ಚೀನಾದ ಟೆಕ್ ಜೈಂಟ್ ವಿವೋ(Vivo) ತನ್ನ ಹೊಸ S18 ಸರಣಿ(Vivo 18 series) ಯ ಮೂರು ಸ್ಮಾರ್ಟ್‌ಫೋನ್(Smartphone) ಗಳನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ Vivo S18, Vivo S18 pro, ಮತ್ತು Vivo S18e ಎಂಬ ಫೋನ್‌ಗಳು ಸೇರಿವೆ. ಈ ಸ್ಮಾರ್ಟ್ ಫೋನ್ ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿವೋ S18 ಸರಣಿ(Vivo 18 series):
ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಒಂದು ಅನಿವಾರ್ಯ ಭಾಗವಾಗಿದೆ, ಬೆಳಿಗ್ಗೆ ಎದ್ದ ತಕ್ಷಣದಿಂದ ಸ್ಮಾರ್ಟ್ ಫೋನ್ ಬಳಕೆ ಆರಂಭವಾಗುತ್ತದೆ ಮತ್ತು ದಿನದ ಅಂತ್ಯದೊಂದಿಗೆ ಕೊನೆಗೊಳ್ಳುತ್ತದೆ. ಜನರಲ್ಲಿ ಸ್ಮಾರ್ಟ್ ಫೋನ್ ಬೇಡಿಕೆ ಹೆಚ್ಚಾಗುತ್ತಿದಂತೆ ಕಂಪನಿಗಳು ಸಹ ತನ್ನ ಹೊಸ ಹೊಸ ಟೆಕ್ನಾಲಜಿ ಬಳಸಿಕೊಂಡು, ಹೊಸ ಮತ್ತು ಉತ್ತಮ ವರ್ಷನ್ ಸ್ಮಾರ್ಟ್ ಫೋನ್ಗಳು ಬಿಡುಗಡೆ ಮಾಡುತ್ತಿವೆ. ಹೀಗೆಯೇ, ಚೀನಾದ ಟೆಕ್ ಜೈಂಟ್ ವಿವೋ(Vivo) ತನ್ನ ಹೊಸ S18 ಸರಣಿ(Vivo 18 series) ಯ ಮೂರು ಸ್ಮಾರ್ಟ್‌ಫೋನ್‌ಗಳನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ Vivo S18, Vivo S18 pro, ಮತ್ತು Vivo S18e ಎಂಬ ಸ್ಮಾರ್ಟ್ ಫೋನ್‌ಗಳು ಸೇರಿವೆ.
Vivo 18 Series ಯನ್ನು ಜಾಗತಿಕವಾಗಿ ಮತ್ತು ಭಾರತದಲ್ಲಿ ವಿವೋ V30 ಮತ್ತು ವಿವೋ V30 ಪ್ರೊ ಎಂದು ಮರುಬ್ರಾಂಡ್ ಮಾಡಲು ನಿರೀಕ್ಷಿಸುತ್ತಿದ್ದಾರೆ. ಹೊಸ ವಿವೋ S18 ಡಿಸೆಂಬರ್ 22 ರಿಂದ ಮಾರಾಟವಾಗಲಿದೆ. ಇನ್ನು, ವಿವೋ S18e ಮತ್ತು S18 ಪ್ರೊ ಜನವರಿ 13, 2024 ರಿಂದ ಲಭ್ಯವಿರುತ್ತದೆ. ಹೀಗಿರುವಾಗ, ಈ ಸ್ಮಾರ್ಟ್ ಫೋನಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವೋ S18
ವಿವೋ S18 ಫೋನ್ 6.43 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 1080×2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ವಿವೋ S18 ಪ್ರೊ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಮೂಲಕ Immortalis-G715 GPU ಜೊತೆ ಬರಲಿದೆ.
ಇದು 8GB ಅಥವಾ 12GB RAM ಮತ್ತು 128GB ಅಥವಾ 256GB ಸಂಗ್ರಹಣೆಯನ್ನು ಹೊಂದಿದೆ.
ಫೋನ್‌ನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮಕ್ರೋ ಕ್ಯಾಮೆರಾ ಇದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.
ಫೋನ್ 5000 mAh ಬ್ಯಾಟರಿ ಹೊಂದಿದೆ. ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ.
