Voter ID: ಹೊಸ ವೋಟರ್ ಐಡಿ & ತಿದ್ದುಪಡಿ ಮೊಬೈಲ್ ನಲ್ಲೆ ಮಾಡಿಕೊಳ್ಳಿ , ಇಲ್ಲಿದೆ ಕಂಪ್ಲೀಟ್ ವಿಡಿಯೋ !

voter ID update and correction

ವೋಟರ್ ಐಡಿ(Voter ID): ಕೆಲವೇ ಹಂತಗಳಲ್ಲಿ ನಿಮ್ಮ ಮನೆಯಿಂದಲೇ ನಿಮ್ಮ ಮತದಾರ ಗುರುತಿನ ಚೀಟಿ(Voter ID)ಯನ್ನು ನವೀಕರಿಸಿ.
ಈ ಪ್ರಕ್ರಿಯೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವೋಟರ್ ಐಡಿಯಾ ನವೀಕರಣ ಈಗ ಆನ್ಲೈನ್ ನಲ್ಲಿ :

ಇಂದು, ಎಲ್ಲವೂ ಆನ್‌ಲೈನ್‌(Online) ನಲ್ಲಿ ಸುಲಭವಾಗಿ ನಡೆಯುತ್ತಿದೆ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗಳು – ಹೀಗೆ ಎಲ್ಲದರಲ್ಲೂ ಆನ್‌ಲೈನ್‌ನ ಪಾತ್ರ ಹೆಚ್ಚುತ್ತಿದೆ. ಮತದಾರರ ಗುರುತಿನ ಚೀಟಿಯ (Voter ID) ನವೀಕರಣವೂ ಸಹ ಇದಕ್ಕೆ ಹೊರತಾಗಿಲ್ಲ. ಆನ್‌ಲೈನ್ ಮೂಲಕ ಮತದಾರರು ತಮ್ಮ ವೋಟರ್ ಐಡಿ ಮಾಹಿತಿಯನ್ನು ನವೀಕರಿಸಬಹುದಾಗಿದೆ.

ಆನ್‌ಲೈನ್ ಮೂಲಕ ವೋಟರ್ ಐಡಿ ನವೀಕರಣ(Voter ID updation)ವು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಶೇಷ ಕೊಡುಗೆ ನೀಡುತ್ತದೆ. ಇದು ಮತದಾರರಿಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಸುಲಭವಾಗುತ್ತದೆ. ಜೊತೆಗೆ, ಇದು ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ನ್ಯಾಯಯುತವಾಗಿಸುತ್ತದೆ.

ಭಾರತದಲ್ಲಿ ಪ್ರಜಾಪ್ರಭುತ್ವ (Democracy)ವನ್ನು ಬಲಪಡಿಸಲು ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ(National Voters Day) ವನ್ನು ಆಚರಿಸಲಾಗುತ್ತದೆ. ಈ ವರ್ಷ 14 ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಈ ದಿನದಂದು, ಚುನಾವಣಾ ಆಯೋಗವು ಮತದಾನದ ಮಹತ್ವ ಮತ್ತು ಮತದಾರರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಮತದಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಮತದಾನದ ಮೂಲಕ ನಾವು ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತೇವೆ. ಆದ್ದರಿಂದ, ಪ್ರತಿಯೊಬ್ಬ ನಾಗರಿಕರೂ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು ಮತ್ತು ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು. ಹೀಗಿರುವಾಗ, ಮತದಾರರ ಐಡಿ ವಿವರಗಳು ಸರಿಯಾಗಿರುವದು ಮುಖ್ಯವಾಗಿದೆ. ಏಕೆಂದರೆ, ಮತದಾನ ಮಾಡಲು ಮತದಾರರ ಐಡಿ ಅಗತ್ಯವಾಗಿರುತ್ತದೆ. ನೀವು ನಿಮ್ಮ ಮತದಾರರ ಐಡಿ ವಿವರಗಳನ್ನು ಸರಳವಾಗಿ ಅಪ್‌ಡೇಟ್ ಮಾಡಲು ಚುನಾವಣಾ ಆಯೋಗದ ವೆಬ್‌ಸೈಟ್‌(Election Commission Website)ನಲ್ಲಿ ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬಹುದು ಅಥವಾ ನಿಮ್ಮ ಸ್ಥಳೀಯ ಚುನಾವಣಾ ಕಚೇರಿಗೆ ಭೇಟಿ ನೀಡುವ ಮೂಲಕ ನವೀಕರಣ ಮಾಡಬಹುದು. ಹಾಗಿದ್ರೆ, ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಹೇಗೆ ಮಾಡಬಹುದು?, ಮತ್ತು ಏನೆಲ್ಲಾ ವಿವರಗಳನ್ನು ಅಪ್ಡೇಟ್ ಮಾಡಬಹುದು ಎಂದು ತಿಳಿದುಕೊಳ್ಳೋಣ.

