ಇನ್ನು ಮುಂದೆ ನಿಮ್ಮ ನೆಚ್ಚಿನ ಸೋಶಿಯಲ್ ಮೀಡಿಯಾ (social media), ವಾಟ್ಸಾಪ್ (WhatsApp) ಇರುವುದಿಲ್ಲ! ಏನಿದು? ಇದಕ್ಕೆ ಕಾರಣ ಏನು? ಇಲ್ಲಿದೆ ಪೂರ್ಣ ಮಾಹಿತಿ.
ನಾವು ಇಂದು ಎಲ್ಲಾ ಕೆಲಸಕಾರ್ಯಗಳಿಗೂ ಹಾಗೂ ಮನರಂಜನೆಗಾಗಿ ಸೋಶಿಯಲ್ ಮೀಡಿಯಾ (social media) ವನ್ನು ಹೇರಳವಾಗಿ ಬಳಸುತ್ತಿದ್ದೇವೆ. ಅದರಲ್ಲೂ ವಾಟ್ಸ್ ಆಪ್ (WhatsApp), ಫೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram), ಯೌಟ್ಯೂಬ್ (YouTube) ಹೆಚ್ಚು ಜನಪ್ರಿಯ ಹೊಂದಿರುವ ಹಾಗೂ ಎಲ್ಲರೂ ಬಳಸುತ್ತಿರುವ ಸೋಶಿಯಲ್ ಮೀಡಿಯಾಗಳು. ಆದರೆ ಈ ನೆಚ್ಚಿನ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸ್ ಆಪ್ ಭಾರತವನ್ನು ತೊರೆಯಲು ನಿರ್ಧರಿಸಿದೆ. ಮೆಟಾದ (Meta) ಸೋಶಿಯಲ್ ಮೆಸೇಜಿಂಗ್ ಆಪ್, ವಾಟ್ಸ್ ಆಪ್ ಭಾರತವನ್ನು ತೊರೆಯುವ ಎಚ್ಚರಿಕೆ ನೀಡಿದೆ. ಹಾಗಿದ್ರೆ ವಾಟ್ಸ್ ಆಪ್ ಭಾರತವನ್ನು ತೊರೆಯಲು ಕಾರಣ ಏನಿರಬಹುದು? ಈ ಹೇಳಿಕೆ ಇಷ್ಟೊಂದು ಸಂಚಲನ ಮೂಡಿಸುತ್ತಿರುವ ಕಾರಣ ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಇರಲ್ಲ ಎಂದ ವಾಟ್ಸ್ ಆಪ್:
ಭಾರತದಲ್ಲಿ ಕೋಟ್ಯಾಂತರ ಜನರು ವಾಟ್ಸ್ ಆಪ್ ಬಳಕೆ ಮಾಡುತ್ತಿದಾರೆ. ಹೆಚ್ಚು ಕಡಿಮೆ 400 ಮಿಲಿಯನ್ (400 million) ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್, ತನ್ನ ಬಳಕೆದಾರರ ಹೆಚ್ಚು ಸುರಕ್ಷತೆಯನ್ನು ನೀಡುವಲ್ಲಿ ಎಲ್ಲರ ನಂಬಿಕೆ ಅರ್ಹರಾಗಿರುವ ವಾಟ್ಸ್ ಆಪ್ ಇದೀಗ ಐಟಿ ನಿಯಮದ ಅಡಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ 2021 ರ ಮಾಹಿತಿ ತಂತ್ರಜ್ಞಾನ (technology) (ಐಟಿ) ನಿಯಮದಲ್ಲಿ ವಾಟ್ಸ್ ಆಪ್ ಸೇರಿದಂತೆ ಇತರೆ ಮೆಸೇಜಿಂಗ್ ಆಪ್ ಗಳು (messaging apps) ಸರ್ಕಾರ ಬಯಸಿದಲ್ಲಿ ಯಾವುದೇ ಮೆಸೇಜ್ ಹುಡುಕುವ, ಡಿಕೋಡ್ ಮಾಡುವ ನಿಯಮಗಳನ್ನು ಉಲ್ಲೇಖಿಸಿದೆ.
