ಭಾರತದಲ್ಲಿ ತೂಕ ಇಳಿಸುವ ನೂತನ ಔಷಧಿ ಮೌಂಜಾರೊ ಲಭ್ಯ: ಮಧುಮೇಹ ನಿಯಂತ್ರಣಕ್ಕೆ ಹೊಸ ಆಯ್ಕೆ!
ಭಾರತದಲ್ಲಿ ಮಧುಮೇಹ ಮತ್ತು ತೂಕ ಹೆಚ್ಚುವಿಕೆ (Diabetes and weight gain) ಎರಡೂ ದೊಡ್ಡ ಆರೋಗ್ಯ ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ, ಅಮೆರಿಕದ ಬಹುರಾಷ್ಟ್ರೀಯ ಔಷಧ ಕಂಪನಿ ಎಲಿ ಲಿಲ್ಲಿ, ತೂಕ ಇಳಿಸುವ ಮತ್ತು ಶುಗರ್ (Sugar) ನಿಯಂತ್ರಿಸುವ ನೂತನ ಔಷಧ ಮೌಂಜಾರೊವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಯುರೋಪ್ ಮತ್ತು ಅಮೆರಿಕಾದಲ್ಲಿ ಈಗಾಗಲೇ ಈ ಔಷಧಿ ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಭಾರತದಲ್ಲಿ ಮೊದಲ ಬಾರಿಗೆ ಈ ಔಷಧಿ ಲಭ್ಯವಾಗಿದೆ. ಹಾಗಿದ್ದರೆ ಈ ಔಷದಿಯ ಬೆಲೆ ಎಷ್ಟು? ಯಾರೆಲ್ಲಾ ಈ ಔಷಧಿಯನ್ನು ಬಳಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ತೂಕ ಇಳಿಸಲು ಸಹಾಯ ಮಾಡುವ ಔಷಧಿ ಬಳಸುವ ಪ್ರವೃತ್ತಿ ವಿಶ್ವದ ಅನೇಕ ದೇಶಗಳಲ್ಲಿ ಕಂಡುಬರುತ್ತಿದ್ದು, ಇದೀಗ ಈ ಔಷಧಿ ಭಾರತಕ್ಕೂ ಲಗ್ಗೆ ಇಟ್ಟಿದೆ. ಯುರೋಪ್ ಮತ್ತು ಅಮೆರಿಕಾದಲ್ಲಿ ಜನಪ್ರಿಯವಾಗಿರುವ ತೂಕ ಇಳಿಸುವ ಔಷಧಿಗಳನ್ನು ಈಗ ಭಾರತದಲ್ಲಿ ಮೊದಲ ಬಾರಿಗೆ “ಮೌಂಜಾರೊ” (Mounjaro) ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಅಮೆರಿಕಾದ ಬಹುರಾಷ್ಟ್ರೀಯ ಔಷಧ ಕಂಪನಿ ಎಲಿ ಲಿಲ್ಲಿ (Eli Lilly) ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಮಧುಮೇಹ ಮತ್ತು ಜಡತೆಯನ್ನು ನಿಯಂತ್ರಿಸಲು ನೆರವಾಗುವ ಈ ಔಷಧಿಗೆ ಭಾರತೀಯ ಔಷಧ ನಿಯಂತ್ರಣ ಮಂಡಳಿಯಿಂದ (DCGI) ಈಗಾಗಲೇ ಅನುಮೋದನೆ ಲಭಿಸಿದೆ.
ಭಾರತದಲ್ಲಿ ಮೌಂಜಾರೊ ಲಭ್ಯತೆ ಮತ್ತು ಬೆಲೆ (Availability and price) :
ಭಾರತದಲ್ಲಿ ಮೌಂಜಾರೊ ಬಳಸಲು ಔಷಧ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ದೊರೆತಿದೆ. ಈ ಔಷಧದ ಬೆಲೆ ಕೆಳಗಿನಂತಿದೆ:
5 ಮಿಗ್ರಾಂ ಇಂಜೆಕ್ಷನ್ – $50.67 (ಸುಮಾರು 4375 ರೂ.).
2.5 ಮಿಗ್ರಾಂ ಇಂಜೆಕ್ಷನ್ – $40.54 (ಸುಮಾರು 3500 ರೂ.).
ಒಬ್ಬ ವ್ಯಕ್ತಿ ಪ್ರತಿ ತಿಂಗಳು 5 ಮಿಗ್ರಾಂ ಮೌಲ್ಯದ ಇಂಜೆಕ್ಷನ್ ಬಳಸುವುದಾದರೆ, ಅವರ ವೆಚ್ಚ ಸುಮಾರು ₹16,000 ಆಗಬಹುದು. ಆದರೆ ಈ ಬೆಲೆ ವಿಮೆ (Insurance) ಆಧಾರದ ಮೇಲೆ ಬದಲಾಯಿಸಬಹುದು. ಜನಸಾಮಾನ್ಯರಿಗೆ ಇದು ದುಬಾರಿಯಾಗಬಹುದು, ಆದರೆ ಈ ಔಷಧಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ.
