Vivo 5G: ಅತಿ ಕಡಿಮೆ ಬೆಲೆಗೆ  ವಿವದ ಹೊಸ 5G ಫೋನ್ ಭರ್ಜರಿ ಎಂಟ್ರಿ !ಇಲ್ಲಿದೆ ಡೀಟೇಲ್ಸ್

IMG 20240621 WA0002

ವಿವೋ ಕಂಪನಿಯ V ಸರಣಿಯ ಅತೀ ಕಡಿಮೆ ಬೆಲೆಯ ಹೊಚ್ಚ ಹೊಸ ಸ್ಮಾರ್ಟ್ ಫೋನ್!

ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳನ್ನು ಕಾಣುತ್ತೇವೆ. ಪ್ರತಿಯೊಂದು ಬ್ರ್ಯಾಂಡ್ ನಸ್ಮಾರ್ಟ್ ಫೋನ್ ಗಳು ವಿವಿಧ ರೀತಿಯ ವೈಶಿಷ್ಟಗಳನ್ನು ಹೊಂದಿದ್ದು, ಹಗ್ಗದ ಬೆಲೆಯಲ್ಲಿ ಲಭ್ಯವಿವೆ. ತಂತ್ರಜ್ಞಾನ ಬಳಸಿಕೊಂಡು ಇಂದು ಮಾರುಕಟ್ಟೆಗೆ ಉತ್ತಮ ರೀತಿಯ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಎಲ್ಲಾ ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳು ವಿವಿಧ ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತವೆ. ಪ್ರತಿಯೊಂದು ಬ್ರ್ಯಾಂಡ್  ನ ಸ್ಮಾರ್ಟ್ ಫೋನ್ ಗಳು ತನ್ನದೇ ಆದ ಶೈಲಿಯನ್ನು ಹೊಂದಿರುತ್ತದೆ. ಇಂತಹ ಸ್ಮಾರ್ಟ್ ಫೋನ್ ಕಂಪನಿಗಳಲ್ಲಿ ವಿವೋ (Vivo) ಕೂಡ ಒಂದು. ವಿವೋ ಕಂಪನಿಯು ಹಲವಾರು ರೀತಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಹಾಗೆ ಇದೀಗ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಿವೋ ದ V ಸರಣಿಯ ಸ್ಮಾರ್ಟ್ ಫೋನ್ (V series smart phone) :
vivov40lite5g 1718777032

ಇದೀಗ ವಿವೋ ಕಂಪನಿಯು ಬಿಡುಗಡೆ ಮಾಡುತ್ತಿರುವ ನೂತನ ಸ್ಮಾರ್ಟ್ ಫೋನ್ V ಸರಣಿಯದಾಗಿದ್ದು, ಯುರೋಪ್‌ನಲ್ಲಿ Vivo V40 5G ಮತ್ತು V40 Lite 5G ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ. ಈ ಮೊಬೈಲ್‌ಗಳು ಏನೆಲ್ಲಾ ವಿಶೇಷತೆಗಳನ್ನು ಹೊಂದಿವೆ? ಬೆಲೆ ಎಷ್ಟು? ಎಂಬುದರ ಬಗ್ಗೆ ಈ ಕೆಳಗೆ ತಿಳಿದು ಕೊಳ್ಳೋಣ ಬನ್ನಿ.

vivo V40 5G ಫೀಚರ್ಸ್‌ಗಳ (features) ವಿವರ ಹೀಗಿದೆ :

ಡಿಸ್‌ಪ್ಲೇ (display) :
vivo V40 5G ಸ್ಮಾರ್ಟ್ ಫೋನ್ 6.78 ಇಂಚಿನ (2800×1260 ಪಿಕ್ಸೆಲ್‌ಗಳು) 1.5K AMOLED 20:9 ಡಿಸ್ಪ್ಲೇ ಅನ್ನು ಹೊಂದಿದ್ದು, ಇದರಲ್ಲಿ 144Hz ರಿಫ್ರೆಶ್ ರೇಟ್, 480Hz ಟಚ್ ಸ್ಯಾಂಪ್ಲಿಂಗ್ ದರ, 4500 nits ಗರಿಷ್ಠ ಬ್ರೈಟ್‌ನೆಸ್‌, HDR10+ ಅನ್ನು ಅಳವಡಿಸಲಾಗಿದೆ.