ಮತದಾನ ಗುರುತಿನ ಚೀಟಿ ನವೀಕರಣ ಈಗ ಮನೆಯಿಂದಲೇ:

ಮತದಾನದ ಹಕ್ಕನ್ನು ಚಲಾಯಿಸಲು, ನಿಮ್ಮ ಮತದಾನದ ಗುರುತಿನ ಚೀಟಿ ನವೀಕೃತವಾಗಿರಬೇಕು. ಲೋಕಸಭಾ ಚುನಾವಣೆ(Loksabha Elections )ಗೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವುದರಿಂದ, ನಿಮ್ಮ ಹೆಸರು ಅಥವಾ ವಿಳಾಸ ಬದಲಾದರೆ ಅದನ್ನು ಈಗಲೇ ಅಪ್‌ಡೇಟ್ ಮಾಡಿ. ಈ ಅಪ್‌ಡೇಟ್ ಪ್ರಕ್ರಿಯೆಯನ್ನು ನಿಮ್ಮ ಸ್ಮಾರ್ಟ್‌ಫೋನ್ (Smartphone) ಅಥವಾ ಲ್ಯಾಪ್‌ಟಾಪ್‌(Laptop)ನಲ್ಲಿ ಮಾಡಬಹುದು. ಮತದಾರರ ಗುರುತಿನ ಚೀಟಿಯಲ್ಲಿ ಆನ್‌ಲೈನ್ ಬದಲಾವಣೆಗಳನ್ನು ಮಾಡಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1. ಮತದಾರರ ಐಡಿ ವಿವರಗಳನ್ನು ನವೀಕರಿಸಲು, ಮೊದಲು ನೀವು ಚುನಾವಣಾ ಆಯೋಗದ ವೆಬ್‌ಸೈಟ್ : https://voterportal.eci.gov.in/ ಅಥವಾ ಮತದಾರರ ಸಹಾಯವಾಣಿ ಆಪ್‌ಗೆ ಭೇಟಿ ನೀಡಬೇಕು.

ಹಂತ 2. ವೆಬ್‌ಸೈಟ್ ಅಥವಾ ಆಪ್‌ನಲ್ಲಿ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ. ನಂತರ, “ಫಾರ್ಮ್ 8A” ಅನ್ನು ಆಯ್ಕೆಮಾಡಿ. ಫಾರ್ಮ್ 8A ಎನ್ನುವುದು ಮತದಾರರ ಐಡಿ ವಿವರಗಳನ್ನು ನವೀಕರಿಸಲು ಬಳಸುವ ಆನ್‌ಲೈನ್ ಫಾರ್ಮ್ ಆಗಿದೆ.

