Vivo Mobiles: ಕಡಿಮೆ ಬೆಲೆಯಲ್ಲಿ Vivo Y58 5G ಮೊಬೈಲ್ ಭರ್ಜರಿ ಎಂಟ್ರಿ! ಇಲ್ಲಿದೆ ಡೀಟೇಲ್ಸ್!

Vivo Y58 5G 1

ಆಕರ್ಷಕ ಮತ್ತು ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ Vivo Y58 5G ಸ್ಮಾರ್ಟ್ ಫೋನ್!

ಎಲ್ಲವೂ ಇಂದು ಮೊಬೈಲ್ ಮಯಾ. ಮೊಬೈಲ್ ಒಂದಿದ್ದರೆ ಸಾಕು ಎಲ್ಲ ಕೆಲಸಗಳು ಅರೆಗಳಿಗೆಯಲ್ಲಿ ಮಾಡಿ ಮುಗಿಸಬಹುದು. ನಮ್ಮ ದಿನನಿತ್ಯದ ಕಾರ್ಯಗಳನ್ನು ನಮ್ಮ ಅಂಗೈಯಲ್ಲಿರುವ ಒಂದು ಪುಟ್ಟ ಸಾಧನದಿಂದ ಮಾಡಿ ಮುಗಿಸುತ್ತೇವೆ. ಅದೆಷ್ಟೋ ಸ್ಮಾರ್ಟ್ ಫೋನ್ ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಯೊಬ್ಬರ ಕೈಯಲ್ಲಿ ಇಂದು ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ದಿನ ಕಳೆದಂತೆ ಹೊಸ ಹೊಸ ತಂತ್ರಜ್ಞಾನಗಳಿಂದ ಅಳವಡಿತಗೊಂಡ ವಿವಿಧ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.ಇಂದು ಸ್ಮಾರ್ಟ್ ಫೋನ್ ಗಳ ಕ್ರೇಜ್ (smartphone craze) ಹೆಚ್ಚಾಗಿದೆ. ವರ್ಷಕ್ಕೊಂದು ಸ್ಮಾರ್ಟ್ ಫೋನನ್ನು ಬದಲಿಸಿಕೊಳ್ಳುವವರು ಇದ್ದಾರೆ. ಹಾಗೆ ನೋಡುವುದಾದರೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಬಹಳ ಪೈಪೋಟಿ ಇದೆ. ತಮ್ಮ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ನನ್ನು ಹೆಚ್ಚು ಜನರು ಕೊಂಡುಕೊಳ್ಳಬೇಕೆಂದು ವಿವಿಧ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ. ವಿವೋ ಸ್ಮಾರ್ಟ್‌ಫೋನ್‌ಗಳು (vivo smartphones) ತನ್ನ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಹಾಗೆ ಇದೀಗ ಹೆಚ್ಚು ಜನಪ್ರಿಯ ಹಾಗೂ ಅನೇಕ ಗ್ರಾಹಕರನ್ನು ಹೊಂದಿರುವ ವಿವೋ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್  ಬಿಡುಗಡೆ ಮಾಡಿದೆ. ಅದು ಯಾವುದು? ಅದರ ವಿಶೇಷತೆಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಿವೋದ ಬಹುನಿರೀಕ್ಷಿತ Y ಸರಣಿಯ (Y series) ಸ್ಮಾರ್ಟ್ ಫೋನ್ Vivo Y58 5G :
1718868424 7289

ವಿವೋ ಸ್ಮಾರ್ಟ್ ಫೋನ್ ಕಂಪೆನಿಯು ಹೆಚ್ಚು ಜನಪ್ರಿಯತೆ ಹೊಂದಿದ್ದು, ಇದೀಗ ವಿವೋ (Vivo) ಭಾರತದಲ್ಲಿ ತನ್ನ ಬಹುನಿರೀಕ್ಷಿತ ‘Y’ ಸರಣಿಯ Vivo Y58 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವಿಶಿಷ್ಟ ವಶಿಷ್ಟತೆಗಳನ್ನು ಹೊಂದಿದ ಈ ಸ್ಮಾರ್ಟ್ ಫೋನ್ ನ ಬಗ್ಗೆ ಈ ಕೆಳಗೆ ತಿಳಿದು ಕೊಳ್ಳೋಣ ಬನ್ನಿ.

