ಭಾರತ ಸರ್ಕಾರವು ಆರ್ಥಿಕವಾಗಿ ದುರ್ಬಲ ವಿಧವಾ ಮಹಿಳೆಯರಿಗೆ (Widowed women) ಸಹಾಯ ಮಾಡಲು ವಿಧವಾ ಪಿಂಚಣಿ ಯೋಜನೆಯನ್ನು ನಡೆಸಿಕೊಂಡು ಬರುತ್ತಿದೆ. ಈ ಯೋಜನೆಯ ಮೂಲಕ ಪತಿ ಮರಣಾನಂತರ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ, ಇದರಿಂದ ಅವರು ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಮಹತ್ವ :
ವಿಧವಾ ಮಹಿಳೆಯರು ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಸರ್ಕಾರವು ಈ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ರೂಪಿಸಿದೆ. ರಾಜ್ಯಾಧಾರಿತ ಪಿಂಚಣಿ ಮೊತ್ತವು ವಿಭಿನ್ನವಾಗಿದ್ದು, ಈ ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರು ಉಪಯೋಗ ಪಡೆಯುತ್ತಿದ್ದಾರೆ.
ಪಿಂಚಣಿ ಮೊತ್ತದಲ್ಲಿ ಹೆಚ್ಚಳ:
ಈ ಹಿಂದೆ 500 ರಿಂದ 1000 ರೂಪಾಯಿಗಳ ನಡುವೆ ಪಿಂಚಣಿ ಮೊತ್ತವಿತ್ತು. ಆದರೆ ಇದೀಗ ಈ ಮೊತ್ತವನ್ನು 2000 ರಿಂದ 3000 ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ. ಇದು ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ಸಹಾಯ ಒದಗಿಸಲು ಸಹಾಯ ಮಾಡುತ್ತದೆ.
ಯಾರು ಈ ಯೋಜನೆಯ ಲಾಭ ಪಡೆಯಬಹುದು?
ಮಹಿಳೆಯು ಕನಿಷ್ಠ 18 ವರ್ಷದ ವಯಸ್ಸಿನವಳಾಗಿರಬೇಕು.
ವಾರ್ಷಿಕ ಆದಾಯ ಸರ್ಕಾರ ನಿಗದಿ ಮಾಡಿದ ಮಿತಿಗಿಂತ ಕಡಿಮೆಯಾಗಿರಬೇಕು.
ಬೇರೆ ಯಾವುದೇ ಸರ್ಕಾರಿ ಪಿಂಚಣಿ ಪಡೆಯಬಾರದು.
ದೊಡ್ಡ ಆಸ್ತಿ ಅಥವಾ ಕೃಷಿ ಭೂಮಿ ಹೊಂದಿರಬಾರದು.
ರಾಜ್ಯವಾರು ಪಿಂಚಣಿ ಮೊತ್ತ ಎಷ್ಟು ಹೆಚ್ಚಳ ಆಗಿದೆ ಎಂದು ನೋಡುವುದಾದರೆ :
ಉತ್ತರ ಪ್ರದೇಶ – 500 ಯಿಂದ 1500 ರವರೆಗೆ ಹೆಚ್ಚಳ ಆಗಿದೆ.
ಕರ್ನಾಟಕ – 900 ಯಿಂದ 2200 ರವರೆಗೆ ಹೆಚ್ಚಳ ಆಗಿದೆ.
ಬಿಹಾರ – 600 ಯಿಂದ 2000 ರವರೆಗೆ ಹೆಚ್ಚಳ ಆಗಿದೆ.
ರಾಜಸ್ಥಾನ – 750 ಯಿಂದ 2500 ರವರೆಗೆ ಹೆಚ್ಚಳ ಆಗಿದೆ.
ಮಧ್ಯಪ್ರದೇಶ – 1000 ಯಿಂದ 3000 ರವರೆಗೆ ಹೆಚ್ಚಳ ಆಗಿದೆ.
ಹರಿಯಾಣ – 1200 ಯಿಂದ 2500 ರವರೆಗೆ ಹೆಚ್ಚಳ ಆಗಿದೆ.
ಮಹಾರಾಷ್ಟ್ರ – 800 ಯಿಂದ 2000 ರವರೆಗೆ ಹೆಚ್ಚಳ ಆಗಿದೆ.
ಅರ್ಜಿಗೆ ಅಗತ್ಯ ದಾಖಲೆಗಳು:
ಪತಿಯ ಮರಣ ಪ್ರಮಾಣಪತ್ರ (husbands death certificate)
ಆಧಾರ್ ಕಾರ್ಡ್ (Adhar card)
ಪಡಿತರ ಚೀಟಿ (ration card)
ಮತದಾರರ ಗುರುತಿನ ಚೀಟಿ (voter id)
ಬ್ಯಾಂಕ್ ಪಾಸ್ ಬುಕ್ ಮತ್ತು ಖಾತೆ ವಿವರಗಳು(bank passbook and details)
ವಯಸ್ಸಿನ ಮತ್ತು ಆದಾಯ ಪ್ರಮಾಣಪತ್ರ (Age and income certificate)
ಜಾತಿ ಪ್ರಮಾಣಪತ್ರ (caste certificate)
ಪಾಸ್‌ಪೋರ್ಟ್ ಗಾತ್ರದ ಫೋಟೋ (passport size photo)
ನೋಂದಾಯಿತ ಮೊಬೈಲ್ ಸಂಖ್ಯೆ(registered mobile number)
ಶಾಶ್ವತ ನಿವಾಸ ಪ್ರಮಾಣಪತ್ರ (Permenent adress certificate)
ಅರ್ಹತೆಗಳು:
ಮಹಿಳೆಯು ಬೇರೆ ಯಾವುದೇ ಪಿಂಚಣಿ ಪಡೆಯಬಾರದು.
ಮರುವಿವಾಹವಾದರೆ ಪಿಂಚಣಿ ನಿಲ್ಲುತ್ತದೆ.
ನಿರ್ದಿಷ್ಟ ಆದಾಯ ಮಿತಿಗಿಂತ ಹೆಚ್ಚು ಆದಾಯ ಬಂದರೆ ಪಿಂಚಣಿ ಸ್ಥಗಿತಗೊಳ್ಳುತ್ತದೆ.
ಅರ್ಜಿಯನ್ನು ಹೇಗೆ ಸಲ್ಲಿಸಬಹುದು?
ಅರ್ಜಿಯನ್ನು ನಾಡ ಕಚೇರಿ (https://ajsk.karnataka.gov.in) ಅಥವಾ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಬಹುದು. ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಅನುಮೋದನೆ ದೊರಕಿದ ನಂತರ ಪಿಂಚಣಿ ಲಭಿಸುತ್ತದೆ.
ಕೊನೆಯದಾಗಿ ಹೇಳುವುದಾದರೆ,ವಿಧವಾ ಪಿಂಚಣಿ ಯೋಜನೆ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಧಾರವಾಗಿದ್ದು, ಅವರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತಿದೆ. ಈ ಯೋಜನೆಯ ಅನುಕೂಲಗಳನ್ನು ಬಳಸಿಕೊಂಡು, ತಮ್ಮ ಜೀವನವನ್ನು ಸುಗಮಗೊಳಿಸಬಹುದು.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.