ಪ್ರೊಸೆಸರ್ (processor) :
ಈ ಸ್ಮಾರ್ಟ್ ಫೋನ್ Adreno 720 GPU ಜೊತೆಗೆ Qualcomm Snapdragon 7 Gen 3 (4nm) ನಲ್ಲಿ ಕಾರ್ಯ ನಿರ್ವಹಿಸಲಿದೆ.

ಸ್ಟೋರೇಜ್ (storage) :
ಇದರಲ್ಲಿ ಎರಡು ವೇರಿಯೆಂಟ್ ಗಳನ್ನು ನೀಡಲಾಗಿದ್ದು, 12GB LPDDR4X RAM ಜೊತೆಗೆ 256GB / 512GB ಸ್ಟೋರೇಜ್ ಸ್ಮಾರ್ಟ್ ಫೋನ್ ಪಡೆಯಬಹುದು.

ಕ್ಯಾಮೆರಾ (camera) :
ಈ ಸ್ಮಾರ್ಟ್ ಫೋನ್ ಹಿಂಭಾಗದ ಕ್ಯಾಮೆರಾ 50MP (f/1.88 ದ್ಯುತಿರಂಧ್ರದೊಂದಿಗೆ) , OIS, ZEISS ಆಪ್ಟಿಕ್ಸ್, 50MP ಅಲ್ಟ್ರಾ-ವೈಡ್ , f/2.0 ಅಪರ್ಚರ್, 4K ವಿಡಿಯೋ ರೆಕಾರ್ಡಿಂಗ್ ಅನ್ನು ಹೊಂದಿದೆ.
ಹಾಗೆಯೇ ಇದು 50MP ಸ್ವಯಂ ಫೋಕಸ್ ಮುಂಭಾಗದ (f/2.0 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ (battery) :
80W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿ ಅನ್ನು ಹೊಂದಿದೆ.

ಇತರ ಫಿಚರ್ಸ್ ಗಳು (other features) :
5G SA/NSA, ಡ್ಯುಯಲ್ 4G VoLTE, Wi-Fi 6 802.11 be, Bluetooth 5.4, GPS, BeiDou, GLONASS, Galileo, QZSS, USB Type-C 2.0, NFC Funtouch OS 14 ಜೊತೆಗೆ Android 14
ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು
ಧೂಳು ಮತ್ತು ನೀರು ನಿರೋಧಕ (IP68) ಮುಂತಾದ ವೈಶಿಷ್ಟ್ಯ ಗಳು ಇದರಲ್ಲಿವೆ.

vivo V40 Lite 5G ಫೀಚರ್ಸ್‌ಗಳ ವಿವರ ಹೀಗಿದೆ :

ಡಿಸ್‌ಪ್ಲೇ (Display) :
ಈ ಸ್ಮಾರ್ಟ್ ಫೋನ್ 6.78 ಇಂಚಿನ (2400×1080 ಪಿಕ್ಸೆಲ್‌ಗಳು) FHD+ ಬಾಗಿದ AMOLED 20:9 ಡಿಸ್‌ಪ್ಲೇ, 120Hz ರಿಫ್ರೆಶ್ ದರ, 1300 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.

ಪ್ರೊಸೆಸರ್ (processor) :
ಇದರಲ್ಲಿ ಆಕ್ಟಾ ಕೋರ್ (4x A78 at 2.2GHz+4x A55 at 1.8GHz Kryo CPU) ಸ್ನಾಪ್‌ಡ್ರಾಗನ್ 6 Gen 1 4nm ಮೊಬೈಲ್ ಪ್ಲ್ಯಾಟ್‌ಫಾರ್ಮ್ ಜೊತೆಗೆ Adreno 710 GPU ಆನ್ನು ಅಳವಡಿಸಲಾಗಿದೆ.