ದೇಶದ ಭದ್ರತೆಯನ್ನು ಕಾಪಾಡುವ ಸಲುವಲ್ಲಿ ಐಟಿ ನಿಯಮದ ಡಿಜಿಟಲ್ ಮಾಧ್ಯಮ (digital media) ನೀತಿ ಸಂಹಿತೆ ಅಡಿಯಲ್ಲಿ ಯಾವುದೇ ಮೆಸೇಜ್ ಹುಡುಕುವ, ಡಿಕೋಡ್ ಮಾಡುವ ಅನುಮತಿಯನ್ನು ನೀಡುವಂತೆ ಸೂಚಿಸಿತ್ತು. ಇನ್ನು ಇದಕ್ಕೆ ತಿರುಗೇಟು ನೀಡಿದ ಮೆಟಾದ ಸೋಶಿಯಲ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಚಾಟ್ಸ್ (enavripted chat) ಬ್ರೇಕ್ ಮಾಡಲು ನಾವು ತಯಾರಿಲ್ಲ. ಒಂದುವೇಳೆ ನೀವು ನಮ್ಮ ಮೇಲೆ ಹೇರಿಕೆಯನ್ನು ಹಾಕಿದಲ್ಲಿ ನಾವು ಭಾರತದಲ್ಲಿ ಇರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಗೆ (Delhi high court ) ಹೇಳಿದೆ.
ಮೆಸೇಜಿಂಗ್ ಪ್ಲಾಟ್ಫಾರ್ಮ್ (messaging flateform) ಪರವಾಗಿ ಹಾಜರಾದ ವಕೀಲ ತೇಜಸ್ ಕಾರಿಯಾ(advocate Thejas kariya), ಜನರು ತಮ್ಮ ತಮ್ಮ ಗೌಪ್ಯತೆಗಾಗಿ ವಾಟ್ಸಾಪ್ ಅನ್ನು ಬಳಸುತ್ತಾರೆ ಮತ್ತು ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿವೆ ಎಂದು ಹೇಳಿದರು. ಬಹಳ ಹೆಚ್ಚು ಜನ ವಾಟ್ಸ್ ಆಪ್ ಬಳಸುತ್ತಿರುವುದೇ ಸುರಕ್ಷತೆಯ ಸಲುವಾಗಿ. ಹಾಗೂ ಕೋಟ್ಯಾಂತರ ಜನರು ತಮ್ಮ ತಮ್ಮ ವ್ಯವಹಾರಗಳಿಗಾಗಿ ಹೆಚ್ಚು ವಾಟ್ಸ್ ಆಪ್ ಬಳಸುತ್ತಿದ್ದಾರೆ. ಅಲ್ಲದೇ ಭಾರತದಲ್ಲಿ ವಾಟ್ಸ್ ಆಪ್ ನಲ್ಲಿ ಯುಪಿಐ ಪೇಮೆಂಟ್ ಫೀಚರ್ (UPI payment features) ಕೂಡ ಇದೆ.
ಆದ್ದರಿಂದ ಬಳಕೆದಾರರ ನಂಬಿಕೆಯನ್ನು ಕಳೆದುಕೊಳ್ಳುವ ಯಾವುದೇ ನಿಯಮಗಳನ್ನು ನಾವು ಪ್ರಚೋದಿಸುವುದಿಲ್ಲ. ಹಾಗೆ ಒಂದು ವೇಳೆ ಮೆಸೇಜ್ ಟ್ರೇಸಿಂಗ್ ಗೆ ಬಲವಂತ ಪಡಿಸಿದರೆ ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ನಿಲ್ಲಿಸುತ್ತೇವೆ ಎಂದು ಮೆಸೇಜಿಂಗ್ ಪ್ಲಾಟ್ಫಾರ್ಮ್ ಪರವಾಗಿ ಹಾಜರಾದ ವಕೀಲ ತೇಜಸ್ ಕಾರಿಯಾ ಗುರುವಾರ ದೆಹಲಿ ಹೈಕೋರ್ಟ್ ನಲ್ಲಿ ತಮ್ಮ ವಾದವನ್ನು ಮಂಡಿಸಿದ್ದಾರೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ
ಈ ಮಾಹಿತಿಗಳನ್ನು ಓದಿ