ಪ್ರಸಕ್ತ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ‘ವಿದ್ಯಾಸಿರಿ’ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ವಿದ್ಯಾ ವೇತನ ಯಾವ ತರಗತಿಯವರಿಗೆ ದೊರೆಯುತ್ತದೆ? ಈ ವಿದ್ಯಾ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು? ವಿದ್ಯಾರ್ಥಿ ವೇತನದ ಮೊತ್ತ ಎಷ್ಟು? ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾಸಿರಿ ವಿದ್ಯಾರ್ಥಿವೇತನ
ಸರ್ಕಾರಿ, ಖಾಸಗಿ ಅನುದಾನಿತ ವಿದ್ಯಾರ್ಥಿನಿಲಯಗಳಿಗೆ (Hostel Admission) ಪ್ರವೇಶ ಸಿಗದಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲವಾಗುವಂತೆ ಊಟ ಮತ್ತು ವಸತಿ ಸೌಲಭ್ಯಕ್ಕಾಗಿ ಹಣಕಾಸಿನ ಸಹಾಯ ಒದಗಿಸಲು ‘ವಿದ್ಯಾಸಿರಿ’ ಯೋಜನೆ ಜಾರಿ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ. 1,500/- ರಂತೆ, ಶೈಕ್ಷಣಿಕ ಅವಧಿಯ 10 ತಿಂಗಳಿಗೆ ಒಟ್ಟು ರೂ.15,000/- ಸಹಾಯಧನವನ್ನು (ಜೂನ್-2023 ರಿಂದ ಮಾರ್ಚ್-2024 ರವರೆಗೆ) ಅವರ ಬ್ಯಾಂಕ್ ಖಾತೆಗೆ, ಆನ್ಲೈನ್ ಮೂಲಕ ಜಮಾ (Bank Account)ಮಾಡಲಾಗುತ್ತದೆ.
ವಿದ್ಯಾಸಿರಿ ವಿದ್ಯಾರ್ಥಿವೇತನದ ವಿವರಗಳು:
ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಪ್ರತಿ ತಿಂಗಳಿಗೆ ರೂ.1500/-ರಂತೆ, ಶೈಕ್ಷಣಿಕ ಅವಧಿಯಲ್ಲಿ ಪ್ರತಿ ವರ್ಷ 10 ತಿಂಗಳಿಗೆ ಒಟ್ಟು ರೂ.15,000/- ಸಹಾಯಧನವನ್ನು, ವಿದ್ಯಾರ್ಥಿಗಳು ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಇರುವ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗೆ, ಆನ್ಲೈನ್ ಮೂಲಕ ಜಮಾ ಮಾಡಲಾಗುವುದು.
ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಬೇಕಾದ ಅರ್ಹತೆಗಳು :
- ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅಭ್ಯರ್ಥಿಯು ಹಿಂದುಳಿದ ವರ್ಗದ ವರ್ಗಕ್ಕೆ ಸೇರಿರಬೇಕು ಮತ್ತು ಪುರಾವೆಯಾಗಿ ಮಾನ್ಯವಾದ ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು. SC ST OBC EBC ಯಂತಹ ಮೀಸಲು ವರ್ಗಕ್ಕೆ ಸೇರಿದವರಾಗಿರಬೇಕು.
- 2A, 3A, ಮತ್ತು 3B ಯೋಜನೆಗಳ OBC EBC ಅಡಿಯಲ್ಲಿ ಅಭ್ಯರ್ಥಿಗಳ ವಾರ್ಷಿಕ ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ INR 1,00,000 ಮೀರಬಾರದು. ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ಆದಾಯವು ಎಲ್ಲಾ ಮೂಲಗಳಿಂದ ರೂ.2.50 ಲಕ್ಷ ಮೀರಬಾರದು
- ಕರ್ನಾಟಕದಲ್ಲಿ ಕನಿಷ್ಠ 7 ವರ್ಷ ಓದಿರಬೇಕು. ಕಾಲೇಜಿನಲ್ಲಿ ಕನಿಷ್ಠ 75% ಹಾಜರಾತಿಯನ್ನು ಹೊಂದಿರಬೇಕು.
