಯಾಗಿದೆ. ನಗರದ ಹೊರವಲಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳಾದ ತಾಜಾ ಕೊತ್ತಂಬರಿ ಸೊಪ್ಪು, ಪುದೀನಾ ಸಿಗುವುದು ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ಕಟ್ಟು ಸೊಪ್ಪಿನ ಬೆಲೆ ಮೊದಲಿಗಿಂತ ಐದು ರೂಪಾಯಿಗಳ ಹೆಚ್ಚುವರಿಯನ್ನು ಕಂಡಿದೆ.

ಪ್ರಸ್ತುತ ಕೆಜಿ ಗೆ ತರಕಾರಿಗಳ ಬೆಲೆ(vegetables price) ಹೇಗಿದೆ :

ಈರುಳ್ಳಿ : 40 ರೂ.
ಬೀನ್ಸ್ :150 ರೂ.
ರಿಂಗ್‌ ಬೀನ್ಸ್ :140 ರೂ.
ಬೀಟ್ರೂಟ್‌ : 50 ರೂ.
ಬೆಂಡೆಕಾಯಿ : 45 ರೂ.
ನವಿಲುಕೋಸು : 80 ರೂ.
ಹೀರೆಕಾಯಿ : 60 ರೂ.
ಟೊಮೇಟೋ – 40 ರೂ.
ಆಲೂಗೆಡ್ಡೆ- 50 ರೂ.
ಮೆಣಸಿನಕಾಯಿ- 90 ರೂ.
ಕ್ಯಾಪ್ಸಿಕಂ- 80 ರೂ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!