ಸ್ಟೋರೇಜ್ (Storage) :
ಈ ಸ್ಮಾರ್ಟ್ ಫೋನ್ ನಲ್ಲಿ ಕೂಡ ಎರಡು ವೇರಿಯೆಂಟ್ ಲಭ್ಯವಿದ್ದು,  8GB LPDDR4X RAM, 256GB UFS ಹೊಂದಿದೆ. ಹಾಗೆಯೇ ಇದರಲ್ಲಿ 2.2 ಸಂಗ್ರಹಣೆ, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ ವ್ಯವಸ್ಥೆ ಇದೆ.

ಕ್ಯಾಮೆರಾ (camera) :
ಈ ಸ್ಮಾರ್ಟ್ ಫೋನ್ 50MP ಹಿಂಬದಿಯ (1/ 1.95″Sony IMX8820 ಸಂವೇದಕದೊಂದಿಗೆ) ಕ್ಯಾಮೆರಾ. ಮತ್ತು f/1.79 ಅಪರ್ಚರ್, LED ಫ್ಲ್ಯಾಷ್, f/2.2 ಅಪರ್ಚರ್‌ನೊಂದಿಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ, f/2.4 ಅಪರ್ಚರ್‌ನೊಂದಿಗೆ 2MP ಮ್ಯಾಕ್ರೋ ಕ್ಯಾಮೆರಾ, 4K ವಿಡಿಯೋ ರೆಕಾರ್ಡಿಂಗ್ ಹೊಂದಿದೆ.
ಹಾಗೆಯೇ 32MP ಮುಂಭಾಗದ (f/2.0 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ ಹೊಂದಿದೆ.

ಬ್ಯಾಟರಿ (battery) :
44W ವೇಗದ ಚಾರ್ಜಿಂಗ್‌ನೊಂದಿಗೆ 5500mAh (ವಿಶಿಷ್ಟ) ಬ್ಯಾಟರಿಯನ್ನು ಹೊಂದಿದೆ.

ಇತರ ಫಿಚರ್ಸ್ ಗಳು (other features) :
5G SA/NSA, ಡ್ಯುಯಲ್ 4G VoLTE, Wi-Fi 6 802.11ac, ಬ್ಲೂಟೂತ್ 5.1, GPS, BeiDou, GLONASS, ಗೆಲಿಲಿಯೋ, QZSS, USB ಟೈಪ್-C 2.0, NFC ಮುಂತಾದ ವಿಶಿಷ್ಟ ಫಿಚರ್ಸ್ ಗಳನ್ನು ಹೊಂದಿದೆ.

V40 5G ಮತ್ತು V40 Lite 5G ಬೆಲೆ (Price) :

vivo V40 5G ಸ್ಟೆಲ್ಲಾರ್ ಸಿಲ್ವರ್ ಮತ್ತು ನೆಬ್ಯುಲಾ ಪರ್ಪಲ್ ಬಣ್ಣಗಳಲ್ಲಿ ಬರುತ್ತದೆ. 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ 53,645 ರೂ. ಆಗಿರುತ್ತದೆ.

ಹಾಗೆಯೇ, vivo V40 Lite 5G ಕ್ಲಾಸಿ ಬ್ರೌನ್ ಅಥವಾ ಡ್ರೀಮಿ ವೈಟ್ ಬಣ್ಣಗಳಲ್ಲಿ ಬರುತ್ತದೆ. ಇದರ ಬೆಲೆ 35,735 ರೂ. ಆಗಿದ್ದು, 12GB + 512GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ ಇನ್ನು ತಿಳಿದು ಬಂದಿಲ್ಲ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!