- ಕರ್ನಾಟಕದ ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುವ, ಸರ್ಕಾರಿ / ಸ್ಥಳೀಯ ಸಂಸ್ಥೆ/ ಅನುದಾನಿತ
ಸಂಸ್ಥೆಗಳು / ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ – ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು - ವಿದ್ಯಾರ್ಥಿಗಳು. ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ, ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ-ಇವುಗಳಲ್ಲಿ ಯಾವುದಾದರೂ ಒಂದು ಸೌಲಭ್ಯಕ್ಕೆ ಮಾತ್ರ ಅರ್ಹರಿರುತ್ತಾರೆ.
- ಯಾವುದೇ ಇಲಾಖೆಯ ಸರ್ಕಾರಿ / ಸರ್ಕಾರಿ ಅನುದಾನಿತ ವಿದ್ಯಾರ್ಥಿನಿಲಯ / ವಸತಿ ಕಾಲೇಜುಗಳಲ್ಲಿ, ಪ್ರವೇಶ ದೊರೆಯದ ಹಾಗೂ ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ, ವಿದ್ಯಾಸಿರಿ- ಊಟ ಮತ್ತು ವಸತಿ ಕಾರ್ಯಕ್ರಮದಲ್ಲಿ ಮಂಜೂರಾತಿ ನೀಡಲಾಗುವುದು.
- ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು ಹಾಗೂ ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಠ 5 ಕಿ.ಮೀ. ದೂರದವರಾಗಿರಬೇಕು. ಆದರೆ, ವಿದ್ಯಾರ್ಥಿಯ ಸ್ವಂತ ಸ್ಥಳ, ನಗರ/ಪಟ್ಟಣ ಆಗಿದ್ದು, ಅವರು ಬೇರೆ ನಗರ/ಪಟ್ಟಣದಲ್ಲಿ ಇರುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, ಅಂತಹವರು ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ.
- ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತಹವರು ಅರ್ಹರಿರುವುದಿಲ್ಲ.(ಉದಾ: ಬಿ.ಎ ನಂತರ ಬಿ.ಕಾಂ, ಎಂ.ಎ (ಕನ್ನಡ) ನಂತರ ಎಂ.ಎ (ಇಂಗ್ಲೀಷ್), ಬಿ.ಇಡ್ ನಂತರ ಎಲ್.ಎಲ್.ಬಿ, ಇತ್ಯಾದಿಗಳಿಗೆ ಪ್ರವೇಶ ಪಡೆದಿದ್ದಲ್ಲಿ)
ವಿದ್ಯಾ ವೇತನದ ಮೊತ್ತ :
ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಪ್ರತಿ ತಿಂಗಳಿಗೆ ರೂ.1500/-ರಂತೆ, ಶೈಕ್ಷಣಿಕ ಅವಧಿಯಲ್ಲಿ ಪ್ರತಿ ವರ್ಷ 10 ತಿಂಗಳಿಗೆ ಒಟ್ಟು ರೂ.15,000/- ಸಹಾಯಧನವನ್ನು, ಇತರೆ ನಿಬಂಧನೆಗಳಿಗೊಳಪಟ್ಟು, ವಿದ್ಯಾರ್ಥಿಗಳು ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗೆ, ಆನ್ಲೈನ್ ಮೂಲಕ ಜಮಾ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
- ಪಿಯುಸಿ / ಪದವಿ ಸೆಮಿಸ್ಟರ್ ಅಂಕಪಟ್ಟಿ.
- ಆಧಾರ್ ಕಾರ್ಡ್.
- ಬ್ಯಾಂಕ್ ಪಾಸ್ ಬುಕ್ ಪ್ರತಿ.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
- ಶಾಲಾ ಶುಲ್ಕದ ರಶೀದಿ.
- ನಿವಾಸಿ ದೃಢೀಕರಣ ಪತ್ರ.
ಅರ್ಜಿ ಸಲ್ಲಿಸುವ ವಿಧಾನ :
ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾದವರು, ಆನ್‍ಲೈನ್ ಮೂಲಕ SSP ತಂತ್ರಾಂಶದಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಒಂದು ಸಾರಿ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಹಂತ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ssp.karnataka.gov.in ಗೆ ಭೇಟಿ ನೀಡಿ.