ಹಂತ 3. ಈಗ, ನಿಮ್ಮ ವೈಯಕ್ತಿಕ ಮತ್ತು ವಿಳಾಸದಂತಹ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ. ನೀವು ಮಾಡಲು ಬಯಸುವ ಬದಲಾವಣೆಗಳನ್ನು ಸೂಚಿಸಿ. ನಿಮ್ಮ ಹೊಸ ವಿವರಗಳನ್ನು ಪುರಾವೆ ಮಾಡಲು, ಆಧಾರ್ ಕಾರ್ಡ್(Aadhar card) ಅಥವಾ ಪಾಸ್‌ಪೋರ್ಟ್‌(Pass port)ನಂತಹ ಸಂಬಂಧಿತ ದಾಖಲೆಯನ್ನು ಅಪ್‌ಲೋಡ್ ಮಾಡಲು ಮರೆಯದಿರಿ.

ಹಂತ 4. ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಅರ್ಜಿಯನ್ನು ಸಲ್ಲಿಸುವ ಸಮಯ. ಅರ್ಜಿಯನ್ನು ಆನ್ಲೈನ್ ಸಬ್‌ಮಿಟ್‌ ಮಾಡಿ. ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಉಲ್ಲೇಖ ಸಂಖ್ಯೆ(Reference number)ಯನ್ನು ಪಡೆಯುತ್ತೀರಿ. ಈ ಸಂಖ್ಯೆಯನ್ನು ಬಳಸಿಕೊಂಡು ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್(Track) ಮಾಡಬಹುದು.

ಈ ಮೇಲಿನ ಹಂತಗಳನ್ನು ಅನುಸರಿಸಿ ನೀವು ನಿಮ್ಮ Voter ID ಸುಲಭವಾಗಿ ಮತ್ತು ಸರಳವಾಗಿ ನವೀಕರಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 10-15 ನಿಮಿಷಗಳು ಬೇಕಾಗುತ್ತವೆ.

whatss

ಬದಲಾವಣೆ ಮಾಡಲು ಬೇಕಾಗಿರುವ ಮುಖ್ಯವಾದ ಚುನಾವಣಾ ಆಪ್‌ಗಳು:

ಭಾರತೀಯ ಚುನಾವಣಾ ಆಯೋಗವು (ECI) ನಾಗರಿಕರಿಗೆ ಚುನಾವಣೆ ಸಂಬಂಧಿತ ಮಾಹಿತಿಯನ್ನು ಪಡೆಯಲು ಮತ್ತು ತಮ್ಮ ವೋಟರ್‌ ಐಡಿಗಳಲ್ಲಿ ಬದಲಾವಣೆಗಳನ್ನು ಮಾಡಲು ಸುಲಭಗೊಳಿಸಲು ನಾಲ್ಕು ಆಪ್‌ಗಳನ್ನು ಪರಿಚಯಿಸಿದೆ. ಈ ಆಪ್‌ಗಳು ಈ ಕೆಳಗಿನಂತಿವೆ:

ವೋಟರ್‌ ಹೆಲ್ಪ್‌ಲೈನ್‌ ಆಪ್(Voter Helpline App)
ಈ ಆಪ್‌ ಅನ್ನು ನಿಮ್ಮ ವೋಟರ್‌ ಐಡಿ, ಚುನಾವಣಾ ಪ್ರಕ್ರಿಯೆ ಮತ್ತು ಇತರ ಚುನಾವಣೆ ಸಂಬಂಧಿತ ಮಾಹಿತಿಯನ್ನು ಪಡೆಯಲು ಬಳಸಬಹುದು.

ಸಕ್ಷಮ್ ಆಪ್(Saksham App)
ಈ ಆಪ್‌ ಅನ್ನು ನಿಮ್ಮ ವೋಟರ್‌ ಐಡಿ, ನಿಮ್ಮ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳು ಮತ್ತು ಚುನಾವಣೆ ದಿನಾಂಕಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಬಳಸಬಹುದು. ನೀವು ಈ ಆಪ್‌ನಲ್ಲಿ ನಿಮ್ಮ ವೋಟರ್‌ ಐಡಿ ಸ್ಟೇಟಸ್(Voter ID status)ಅನ್ನು ಪರಿಶೀಲಿಸಬಹುದು ಮತ್ತು ಅಗತ್ಯವಿದ್ದರೆ ಅದನ್ನು ನವೀಕರಿಸಬಹುದು.

cVIGIL ಆಪ್(cVIGIL App)
cVIGIL ಆಪ್‌ ಒಂದು ಮೇಲ್ವಿಚಾರಣಾ ವ್ಯವಸ್ಥೆ ಆಗಿದ್ದು, ಚುನಾವಣಾ ಆಯೋಗದೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್‌ ಮಾಡಬಹುದು.