ಮೊದಲ ಸೇಲ್‌ನಲ್ಲೇ ಭರ್ಜರಿ ಆಫರ್ (special offers) ನೀಡಿದ ವಿವೋ

ನೀವೇನಾದರೂ ವಿವೋ ಬಿಡುಗಡೆ ಮಾಡಿದ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಬಯಸಿದರೆ, ವಿವೋ ಮೊದಲ ಸೇಲ್ ನಲ್ಲಿ ಭರ್ಜರಿ ಆಫರ್ಸ್ ನೀಡುತ್ತಿದೆ. vivo Y58 5G ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಲಾಂಚ್ ಆಫರ್‌ಗಳನ್ನು ಪಡೆಯಬಹುದು. ಎಸ್‌ಬಿಐ ಕಾರ್ಡ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ ಫಸ್ಟ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕಾರ್ಡ್‌ ಬಳಿಸಿದರೆ 1,500 ರೂ. ಕ್ಯಾಶ್‌ಬ್ಯಾಕ್ ದೊರೆಯುತ್ತದೆ. V Shield ಪ್ರೊಟೆಕ್ಷನ್ ಮೇಲಿನ ಕೊಡುಗೆಗಳ ಜೊತೆಗೆ ದಿನಕ್ಕೆ ಕೇವಲ 35 ರೂಪಾಯಿಗಳ ಬೆಲೆಯಲ್ಲಿ vivo Y58 5G ಅನ್ನು ಪಡೆದುಕೊಳ್ಳಬಹುದು.

ವಿವೋ ಬಿಡುಗಡೆ ಮಾಡಿದ Vivo Y58 5G ಸ್ಮಾರ್ಟ್ ಫೋನ್ ನ ಫೀಚರ್ಸ್‌ ಗಳ (features) ಬಗ್ಗೆ ತಿಳಿದು ಕೊಳ್ಳೋಣ.

ಡಿಸ್‌ಪ್ಲೇ (display) :
ಈ ಸ್ಮಾರ್ಟ್ ಫೋನ್ 6.72 ಇಂಚಿನ (2408×1080 ಪಿಕ್ಸೆಲ್‌ಗಳು) 120Hz ರಿಫ್ರೆಶ್ ರೇಟ್‌ನೊಂದಿಗೆ ಪೂರ್ಣ HD+ LCD ಸ್ಕ್ರೀನ್, 1024 nits ಗರಿಷ್ಠ ಬ್ರೈಟ್‌ನೆಸ್, 83% NTSC ಕಲರ್ ಗ್ಯಾಮಟ್ ಅನ್ನು ಹೊಂದಿದೆ.

ಪ್ರೊಸೆಸರ್ (processor) :
ಇದರಲ್ಲಿ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 Gen 2 4nm  ಬಲಸಲಾಗಿದ್ದು, ಮೊಬೈಲ್ ಪ್ಲಾಟ್‌ಫಾರ್ಮ್ (2.2 GHz x 2 A78-ಆಧಾರಿತ +2GHz x 6 A55-ಆಧಾರಿತ Kryo CPUಗಳು) ಜೊತೆಗೆ Adreno 613 GPU. Funtouch OS 14 ಜೊತೆಗೆ Android 14  ನಲ್ಲಿ ಕಾರ್ಯ ನಿರ್ವಹಿಸಲಿದೆ.

ಸ್ಟೋರೇಜ್ (Storage) :
8GB LPDDR4x RAM, 128GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ( camera) :
ಈ ಸ್ಮಾರ್ಟ್ ಫೋನ್ 50MP (f/1.8 ದ್ಯುತಿರಂಧ್ರದೊಂದಿಗೆ) ಹಿಂಭಾಗದ ಕ್ಯಾಮರಾ, 2MP (f/2.4 ದ್ಯುತಿರಂಧ್ರದೊಂದಿಗೆ) ಪೋರ್ಟ್ರೇಟ್ ಕ್ಯಾಮೆರಾ, LED ಫ್ಲ್ಯಾಷ್ ಒಳಗೊಂಡಿದೆ.
ಹಾಗೆಯೇ ಇದು 8MP (f/2.05 ದ್ಯುತಿರಂಧ್ರದೊಂದಿಗೆ) ನ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ (battery) :
6000mAh ಬ್ಯಾಟರಿ ಜೊತೆಗೆ 44W ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ.

ಇತರ ಫಿಚರ್ಸ್ ಗಳು (other features) :

3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, ಧೂಳು ಮತ್ತು ನೀರು ನಿರೋಧಕ (IP64), ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ. ಹಾಗೂ 5G SA/NSA (n1/n3/n5/n8/n28B/n40/n77/n78 ಬ್ಯಾಂಡ್‌ಗಳು), ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS/ GLONASS/ ಬೀಡೌ, USB Typeou, USB -ಸಿ ದೊರೆಯುತ್ತದೆ.

ಎರಡು ಬಣ್ಣಗಳ (color) ಆಯ್ಕೆಗಳಲ್ಲಿ ಲಭ್ಯವಿದೆ :

vivo Y58 5G ಮೊಬೈಲ್ ಹಿಮಾಲಯನ್ ಬ್ಲೂ (Himalayan Blue) ಮತ್ತು ಸುಂದರಬನ್ಸ್ ಗ್ರೀನ್ (Sundarbans Green) ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

vivo Y58 5G ಸ್ಮಾರ್ಟ್ ಫೋನ್ ನ ಬೆಲೆ (price) :

ಈ ಫೋನ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ 19,499 ರೂ. ಆಗಿರುತ್ತದೆ. vivo Y58 5G ಫೋನ್ ಇಂದಿನಿಂದ Flipkart, vivo India e-Store ಮತ್ತು ಹತ್ತಿರದ ಮೊಬೈಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!