ಹಂತ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಖಾತೆಯನ್ನು ರಚಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3:ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರು ಆಧಾರ್ ನಲ್ಲಿರುವಂತೆ ಇಲ್ಲಿ ನಮೂದಿಸಿ, ಲಿಂಗವನ್ನು ಆಯ್ಕೆ ಮಾಡಿ, ಕ್ಯಾಪ್ಚಾ ಕೊಡನ್ನು ನಮೂದಿಸಿ ಅರ್ಜಿಯನ್ನು ಮುಂದುವರಿಸಿ
ಹಂತ 4: ನಿಮ್ಮ ಪಾಲಕ ಅಥವಾ ಪೋಷಕರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ನಂಬರನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುತ್ತೀರಿ.
ಹಂತ 5: ನಂತರ ಅರ್ಜಿದಾರರು ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ. ಅದನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ಕರ್ನಾಟಕ ಎಸ್‌ಎಸ್‌ಪಿ ವೆಬ್‌ಸೈಟ್‌ಗೆ ಲಾಗಿನ್ ಮಾಡುವುದು ಹೇಗೆ?
ಅರ್ಜಿದಾರರು ನೀವು ಪಡೆದುಕೊಂಡಿರುವ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದು. ನಂತರ ವಿದ್ಯಾರ್ಥಿ ಖಾತೆಯ ಮುಖಪುಟಕ್ಕೆ ಪ್ರವೇಶ ಪಡೆಯುತ್ತೀರಿ. ಆ ಮುಖಪುಟದಲ್ಲಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ವಿವರಗಳಾದ ಆಧಾರ್ ಸಂಖ್ಯೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ ಮತ್ತು NSP ID, FRUIT ID, KUTUMB ID ಯನ್ನು ಭರ್ತಿ ಮಾಡಬೇಕಾಗುತ್ತದೆ. ಎಲ್ಲಾ ಅಗತ್ಯ ವಿವರಗಳನ್ನು ಪರಿಶೀಲಿಸಿದ ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಸಲ್ಲಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ನಂತರ ಅದನ್ನು ಸ್ವೀಕೃತಿ ಚೀಟಿಯೊಂದಿಗೆ ಶಾಲೆಗೆ ಅಥವಾ ಕಾಲೇಜಿಗೆ ಸಲ್ಲಿಸಬೇಕು.
ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪಟ್ಟಿ 2023-24 ವೀಕ್ಷಿಸುವುದ ಹೇಗೆ ?
ಎಸ್‌ಎಸ್‌ಪಿ ಅಧಿಕೃತ ವೆಬ್‌ಸೈಟ್ ನಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿಯನ್ನು ನೀಡಲಾಗಿರುತ್ತದೆ
ಹಂತ1: ಎಸ್‌ಎಸ್‌ಪಿ ಕರ್ನಾಟಕ ವಿದ್ಯಾರ್ಥಿವೇತನದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಲಾಗಿನ್ ಆಗಿ.
ನಂತರ ಸಂರ್ಪೂರ್ಣ ವಿವರ ನಿಮ್ಮ ಪರದೆಯ ಮೇಲೆ ಮೂಡಲಿದೆ.
ಈ ಎಸ್ ಎಸ್ ಪಿ ವಿದ್ಯಾಭ್ಯಾಸನಕ್ಕೆ ಅರ್ಜಿ ಸಲ್ಲಿಸುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದಲ್ಲದೆ ಪೋಷಕರಿಗೂ ಕೂಡ ವಿದ್ಯಾರ್ಥಿಗಳಿಗೆ ಹಣವನ್ನು ಕೊಡುವ ಸಮಸ್ಯೆ ಇರುವುದಿಲ್ಲ. ಹಾಗಾಗಿ ತುಂಬಾ ಅನುಕೂಲವಿರುವಂತಹ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಪೋಷಕ ಬಾಂಧವರಿಗೂ ಶೇರ್ ಮಾಡಿ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.