ಮೌಂಜಾರೊ ಹೇಗೆ ಕೆಲಸ ಮಾಡುತ್ತದೆ?:
ಡಾ. ಮನಿಷಾ ಅರೋರಾ ಅವರ ಪ್ರಕಾರ, ಮೌಂಜಾರೊ ಎರಡು ಪ್ರಮುಖ ಹಾರ್ಮೋನುಗಳ ಕಾರ್ಯವನ್ನು ಅನುಕರಿಸುತ್ತದೆ:
GLP-1 (Glucagon-Like Peptide-1): ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ ಹಸಿವನ್ನು ಕಡಿಮೆ ಮಾಡುತ್ತದೆ.
GIP (Gastric Inhibitory Polypeptide): ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ.
ವಿದೇಶದಲ್ಲಿ ತೂಕ ಇಳಿಸುವ ಔಷಧಿಯಾಗಿ ಬಳಕೆಯಲ್ಲಿರುವ ಓಜೆಂಪಿಕ್ (Ozempic) ಕೇವಲ GLP-1 ಮೇಲೆ ಪ್ರಭಾವ ಬೀರುತ್ತದೆ. ಆದರೆ, ಈ ಎರಡೂ ಹಾರ್ಮೋನುಗಳು ಒಟ್ಟಿಗೆ ಕೆಲಸ ಮಾಡುವುದರಿಂದ, ಮಧುಮೇಹ ಹಾಗೂ ತೂಕ ಇಳಿಸುವಲ್ಲಿ ಉತ್ತಮ ಪರಿಣಾಮ ಬೀರುತ್ತದೆ. ಇತರ ಔಷಧಿ ಓಜೆಂಪಿಕ್ (Ozempic) ಕೇವಲ GLP-1 ಗೆ ಮಾತ್ರ ಗುರಿಯಾಗಿದ್ದರೆ, ಮೌಂಜಾರೊ ಎರಡೂ ಹಾರ್ಮೋನುಗಳ ಮೇಲೆ ಕಾರ್ಯಗತಗೊಳಿಸುತ್ತದೆ.
ಯಾರು ಈ ಔಷಧಿಯನ್ನು ಬಳಸಬಹುದು?:
ಟೈಪ್ 2 ಮಧುಮೇಹ ಇರುವ ವಯಸ್ಕರು ವೈದ್ಯರ ಸಲಹೆಯ ಮೇರೆಗೆ ಈ ಔಷಧಿಯನ್ನು ಬಳಸಬಹುದು.
ಹೆಚ್ಚು ತೂಕ ಇರುವವರು (BMI 27+ ಅಥವಾ ಅಧಿಕ) ಇದನ್ನು ಬಳಸಬಹುದು.
ಮಧುಮೇಹ ಮತ್ತು ಜಡತೆ ಎರಡರಲ್ಲಿಯೂ ಬಳಲುವವರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಬಹುದು.
ಯಾರು ಈ ಔಷಧಿಯನ್ನು ತೆಗೆದುಕೊಳ್ಳಬಾರದು?:
ಗರ್ಭಿಣಿಯರು (pregnant women’s) ಮತ್ತು ಮಗುವಿಗೆ ಹಾಲುಣಿಸುತ್ತಿರುವವರು.
ಟೈಪ್ 1 ಮಧುಮೇಹ ರೋಗಿಗಳು.
ಮೇದೋಜೀರಕ ಗ್ರಂಥಿ ಅಥವಾ ಥೈರಾಯ್ಡ್ ಕ್ಯಾನ್ಸರ್ (Pancreatic or thyroid cancer) ಇರುವವರು.
ಗಂಭೀರ ಜಠರ (ಅಜೀರ್ಣ, ತೀವ್ರ ಪಿತ್ತಪಾಕ) ಸಮಸ್ಯೆಗಳಿರುವವರು.
ಭಾರತದಲ್ಲಿ ತೂಕ ಇಳಿಸುವ ಔಷಧಿ ಮಾರುಕಟ್ಟೆಗೆ ಬಂದಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು, ಮಧುಮೇಹ ಮತ್ತು ಜಡತೆ ಹೊಂದಿರುವ ರೋಗಿಗಳಿಗೆ ಹೊಸ ಆಶಾಕಿರಣವಾಗಿದೆ. ಆದರೆ, ಈ ಔಷಧಿಯನ್ನು ವೈದ್ಯರ ಮಾರ್ಗದರ್ಶನದಲ್ಲಿ (Under the guidance of a doctor) ಮಾತ್ರ ಬಳಸುವುದು ಸೂಕ್ತ.
ಭಾರತದಲ್ಲಿ ಬೊಜ್ಜು ಮತ್ತು ಮಧುಮೇಹದ ಸಮಸ್ಯೆ ಹೆಚ್ಚು ಇರುವುದರಿಂದ, ಮೌಂಜಾರೊ ಗೆ ಹೆಚ್ಚಿನ ಬೇಡಿಕೆ ಇರಲಿದೆ. ಇದರ ಬಳಕೆ ವೈದ್ಯರ ಸಲಹೆ (Doctor’s advice) ಮೇರೆಗೆ ಮಾತ್ರ ಮಾಡಬೇಕು. ಬೆಲೆ ತುಸು ಹೆಚ್ಚಿನದಾದರೂ, ಆರೋಗ್ಯಕ್ಕೆ ಮಹತ್ವ ನೀಡುವ ಜನರು ಇದನ್ನು ಬಳಸಬಹುದು. ಇನ್ನು, ಮುಂದಿನ ದಿನಗಳಲ್ಲಿ ಈ ಔಷಧಿಯ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.