ಇನ್ನು ಹೆಚ್ಚಿನದಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ಟೀರಿಯೋ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ಮತ್ತು IP54 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧ ಇದೆ. ಇನ್ನು ಕನೆಕ್ಷವಿಟಿಗಾಗಿ 5G SA/NSA, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್, GPS, USB ಟೈಪ್-C, ಮತ್ತು NFC ಯನ್ನು ಒಳಗೊಂಡಿದೆ.
ವಿವೋ S18 ಪ್ರೊ
ವಿವೋ S18 ಪ್ರೊ ಫೋನ್ 6.78 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 1440×3200 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ವಿವೋ S18 ಪ್ರೊ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಮೂಲಕ Immortalis-G715 GPU ಜೊತೆ ಬರಲಿದೆ. ಇದು 8GB ಅಥವಾ 12GB RAM ಮತ್ತು 128GB ಅಥವಾ 256GB ಸಂಗ್ರಹಣೆಯನ್ನು ಹೊಂದಿದೆ.
ಫೋನ್‌ನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 12MP ಟೆಲಿಫೋಟೋ ಕ್ಯಾಮೆರಾ ಇದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.
ಫೋನ್ 5000 mAh ಬ್ಯಾಟರಿ ಹೊಂದಿದೆ. ಇದು 80W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ.
ಇನ್ನು ಹೆಚ್ಚಿನದಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ಟೀರಿಯೋ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ಮತ್ತು IP54 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧ ಇದೆ. ಇನ್ನು ಕನೆಕ್ಷವಿಟಿಗಾಗಿ 5G SA/NSA, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್, GPS, USB ಟೈಪ್-C, ಮತ್ತು NFC ಯನ್ನು ಒಳಗೊಂಡಿದೆ.
ವಿವೋ S18e
ವಿವೋ S18e ಫೋನ್ 6.67 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 1080×2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7200 4nm ಪ್ರೊಸೆಸರ್ Mali-G610 MC4 GPU ನಿಂದ ಚಾಲಿತವಾಗಿದೆ.
ಇದು 8GB RAM ಮತ್ತು 128GB ಸಂಗ್ರಹಣೆಯನ್ನು ಹೊಂದಿದೆ.
ಫೋನ್‌ನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮಕ್ರೋ ಕ್ಯಾಮೆರಾ ಇದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ.
ಇದು 80 W ವೇಗದ ಚಾರ್ಜಿಂಗ್‌ನೊಂದಿಗೆ ಫೋನ್ 4,600mAh ಬ್ಯಾಟರಿ ಹೊಂದಿದೆ.
ಇನ್ನು ಹೆಚ್ಚಿನದಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಸ್ಟೀರಿಯೋ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ, ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಒಳಗೊಂಡಿದೆ.
ಲಭ್ಯತೆ ಮತ್ತು ಬೆಲೆ :
ವಿವೋ S18:
ವಿವೋ S18 8GB+256GB ಸ್ಟೋರೇಜ್ ರೂಪಾಂತರಕ್ಕೆ RMB 2299 (ಸುಮಾರು 27,300 ರೂ.),
12GB+256GB ರೂಪಾಂತರಕ್ಕೆRMB 2599 (ಸುಮಾರು ರೂ. 30,400),
16GB + 512GB ಆಯ್ಕೆಗೆ RMB 2999 (ಸುಮಾರು 35,700 ರೂ.)
ವಿವೋ S18 ಪ್ರೊ:
ವಿವೋ S18 ಪ್ರೊ 12GB+256GB ರೂಪಾಂತರಕ್ಕೆRMB 3199 (38,000 ರೂ.),
16GB+256GB ರೂಪಾಂತರಕ್ಕೆ RMB 3499 (ಸುಮಾರು 41,600 ರೂ.)
16GB+512GB ರೂಪಾಂತರಕ್ಕೆRMB 3699 (ಸುಮಾರು 44,000 ರೂ.)
ವಿವೋ S18e:
ವಿವೋ S18e ಫೋನಿನ 12GB+256GB ರೂಪಾಂತರಕ್ಕೆ RMB 2099 (ಸುಮಾರು 25,000 ರೂ. )
12GB+512GB ರೂಪಾಂತರಕ್ಕೆ RMB 2299 (ಸುಮಾರು ರೂ. 27,300)
ಇಂತಹ ಉತ್ತಮ ಸ್ಮಾರ್ಟ್ ಫೋನ್ ಗಳ ಕುರಿತು ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.