ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ( Big Boss ) ಸೀಸನ್10 ಈಗಾಗಲೇ ಹಲವಾರು ತಿರುವುಗಳನ್ನು ಕಂಡಿದ್ದು, ದಿನೇ ದಿನೇ ಮನೆಯಲ್ಲಿ ಹೊಸ ಹೊಸ ವಿಚಾರಗಳು ಕೇಳಿಬರುತ್ತಿವೆ. ಹಾಗೆಯೇ ಈ ಸೀಸನ್ ನಲ್ಲಿ ಸ್ಪರ್ಧಿಗಳು ಹಲವು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ವೀಕ್ಷಕರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ. ಬಿಗ್ ಬಾಸ್ ಈಗಾಗಲೇ ಮೂರು ವಾರಗಳನ್ನು ಮುಗಿಸಿ ನಾಲ್ಕನೆಯ ವಾರಕ್ಕೆ ಬರುತ್ತಿದೆ. ಹಾಗೆಯೇ ಬಿಗ್ ಬಾಸ್ ನೀಡಿದ್ದ ಒಂದು ಟಾಸ್ಕ್ ನಲ್ಲಿ ( Task ) ವಿನಯ್ ( Vinay Gowda ) ಅವರನ್ನು ತುಕಾಲಿ ಸಂತು ಕಿಚ್ಚ ಸುದೀಪ್ ಮುಂದೆಯೇ ಹಿಯಾಳಿಸಿ ಮಾತನಾಡಿದ್ದಾರೆ. ಏನಿದು ಸುದ್ದಿ ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ವಿನಯ್ ಗೆ ಯಾರು ಎದುರಾಳಿಗಳು ಇಲ್ವಾ :
ಬಿಗ್ ಬಾಸ್ (Bigg Boss ) ಮನೆಯಲ್ಲಿ ಮೊದಲಿನಿಂದಲೂ ವಿನಯ್ ಅವರು ಉತ್ತಮ ರೀತಿಯಲ್ಲಿ ಆಟ ಆಡಿಕೊಂಡು ಬರುತ್ತಿದ್ದಾರೆ. ಹಾಗೆಯೇ ಇವರನ್ನು ಸುದೀಪ್ ವಾರದ ಪಂಚಾಯಿತಿಯಲ್ಲಿ ಒಂಟಿ ಸಲಗ ಎಂದು ಕರೆದಿದ್ದರು. ಹೀಗೆ ಹೇಳುವ ಮೂಲಕ ಅವರಿಗೆ ಯಾರು ಎದುರಾಳಿಗಳು ಇಲ್ವಾ ಎಂದು ಕಿಚ್ಚ ಪ್ರಶ್ನಿಸಿದ್ದರು. ಆದರೆ ಈಗ ವಿನಯ್ ವಿರುದ್ಧ ಉಳಿದ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು ಏನೆಂದ್ರೆ ಒಂದು ಗಾದೆಯ ಫಲಕವನ್ನ( Board) ಎದುರಾಳಿ ಸ್ಪರ್ಧಿಗೆ ಹಾಕಿ ಸೂಕ್ತ ಕಾರಣವನ್ನ ನೀಡಬೇಕು. ಅದರಂತೆಯೇ ಕಾರ್ತಿಕ್, ನಮ್ರತಾ, ವಿನಯ್ ಸೇರಿದಂತೆ ಹಲವರಿಗೆ ವಿವಿಧ ರೀತಿಯ ಗಾದೆಯ ಫಲಕಗಳು ಸಿಕ್ಕಿವೆ. ಅದರಲ್ಲಿ ವಿನಯ್ ಎಲ್ಲರ ಕಣ್ಣಿಗೆ ಗುರಿಯಾಗಿದ್ದಾರೆ.
ವಿಕೇಂಡ್ ಶೋ( Weekend show ) ನಲ್ಲಿ ಡ್ರೋನ್ ಪ್ರತಾಪ್, ತನಿಷಾ ಮತ್ತು ತುಕಾಲಿ ಸಂತು ವಿನಯ್ ವಿರುದ್ಧ ಮಾತನಾಡಿದ್ದಾರೆ. ಇವರ ಬಗ್ಗೆ ಸಂತು ಬೇಕು ಬೇಕೆಂದು ಕಾಲೆದಿದ್ದಾರೆ. ಅವರಿಗೆ ನೀಡಿದ ಗಾದೆಯ ಫಲಕಕ್ಕೆ ಟಾಂಗ್ ಕೊಟ್ಟು ಕಿಚ್ಚನ ಮುಂದೆ ಹಿಯಾಳಿಸಿದ್ದಾರೆ. ಇಷ್ಟೆಲ್ಲ ಆದರೂ ವಿನಯ್ ಅವರು ಏನು ಹೇಳದೆ ಸುಮ್ನೆ ಇದ್ದಾರೆ.
ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
ಹಾಗೆಯೇ ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು ಇಲ್ಲಾ . ಮತ್ತು ಇನ್ನೊಂದು ವಿಷಯ ಏನೆಂದರೆ ವರ್ತುರ್ ಸಂತೋಷ್ ಕೂಡ ಬಿಗ್ ಬಾಸ್ ಮನೆಯೊಳಗೆ ರಿ ಎಂಟ್ರಿ ( Re Entry) ಕೊಡಲಿದ್ದಾರೆ. ಇದರ ಬಗ್ಗೆ ಪ್ರೇಕ್ಷಕರು ಕಾದು ನೋಡಬೇಕು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