ವೋಟರ್‌ ಟರ್ನೌಟ್‌ ಆಪ್(Voter Turnout App)
ಈ ಆಪ್‌ ಅನ್ನು ನಿಮ್ಮ ಕ್ಷೇತ್ರದ ಚುನಾವಣಾ ಭಾಗವಹಿಸುವಿಕೆಯ ಮಟ್ಟವನ್ನು ಪರಿಶೀಲಿಸಲು ಬಳಸಬಹುದು. ಇದು ನೈಜ ಸಮಯದ(Real-Time) ಮಾಹಿತಿಯನ್ನು ತಿಳಿಯಲು ಸಹಾಯಮಾಡುತ್ತದೆ .

ಈ ಆಪ್‌ಗಳು ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜನಪ್ರಿಯಗೊಳಿಸಲು ಸಹಾಯ ಮಾಡುತ್ತವೆ. ಈ ಆಪ್‌ಗಳನ್ನು ಬಳಸುವ ಮೂಲಕ, ನಾಗರಿಕರು ತಮ್ಮ ಚುನಾವಣಾ ಹಕ್ಕುಗಳನ್ನು ಚಲಾಯಿಸಲು ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

tel share transformed

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ವಿಧಾನ :

ನೀವು 18 ವರ್ಷದ ಯುವಕ – ಯುವತಿಯರಾಗಿದ್ದು, ಮತದಾನ ಪಟ್ಟಿಯಲ್ಲಿ ಹೊಸದಾಗಿ ನಿಮ್ಮ ಹೆಸರನ್ನು ಸೇರ್ಪಡಿಸಬೇಕೇ?, ವೋಟಿಂಗ್ ಹಕ್ಕನ್ನು ಪಡೆದಿದ್ದರೂ ಸಹ ಮತದಾರ ಪಟ್ಟಿಯಲ್ಲಿ ತಿದ್ದುಪಡಿ ಮಾಡಬೇಕೆ? ಹೀಗಿರುವಾಗ, https://voters.eci.gov.in ವೆಬ್ ಸೈಟ್ (Website)ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕ ಸಲ್ಲಿಸಬಹುದು, ಇಲ್ಲದಿದ್ದರೆ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿ ಅವರೊಂದಿಗೆ ಸಂಪರ್ಕಿಸಬಹುದು.

ಈ ಕೆಳಗಿನ ವಿಡಿಯೋ ನೋಡುವ ಮೂಲಕ ನಿಮ್ಮ ಮೊಬೈಲ್ ಫೋನ್ ಮೂಲಕವೂ ನೀವು ಅರ್ಜಿ ಸಲ್ಲಿಸಬಹುದು, ಸುಮಾರು ಒಂದು ಲಕ್ಷ ಜನ ಈ ವಿಡಿಯೋನ ವೀಕ್ಷಿಸಿ, ಅರ್ಜಿ ಸಲ್ಲಿಸಿದ್ದಾರೆ.

ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ನಿಮ್ಮ ವಿವರಗಳನ್ನು ಪರಿಶೀಲಿಸಲು https://voterportal.eci.gov.in ಗೆ ಭೇಟಿ ನೀಡಿ. ಈ ವೆಬ್ಸೈಟ್ ನಲ್ಲಿ ನಿಮಗೆ ಎಲ್ಲಾ ಮಾಹಿತಿ ಲಭ್ಯವಿರುತ್ತದೆ.

ಈ ಮಾಹಿತಿಯನ್ನುವೋಟರ್ ಐಡಿ ಕಾರ್ಡ್ ಹೊಂದಿರದೆ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!